
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.23: ರಾಜ್ಯದ ಸಿಎಂ ಅಧಿಕಾರ ಹಂಚಿಕೆ ವಿಚಾರ ಪಕ್ಷದ ಹೈ ಕಮಾಂಡ್ ಗಮನಕ್ಕಿದೆ. ಎಲ್ಲವೂ ಚರ್ಚೆ ಆಗ್ತಿದೆ. ಇಬ್ಬರಿಗೂ ಏನು ಹೇಳಬೇಕು ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ನಿರ್ಧಾರ ಆಗಿಲ್ಲ ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ತೆಗಿಯುವ ನಿರ್ಧಾರ ಆಗಿಲ್ಲ.. ಬೇರೆಯವರನ್ನ ಸಿಎಂ ಮಾಡುವ ನಿರ್ಧಾರವೂ ಆಗಿಲ್ಲ. ಪವರ್ ಶೇರಿಂಗ್ ಮಾಡೋ ಬಗ್ಗೆ ನಮಗೂ ಗೊತ್ತಿಲ್ಲ. ಅದು ಇಬ್ಬರು ಮೂರು ಜನರ ಮಧ್ಯೆ ಮಾತ್ರ ಮಾತುಕತೆ ಆಗಿದೆ. ಏನು ಮಾತುಕತೆ ಆಗಿದೆ ಅಂತಾ ಅವರಿಗಷ್ಟೇಗೊತ್ತು.ಸಂಧರ್ಭ ಬಂದಾಗ ಎಲ್ಲರಿಗೂ ಗೊತ್ತಾಗಲಿದೆಂದರು.
ಸದ್ಯಕ್ಕೆ ಐದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ.ಎಲ್ಲರೂ ಅದರಲ್ಲಿ ಬ್ಯೂಸಿ ಇದ್ದಾರೆನ್ನುವ ಮೂಲಕ ಪರೋಕ್ಷವಾಗಿ ಅಧಿಕಾರ ಹಂಚಿಕೆ ಮತ್ತಷ್ಟು ವಿಳಂಬ ಎಂದ ನಾಸೀರ್ ಹುಸೇನ್.
.ಎಐ ಸಮಿಟ್ ನಲ್ಲಿ ಪ್ರತಿಭಟನೆ:
ಎಐ ಸಮಿಟ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿ. ಚೈನಾ ಗೂಡ್ಸ್ ತಂದು ನಾವು ತಯಾರು ಮಾಡಿದ್ದೇವೆ ಎಂಬುದು ಯಾವ ಮರ್ಯಾದೆ ಕಳೆದ್ರು ಗಲ್ಗೋಟಿಯಾ ಯುನಿವರ್ಸಿಟಿ ಮಾತ್ರ ಅಲ್ಲ ಇಡೀ ದೇಶನೇ ಗಲ್ಗೋಟಿಯಾ ಆಗಿದೆ.
ನಮ್ಮ ಕೃಷಿ ಕ್ಷೇತ್ರ ಹಾಗೂ ರೈತರನ್ನ ಅಮೇರಿಕಾಗೆ ಒತ್ತೆ ಇಟ್ಟಿದ್ದಾರೆ. ಟ್ರಂಪ್ ಭಾರತ ಎಲ್ಲಿಂದ ಆಯಿಲ್ ಖರೀದಿ ಮಾಡಬೇಕು ಅಂತಾ ಡಿಕ್ಟೇಟ್ ಮಾಡ್ತಿದ್ದಾರೆ. ಕಡಿಮೆ ದರದ ಆಯಿಲ್ ಬಿಟ್ಟು ಹೆಚ್ಚು ಬೆಲೆಯ ಆಯಿಲ್ ಖರೀದಿ ಮಾಡುವಂತೆ ಮಾಡಿದ್ದಾರೆ. ಈ ಬಗ್ಗೆ ಯಾರ ಹತ್ತಿರ ಇವರು ಚರ್ಚೆ ಮಾಡಿದ್ದಾರೆ.
ಬಿಜೆಪಿ ಆ್ಯಂಟಿ ಇಂಡಿಯಾ ಕೆಲಸ ಮಾಡುತ್ತಿದೆ. ನಮ್ಮ ಸಾರ್ವಭೌಮತ್ವವನ್ನು ಎಕಾನಮಿಯನ್ನು ಸರೆಂಡರ್ ಮಾಡ್ತಾ ಇರೋದು ಬಿಜೆಪಿಯವರು. ಹೀಗಾಗಿ ಇದರ ವಿರುದ್ದ ಕಾಂಗ್ರೆಸ್ ಹೊರಾಟ ಮಾಡ್ತಾ ಇದೆಂದರು
ದಲಿತ ಸಿಎಂ:
ರಾಜ್ಯದಲ್ಲಿ ದಲಿತ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ದಲಿತ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಬೇಕು. ಫಸ್ಟಪಾಲ್ ಸಿಎಂ ಬಗ್ಗೆನೇ ( ಬದಲಾವಣೆ ಬಗ್ಗೆಯೇ) ಚರ್ಚೆ ಸಧ್ಯ ಇಲ್ಲ. ಚರ್ಚೆ ಆದ್ರೇ ಹೈಕಮಾಂಡ್ ನಿರ್ಧಾರ ಮಾಡಲಿದೆಂದರು.






























