ದೇವಾಲಯ ಭಾಗ ಬಳಸಿ ಮೌಲಾನ ಮಸೀದಿ ನಿರ್ಮಾಣ: ಸಮೀಕ್ಷೆ

ಇಂದೋರ್,ಫೆ.24:- ಮಧ್ಯಪ್ರದೇಶದ ಧಾರ್‍ನಲ್ಲಿರುವ ಭೋಜ್‍ಶಾಲಾ ಸಂಕೀರ್ಣದಲ್ಲಿರುವ ಕಮಲ್ ಮೌಲಾ ಮಸೀದಿಯನ್ನು ಪ್ರಾಚೀನ ದೇವಾಲಯಗಳ ಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆ ಮಹತ್ವ ನಿರ್ಧಾರಕ್ಕೆ ಬಂದಿದೆ


“ವೈಜ್ಞಾನಿಕ ತನಿಖೆಗಳು, ಸಮೀಕ್ಷೆ ಮತ್ತು ಉತ್ಖನನ, ಪತ್ತೆಯಾದ ಸಂಶೋಧನೆಗಳ ಅಧ್ಯಯನ ಮತ್ತು ವಿಶ್ಲೇಷಣೆ, ವಾಸ್ತುಶಿಲ್ಪದ ಅವಶೇಷಗಳು, ಶಾಸನಗಳು, ಕಲೆ ಮತ್ತು ಶಿಲ್ಪಗಳ ಅಧ್ಯಯನ ಆಧರಿಸಿ” ಇದನ್ನು ನಿರ್ಮಿಸಲಾಗಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ. ಅಸ್ತಿತ್ವದಲ್ಲಿರುವ ರಚನೆಯನ್ನು ಶತಮಾನಗಳ ಹಿಂದೆ ನಿರ್ಮಿಸಲಾಗಿತ್ತು “ಸಮ್ಮಿತಿ, ವಿನ್ಯಾಸ ಅಥವಾ ಏಕರೂಪತೆಗೆ ಹೆಚ್ಚಿನ ಗಮನ ನೀಡದೆ ನಿರ್ಮಿಸಲಾಗಿದೆ” ಎಂದು ಮಧ್ಯಪ್ರದೇಶ ಹೈಕೋರ್ಟ್‍ನ ಇಂದೋರ್ ಹೈಕೋರ್ಟ್‍ಗೆ ಭಾರತೀಯ ಪುರಾತತ್ವ ಶಾಸ್ತ್ರ ಇಲಾಖೆ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ
ಭೋಜ್‍ಶಾಲಾ-ಕಮಲ್ ಮೌಲಾ ಮಸೀದಿ ವಿವಾದದ ಅರ್ಜಿಯ ವಿಚಾರಣೆ ನಡೆಸುವಾಗ, ಪೀಠ ಎಎಸ್‍ಐ ವರದಿಯನ್ನು ಎಲ್ಲಾ ಪಕ್ಷಗಳಿಗೆ ಲಭ್ಯವಾಗುವಂತೆ ಆದೇಶಿಸಿತು. ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಎಲ್ಲಾ ಪಕ್ಷಗಳು ಎರಡು ವಾರಗಳಲ್ಲಿ ಆಕ್ಷೇಪಣೆಗಳು, ಸಲಹೆಗಳು, ಅಭಿಪ್ರಾಯಗಳು ಮತ್ತು ಶಿಫಾರಸುಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದರು, ಮುಂದಿನ ವಿಚಾರಣೆ ಮಾರ್ಚ್ 16 ಕ್ಕೆ ನಿಗದಿಪಡಿಸಲಾಗಿದೆ


ಅರ್ಜಿದಾರರಾದ ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ರಾಜ್ಯ ಉಪಾಧ್ಯಕ್ಷ ಆಶಿಶ್ ಗೋಯಲ್ ಮಾತನಾಡಿ ಹೊರಬಂದಿರುವ ವರದಿಯು ಇಡೀ ರಚನೆಯು ಪರಮಾರ ರಾಜವಂಶದ ಕಾಲದ್ದಾಗಿದೆ ಎಂದು ದೃಢಪಡಿಸುತ್ತದೆ. ಇದನ್ನು ರಾಜ ಭೋಜ್ ಮತ್ತು ಅವರ ಪೂರ್ವಜರು ನಿರ್ಮಿಸಿದ್ದಾರೆ. ಈ ರಚನೆ ಸರಿಸುಮಾರು 950 ರಿಂದ 1,000 ವರ್ಷಗಳಷ್ಟು ಹಳೆಯದು” ಎಂದು ಹೇಳಿದ್ದಾರೆ.
ವರದಿಯು ಹಿಂದೂ ಸಮುದಾಯಕ್ಕೆ ತೀವ್ರ ಉತ್ತೇಜನಕಾರಿಯಾಗಿದೆ. ಶೀಘ್ರದಲ್ಲೇ ಈ ನಿರ್ಣಾಯಕ ಯುದ್ಧವು ಒಂದು ತೀರ್ಮಾನಕ್ಕೆ ಬರಲಿದೆ” ವರದಿಯನ್ನು ಈಗ ತೆರೆಯಲಾಗಿದೆಯೇ ಅಥವಾ ಮೊದಲೇ ತೆರೆಯಲಾಗಿದೆಯೇ ಎಂಬುದು ಮುಖ್ಯವಲ್ಲ. ಭೋಜಶಾಲಾದ ಧಾರ್ಮಿಕ ಸ್ವರೂಪ ಹೇಗಿರುತ್ತದೆ ಎಂಬುದು ಮುಖ್ಯ. ಹಿಂದೂ ಸಮುದಾಯ ವರ್ಷಗಳಿಂದ ಹೋರಾಡುತ್ತಿರುವ ವಿಷಯ ಇದು” ಎಂದು ಮಾಹಿತಿ ನೀಡಿದ್ದಾರೆ


ಮತ್ತೊಬ್ಬ ಅರ್ಜಿದಾರರು. ಭೋಜ್ ಉತ್ಸವ ಸಮಿತಿಯ ಸಂಚಾಲಕ ಅಶೋಕ್ ಜೈನ್, “ಆ ಸ್ಥಳ ಮಸೀದಿಯಾಗಿದ್ದರೆ, ಅದನ್ನು ಅವರಿಗೆ ನೀಡಬೇಕು ಮತ್ತು ಅದು ದೇವಾಲಯವಾಗಿದ್ದರೆ ನಮಗೆ ಬರಬೇಕು ಎಂಬ ಕಲ್ಪನೆಯೊಂದಿಗೆ ನಾವು ಅರ್ಜಿ ಸಲ್ಲಿಸಿದ್ದೇವೆ. ಈಗ ನ್ಯಾಯಾಲಯವು ಎಲ್ಲರಿಗೂ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ನೀಡಿದೆ. ಮುಂದಿನ ವಿಚಾರಣೆಯ ನಂತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ


ಜುಲ್ಫಿಕರ್ ಅಲಿ, ಭುವನ್ ವಿಕ್ರಮ್, ಗೌತಮಿ ಭಟ್ಟಾಚಾರ್ಯ, ಮನೋಜ್ ಕುಮಾರ್ ಕುರ್ಮಿ, ಇಝರ್ ಆಲಂ ಹಶ್ಮಿ, ಅಫ್ತಾಬ್ ಹುಸೇನ್, ಶಂಭೂ ನಾಥ್ ಯಾದವ್ ಮತ್ತು ನೀರಜ್ ಕುಮಾರ್ ಮಿಶ್ರಾ ಅವರ ಕೊಡುಗೆಯೊಂದಿಗೆ ಂSಟ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ತ್ರಿಪಾಠಿ ಅವರು 10 ಸಂಪುಟಗಳಲ್ಲಿ 2,000 ಪುಟಗಳ ವರದಿ ಸಿದ್ಧಪಡಿಸಿದ್ದಾರೆ.
98 ದಿನಗಳ ಸಮೀಕ್ಷೆಯ ಸಮಯದಲ್ಲಿ ತಂಡ ಉತ್ಖನನ, ಅಧ್ಯಯನ ಮತ್ತು ಸಂಶೋಧನೆಗಳನ್ನು ಸಂಗ್ರಹಿಸಲು ಇತ್ತೀಚಿನ ವೈಜ್ಞಾನಿಕ ತಂತ್ರಗಳನ್ನು ಬಳಸಿತು ಮತ್ತು ಅದು ಸರಸ್ವತಿ ದೇವಿಗೆ ಅರ್ಪಿತವಾದ ದೇವಾಲಯವಾಗಿರಬಹುದು ಎಂದು ಸುಳಿವು ನೀಡಿತು.