
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.14: ಪ್ರಾಥಮಿಕಿ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿಯ 2017 ರ ನಿಯಗಳಿಗೆ ತಿದ್ದುಪಡಿ ತರಬೇಕೆಂದು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.
ಸಂಘದ ಜಿಲ್ಲಾ ಅಧ್ಯಕ್ಷ ಸಿ.ನಿಂಗಪ್ಪ, ಪ್ರಧಾನಕಾರ್ಯದರ್ಶಿ ಗುಂಡಪ್ಪನವರ ನಾಗರಾಜ್ ಮತ್ತು ಪದಾಧಿಕಾರಿಗಳು ಎಡಿಸಿ ಮಹಮ್ಮದ್ ಜುಬೇರ ಅವರಿಗೆ ಮನವಿ ಸಲ್ಲಿಸಿದರು.
ಈ ತಿಂಗಳ 25 ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ, ಸೆ.3 ರಿಂದ ಅನಿರ್ಧಿಷ್ಟವಧಿ ಹೋರಾಟಕ್ಕೆ ಇಳಿಯಲಿದೆ. ಶಿಕ್ಷಕರ ದಿನಾಚರಣೆಯೂ ಹೋರಾಟದಲ್ಲಿಯೇ ಆಗಲಿದೆಂದು ಹೇಳಿದ್ದಾರೆ.
ಸಂಘದ ಪದಾಧಿಕಾರಿಗಳಾದ ಕೆ.ವಿರುಪಾಕ್ಷಪ್ಪ, ಜಯಪ್ರಕಾಶ್ ಶಿವಶಂಕರ ಜಿ. ಎಂ, ವೇದಾವತಿ, ಮಧು ಕುಮಾರಿ, ಜಯಪ್ರಕಾಶ್, ವಿರೂಪಾಕ್ಷಪ್ಪ, ತುಕರಾಂ, ಮಾರೆಣ್ಣ, ರಘು, ಹನುಂಮತಪ್ಪ, ಕಂಪ್ಲಿ ದೊಡ್ಡಬಸಪ್ಪ, ತಮ್ಮಣ್ಣ, ಪರುಶುರಾಮ್, ಶ್ರೀಧರ್, ಹನುಮನಗೌಡ, ಮೊದಲಾದವರು ಇದ್ದರು.