Home ಜಿಲ್ಲೆ ಮಂಗಳೂರು ಮಂಗಳೂರು ವಿ.ವಿ.| ೬೮.೩೪ ಕೋಟಿ ರೂ. ಕೊರತೆ ಬಜೆಟ್ ಮಂಡನೆ

ಮಂಗಳೂರು ವಿ.ವಿ.| ೬೮.೩೪ ಕೋಟಿ ರೂ. ಕೊರತೆ ಬಜೆಟ್ ಮಂಡನೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ೨೦೨೬-೨೭ನೇ ಸಾಲಿನ ಬಜೆಟ್ ನಲ್ಲಿ ೬೮.೩೪ ಕೋಟಿ ರೂ. ಕೊರತೆಯಾಗಲಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ. ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ ೪ನೇ ಶೈಕ್ಷಣಿಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಉಪ ಕುಲಸಚಿವೆ ಲಲಿತ ಬಜೆಟ್ ಮಂಡಿಸುತ್ತಾ ಈ ಬಾರಿಯ ಮುಂಗಡ ಪತ್ರದಲ್ಲಿ ಒಟ್ಟು ಸ್ವೀಕೃತಿ ೧೯೪.೦೯ ಕೋಟಿ ಅಂದಾಜಿಸಿದ್ದು, ಖರ್ಚು ೨೬೨.೪೩ ಕೋಟಿ ಅಂದಾಜಿಸ ಲಾಗಿದೆ. ಕೊರತೆ ೬೮.೩೪ಕೋಟಿ ಆಗಲಿದೆ. ೨೦೨೫-೨೬ನೇ ಸಾಲಿನಲ್ಲಿ ೩೬.೯೮ ಕೋಟಿ ಕೊರತೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಸಾಲಿನಲ್ಲಿ ೩೧.೩೬ ಕೋಟಿ ಕೊರತೆ ಹೆಚ್ಚಾಗಿರುತ್ತದೆ ಎಂದರು.
ಖರ್ಚು ವಿಭಾಗದಲ್ಲಿ ಮಾಸಿಕ ಪಿಂಚಣಿ, ನಿವೃತ್ತಿ ಸೌಲಭ್ಯಗಳು, ತಾತ್ಕಾಲಿಕ ಸಿಬ್ಬಂದಿಗಳ ವೇತನ, ಹೊರಗುತ್ತಿಗೆ ಸಿಬ್ಬಂದಿಗಳ ವೇತನ, ಅತಿಥಿ ಉಪನ್ಯಾಸ ಜಕರುಗಳ ವೇತನ. ಆಡಳಿತಾತ್ಮಕ ವೆಚ್ಚ, ಘಟಕ ಕಾಲೇಜುಗಳ ವೆಚ್ಚ, ಪರೀಕ್ಷಾ ವೆಚ್ಚ ಹಾಗೂ ಇನ್ನಿತರ ವೆಚ್ಚಗಳು ಸೇರಿವೆ.
ಯೋಜನೆ ಆದಾಯ ೨೦೨೬-೨೭ ಸಾಲಿನಲ್ಲಿ ೫೪.೯೦ ಕೋಟಿ ರೂಪಾಯಿ ಆಗಿರುತ್ತದೆ ಎಂದರು.
೨೦೨೫-೨೬ನೇ ಸಾಲಿನಲ್ಲಿ ಈ ಮೊತ್ತ ೨೮.೭೯ ಕೋಟಿ ಆಗಿದ್ದು, ಈ ಬಾರಿ ೨೬.೧೧ ಕೋಟಿ ಹೆಚ್ಚಾಗಿರುತ್ತದೆ. ಇದರಲ್ಲಿ ಅಭಿವೃದ್ಧಿ ಅನುದಾನ,ಎಸ್ ಸಿಪಿ/ಟಿಎಸ್ ಪಿ ಅನುದಾನ, ಪಿ.ಎಂ.ಉಷಾ ಅನುದಾನ ೧೯.೯೫ ಕೋಟಿ ಸೇರಿದ್ದು, ಇತರೆ ಅನುದಾನ, ಯುಜಿಸಿ, ಜಿಐಎಎನ್ ಕಾರ್ಯಕ್ರಮ, ದತ್ತಿನಿಧಿ ಹಾಗೂ ಪ್ರಾಯೋಜಿತ ಕಾರ್ಯಕ್ರಮಗಳು ಸೇರಿವೆ ಎಂದರು.
ಅಂತರಾಷ್ಟ್ರೀಯ ವಸತಿ ನಿಲಯಕ್ಕೆ ಸಂಬಂಧಿಸಿ ಕೋರ್ಟ್ ನಿರ್ಣಯದಂತೆ ಪಾವತಿಸಬೇಕಾಗಿರುವುದರಿಂದ ಅಂದಾಜು ೩೮.೦೦ ಕೋಟಿ ಮೊತ್ತವು ಸೇರಿದೆ ಮತ್ತು ದತ್ತಿ ನಿಧಿ ಹಾಗೂ ಪ್ರಾಯೋಜಿತ ಕಾರ್ಯಕ್ರಮಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ ಎಂದು ಲಲಿತ ತಿಳಿಸಿದ್ದಾರೆ.
ಕೊರತೆ ಹಾಗೂ ಕೊರತೆಯನ್ನು ಸರಿದೂಗಿಸುವುದು:-ಸರ್ಕಾರದ ಅನುದಾನದಿಂದ ಬಿಡುಗಡೆಯಾಗಿರುವ ಖಾಯಂ ಸಿಬ್ಬಂದಿಗಳ ವೇತನ ಎಚ್ ಆರ್ ಎಂಎಸ್ ಮೂಲಕ ಪಾವತಿಯಾಗು ತ್ತಿರುವುದರಿಂದ ವಿಶ್ವ ವಿದ್ಯಾನಿಲಯಕ್ಕೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಪ್ರೊ.ಧರ್ಮ ವಿವರಿಸಿದರು.
ಪಿಂಚಣಿ ನಿವೃತ್ತಿ ಸೌಲಭ್ಯಕ್ಕಾಗಿ ಬಜೆಟ್ ನಲ್ಲಿ ಶೇ.೪೮ ವೆಚ್ಚ:-
ಮುಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ ಒಟ್ಟು ೪೪೭ ಮಂದಿ ಣಿದಾರರಿದ್ದು, ಅದರಲ್ಲಿ ೩೬೨ ಮಂದಿ ಪಿಂಚಣಿದಾರರು ಹಾಗೂ ಮಂದಿ ಕುಟುಂಬ ಪಿಂಚಣಿ ದಾರರಿದ್ದಾರೆ. ಇವರಿಗೆ ವಾರ್ಷಿಕವಾಗಿ ರೂ. ೩೧.೨೦ ಕೋಟಿ ಪಿಂಚಣಿ/ಕುಟುಂಬ ಪಿಂಚಣಿಗಾಗಿ ವ್ಯಹಿಸಲಾಗುತ್ತಿದೆ ಇದು ಒಟ್ಟು ಬಜೆಟ್ ನ ವೆಚ್ಚದಲ್ಲಿ ಶೇ೪೮ ಪಾಲು ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಆಯವ್ಯಯ ಅಂದಾಜುಗಳನ್ನು ತಯಾರಿಸುವಾಗ ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗಗಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟು ಈ ಹಿಂದೆ ಆಯವ್ಯಯ ಪ್ರಸ್ತಾವನೆಗಳಲ್ಲಿ ಕಂಡುಬಂದಿರುವ ಕೊರತೆಗಳನ್ನು ಗಮನಿಸಿ ಇನ್ನು ಮುಂದೆ ಅವುಗಳ ಕೊರತೆಗಳು (ದುಂದುವೆಚ್ಚ) ಮರುಕಳಿಸದಂತೆ ಜಾಗ್ರತೆ ವಹಿಸಲು ಕ್ರಮಕೈಗೊಳ್ಳಲಾಗಿದೆ. ಸರ್ಕಾರದಿಂದ ಪಡೆಯಬಹುದಾದ ಅನುದಾನ ಹಾಗೂ ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹಿಸಬಹುದಾದ ಆದಾಯವನ್ನು ವ್ಯವಸ್ಥಿತ ರೀತಿಯಲ್ಲಿ ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗಗಳಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಹಾಗೂ ಅನಿವಾರ್ಯವಾದ ತುರ್ತು ಬೇಡಿಕೆಗಳಿಗೆ ಅನುಗುಣವಾಗಿ ಖರ್ಚು-ವೆಚ್ಚಗಳನ್ನು ಪರಿಷ್ಕೃತ ಆಯವ್ಯಯದಲ್ಲಿ ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರೊ.ಧರ್ಮ ತಿಳಿಸಿದ್ದಾರೆ.
ಪಿಂಚಣಿ ಟ್ರಸ್ಟ್ ಫಂಡ್ :-ಮಂಗಳೂರು ವಿಶ್ವವಿದ್ಯಾಲಯ ದಲ್ಲಿ ಪ್ರಥಮ ಬಾರಿಗೆ ಆಂತರಿಕ ಸಂಪನ್ಮೂಲಗಳನ್ನು ಉಳಿಸಿ ಕೊಂಡು ಪಿಂಚಣಿ ಟ್ರಸ್ಟ್ ಫಂಡ್ ನ್ನು ಆರಂಭಿಸಲಾಗಿದೆ ಎಂದು ಪ್ರೊ.ಪಿ. ಎಲ್.ಧರ್ಮ ತಿಳಿಸಿದ್ದಾರೆ.
೨೦೨೬-೨೭ ನೆ ಸಾಲಿಗೆ ಪ್ರಸ್ಟೀಜ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಇನ್ನೋವೇಶನ್ ಜಪ್ಪಿನಮೊಗರು ಎಂಬ ವಿದ್ಯಾಸಂಸ್ಥೆಗೆ ಹೊಸ ಸಂಯೋಜನೆಗೆ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದಿಸ ಲಾಯಿತು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಕಾರ್ಯಕ್ರಮ ನಿಯಂತ್ರಿಸುವ ತಿದ್ದುಪಡಿಗೆ ಸಭೆ ಅನುಮೋದಿಸಿತು.
ಸಭೆಯಲ್ಲಿ ಕುಲಸಚಿವ ಪ್ರೊ.ದೇವೇಂದ್ರಪ್ಪ (ಪರೀಕ್ಷಾಂಗ )ಗಣೇಶ್ ಸಂಜೀವ (ಪ್ರಭಾರ),ಉಪ ಕುಲಸಚಿವೆ ಲಲಿತ ಮೊದಲಾದವರು ಉಪಸ್ಥಿತರಿದ್ದರು.