Home ಜಿಲ್ಲೆ ಮೈಸೂರು ಬೆಟರ್ ಲೈಫ್ ಚಾರಿಟಬಲ್ ಟ್ರಸ್ಟ್‍ನ ವಾರ್ಷಿಕೋತ್ಸವ

ಬೆಟರ್ ಲೈಫ್ ಚಾರಿಟಬಲ್ ಟ್ರಸ್ಟ್‍ನ ವಾರ್ಷಿಕೋತ್ಸವ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.09:-
“ಬೆಟರ್ ಲೈಫ್ ಚಾರಿಟಬಲ್ ಟ್ರಸ್ಟ್”, ವರಕೋಡು ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಿಸುವ ಮುಖಾಂತರ ಐದನೇ ವರ್ಷದ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಉದ್ಘಟಕರಾಗಿ ಭಾಗವಹಿಸಿದ್ದ ಅಹಿಂದ ಜವರಪ್ಪನವರು ಗಿಡಕ್ಕೆ ನೀರು ಎರೆಯುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಗ್ರಾಮೀಣ ಭಾಗದ ಮಕ್ಕಳು ಪಠ್ಯದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಇಂದು ದೊಡ್ಡ ದೊಡ್ಡ ಸಾಧನೆ ಮಾಡಿರುವ ಎಲ್ಲರೂ ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಬಂದವರಾಗಿದ್ದಾರೆ. ಆದರೂ ಆಧುನಿಕ ಜಗತ್ತಿನಲ್ಲಿ ಖಾಸಗೀಕರಣದ ಸೋಂಕಿನಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಲ್ಲಿವೆ. ಇದರ ಬಗ್ಗೆ ಸರ್ಕಾರಗಳು ಹೆಚ್ಚು ಗಮನ ಹರಿಸಬೇಕು. ಸರ್ಕಾರದ ಜೊತೆಗೆ ಈ ತರಹದ ಸರ್ಕಾರೇತರ ಸಂಘಗಳು ಅಥವಾ ಟ್ರಸ್ಟ್ ಗಳು ಸರ್ಕಾರಿ ಶಾಲೆಯ ಮಕ್ಕಳ ಅಭಿವೃದ್ಧಿಗೆ ಶ್ರಮಿಸಿ ದಾಗ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯ. ಇನ್ನು ಹೆಚ್ಚು ಹೆಚ್ಚು ಮಕ್ಕಳು ಸರ್ಕಾರಿ ಶಾಲೆಯ ಕಡೆಗೆ ಒಲವು ತೋರಲು ಸಾಧ್ಯ. ಇದಕ್ಕೆ ಪೆÇೀಷಕರ ಸಹಕಾರವು ಅಗತ್ಯ. ಈಗಾಗಲೇ ವರಕೋಡು ಶಾಲೆಗೆ ಬಹಳಷ್ಟು ಸರ್ಕಾರೇತರ ಸಂಸ್ಥೆಗಳಿಂದ ಅನುದಾನಗಳು ಬಂದು ಒಂದು ಉತ್ತಮ ವಾತಾವರಣ ನಿರ್ಮಾಣವಾಗಿದೆ. ಇದು ಸುತ್ತಮುತ್ತಲಿನ ಶಾಲೆಗಳಿಗೆ ಮಾದರಿಯಾಗಿ ಬೆಳೆಯುತ್ತಲಿದೆ. ಹಾಗಾಗಿ ಮುಖ್ಯೋಪಾಧ್ಯಾಯರಾದ ಶಿವು ಸರ್ ಅವರಿಗೆ ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು. ನಾವು ಕೂಡ ಸಿಎಸ್‍ಆರ್ ಫಂಡನಲ್ಲಿ ಅಗತ್ಯವಿರುವ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟವರಲ್ಲಿ ಮಾತನಾಡಿ ಪ್ರಾಮಾಣಿಕವಾಗಿ ಧರಿಸುತ್ತೇನೆ,” ಎಂದು ತಿಳಿಸಿದರು.
ಮ್ಯಾನೇಜಿಂಗ್ ಟ್ರಸ್ಟಿ ಅವರಾದ ಸವಿತಾ ಎಸ್ ಗೌಡ ಮಾತನಾಡಿ, “ಇತ್ತೀಚಿನ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು ಆರೋಗ್ಯ ಮತ್ತು ಬೌದ್ಧಿಕ ಮಟ್ಟ ಕುಸಿಯುತ್ತಿದೆ. ಹಾಗಾಗಿ ಮಕ್ಕಳು ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಬೇಕು. ಇದರ ಬಗ್ಗೆ ಪೆÇೀಷಕರು ಎಚ್ಚರಿಕೆಯಿಂದ ಇರಬೇಕು,” ಎಂದು ಕರೆ ಕೊಟ್ಟರು. ಟ್ರಸ್ಟಿಗಳು ಹಾಗೂ ಕರುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಬಸವರಾಜು ರವರು,” ಸರ್ಕಾರಿ ಶಾಲೆಯ ಉಳಿವಿಗಾಗಿ ಒಂದು ಅಭಿಯಾನವನ್ನು ನಮ್ಮ ವೇದಿಕೆ ಇಂದಿನಿಂದಲೇ ಕೈಗೊಳ್ಳಲಿದೆ. ಮುಂದಿನ ರೂಪರೇಷೆಗಳನ್ನು ಅಹಿಂದ ಜವರಪ್ಪ ಅಂತವರ ಸಮಾನ ಮನಸ್ಕರ ಜೊತೆಗೂಡಿ ಚರ್ಚಿಸಿ ದೊಡ್ಡ ಮಟ್ಟದಲ್ಲಿ ಚಾಲನೆ ನೀಡುತ್ತೇವೆ ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು”, ಎಂದು ಕರೆಕೊಟ್ಟರು.


ಈ ಸಂದರ್ಭದಲ್ಲಿ ಮಕ್ಕಳ ಮೇಲೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಹಾಗೂ ಅದರ ಪರಿಹಾರದ ಬಗ್ಗೆ ಮಾನಸಗಂಗೋತ್ರಿ ಯ ರಾಜ್ಯಶಾಸ್ತ್ರ ಅತಿಥಿ ಉಪನ್ಯಾಸಕರಾದ ದೇವರಾಜು ಎಸ್ ಎಸ್ ರವರು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಶಾಲೆಯ ನೂರು ಮಕ್ಕಳಿಗೆ ಟ್ರಾಕ್ ಸೂಟ್ ವಿತರಿಸಲಾಯಿತು. ಮತ್ತು ಟ್ರಸ್ಟ್ ನ ಪ್ರಧಾನ ಪೆÇೀಷಕರಾದಂತಹ ಅಚ್ಚಯ್ಯ ಕೆ.ಎನ್ ರವರಿಗೆ ಹಾಗೂ ಅಹಿಂದ ಜವರಪ್ಪ ಮತ್ತು ದೇವರಾಜು ಎಸ್. ಎಸ್ ಮತ್ತು ಸವಿತಾ ಎಸ್ ಗೌಡ ರವರಿಗೆ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಹದೇವಸ್ವಾಮಿ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮಹಾದೇವಮ್ಮ ಹಾಗೂ ಊರಿನ ಯುವ ಮುಖಂಡ ನಿತೇಶ್ ಹಾಗೂ ಗ್ರಾಮದ ಹಿರಿಯರು ಯಜಮಾನರುಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಭಾಗ್ಯ .ಎಸ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಇತರೆ ಪದಾಧಿಕಾರಿಗಳಾದ ಸತೀಶ .ಎಚ್.ಎಂ ಉಪಾಧ್ಯಕ್ಷರಾದ ಅಶ್ವಿನಿ, ಟ್ರಸ್ಟಿಗಳಾದ ಪ್ರದೀಪ್, ಮಂಜುಳಾ, ಪ್ರಶಾಂತಕುಮಾರಿ ಹಾಗೂ ಮಾಧ್ಯಮದವರಾದ ಲೋಕೇಶ್ ಕೆ .ಆರ್. ಪೇಟೆ ಇನ್ನಿತರರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಸಾಲ ಶಿಕ್ಷಕರಾದ ಕುಮಾರ್ರವರು ನಿರ್ವಹಿಸಿದರು ಸಿಬ್ಬಂದಿ ವರ್ಗ ಮತ್ತು ಮಕ್ಕಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.