Home ಜಿಲ್ಲೆ ಮಂಗಳೂರು ‘ಪುತ್ತೂರ್‍ದ ಜಾತ್ರೆ’ ಆಮಂತ್ರಣ ಬಿಡುಗಡೆ

‘ಪುತ್ತೂರ್‍ದ ಜಾತ್ರೆ’ ಆಮಂತ್ರಣ ಬಿಡುಗಡೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ರವಿವಾರ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.
ಪುತ್ತೂರ್‍ದ ಜಾತ್ರೆ ಎಂದೇ ಖ್ಯಾತಿ ಪಡೆದ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಎ.೧೦ ರಿಂದ ಆರಂಭಗೊಂಡು ಎ.೧೭ ರಂದು ಮಹಾರಥೋತ್ಸವ ನಡೆಯಲಿದೆ. ದೇವರ ನಡೆಯಲ್ಲಿ ಜಾತ್ರೆಯ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಶಾಸಕ ಅಶೋಕ್ ರೈ ಮಾತನಾಡಿ, ಮಹಾಲಿಂಗೇಶ್ವರ ದೇವರ ಜಾತ್ರೆಯನ್ನು ಈ ಬಾರಿಯೂ ಅತ್ಯಂತ ಅದ್ದೂರಿಯಿಂದ, ಯಶಸ್ಸಿಯಾಗಿ ನಡೆಸಲು ಭಕ್ತಕೋಟಿಯ ಸಹಕಾರ ಬೇಕು ಎಂದರು. ಮುಂದಿನ ದಿನಗಳಲ್ಲಿ ದೇವರಿಗೆ ಬಂಗಾರದ ಕವಚದಿಂದ ಶೃಂಗಾರ ಮಾಡಬೇಕೆಂಬ ಕನಸಿದೆ. ಅದಕ್ಕೂ ಸರ್ವ ಭಕ್ತರ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ನಳಿನಿ ಪಿ. ಶೆಟ್ಟಿ, ವಿನಯ ಸುವರ್ಣ, ಪ್ರಧಾನ ಅರ್ಚಕ ವೇ. ಮೂ. ವಸಂತ ಕೆದಿಲಾಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ವ್ಯವಸ್ಥಾಪಕ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.