
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಜು.22:- ನೂರಾರು ಎಕರೆ ಸಾಗುವಳಿ ಜಮೀನನ್ನು ದುರಸ್ಥಿ ಮಾಡಿಸಿಕೊಡುವಂತ್ತೆ ತಹಸೀಲ್ದಾರ್ ರವರಿಗೆ ಮನವಿ ಮಾಡಿದರು ಯಾವುದೇ ಕ್ರಮವಹಿಸದೆ ನಿರ್ಲಕ್ಷವಹಿಸುತ್ತಿದ್ದಾರೆ ಎಂದು ಮುತ್ತೂರು ಗ್ರಾಮದ ಮುಖಂಡ ಮಣಿಯಯ್ಯ ಸಚಿವರ ಮುಂದೆ ಆರೋಪಿಸಿದರು.ಸಚಿವ ಕೆ. ವೆಂಕಟೇಶ್ ರವರು ತಾಲೂಕಿನ ಮುತ್ತೂರು ಗ್ರಾಮ ಪಂಚಾಯಿತಿಯಲ್ಲಿ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ನಂತರ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮುತ್ತೂರು ಗ್ರಾಮದ ಸರ್ವೇ ಸಂಖ್ಯೆ 67ರಲ್ಲಿ 300 ಎಕರೆ ಸಾಗುವಳಿ ಭೂಮಿ ಇದ್ದು ಇದನ್ನು ದುರಸ್ತಿ ಮಾಡಿಕೊಡುವಂತ್ತೆ ಸಾಕಷ್ಟು ಬಾರಿ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಕ್ರಮವಹಿಸದೆ ನಿರ್ಲಕ್ಷವಹಿಸುತ್ತಿದ್ದಾರೆ ಇದರಿಂದಾಗಿ ಭೂ ಮಾಲೀಕರು ವಯಕ್ತಿಕ ದಾಖಲೆ ಮಾಡಿಕೊಳ್ಳಲು ಸಮಸ್ಯೆಯಾಗುತ್ತಿದೆ ಮತ್ತು ಯಾವುದೇ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗದೆ ವ್ಯವಸಾಯಕ್ಕೆ ರೈತರಿಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹ ಮೂರರ್ತಿ ಮಾತನಾಡಿ ಪಟ್ಟಣದ ಕೆ ಎಸ್ ಆರ್ ಟಿಸಿ ಬಸ್ಸ್ ನಿಲ್ದಾಣದಿಂದ ಮುತ್ತೂರು ಗ್ರಾಮಕ್ಕೆ ಸಂಜೆ ವಿದ್ಯಾರ್ಥಿಗಳು ಬರಲು ಸೂಕ್ತ ಸಮಯಕ್ಕೆ ಬಸ್ಸ್ ವ್ಯವಸ್ಥೆ ಇಲ್ಲದೆ ಭಯದ ವಾತಾವರಣದಲ್ಲಿ ಕತ್ತಲಿನಲ್ಲಿ ತೆರಳುವಂತ್ತಾಗಿದೆ.ಅದರಿಂದಾಗಿ ಸಂಜೆ ಶಾಲೆ ಬಿಟ್ಟ ನಂತರ ಸೂಕ್ತ ಸಮಯಕ್ಕೆ ಬಸ್ಸ್ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಆಲಿಸಿದ ಸಚಿವ ಕೆ.ವೆಂಕಟೇಶ್ ಸಾಗುವಳಿ ಹೊಂದಿರುವ ಎಲ್ಲಾ ಜಮೀನುಗಳನ್ನು ಸೂಕ್ತ ದಾಖಲೆಗಳಿದ್ದರೆ ದುರಸ್ಥಿ ಮಾಡಿಕೊಡುವಂತ್ತೆ ಸರ್ಕಾರ ಆದೇಶ ನೀಡಿದೆ.ನಿಮ್ಮ ಜಮೀನಿಗೆ ಇರುವ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದರೆ ದುರಸ್ಥಿ ಮಾಡಲು ಸೂಚಿಸಿದರು. ವಿದ್ಯಾರ್ಥಿಗಳ ಯೋಗಕ್ಷೇಮ ಮುಖ್ಯವಾಗಿರುವುದರಿಂದ್ದ ಸೂಕ್ತ ಬಸ್ಸ್ ವ್ಯವಸ್ಥೆ ಮಾಡಿಸಲು ಕ್ರಮವಹಿಸುವಂತ್ತೆ ಆದೇಶಿಸಿದರು.
ಇದೇ ಸಂದರ್ಭದಲ್ಲಿ ನವಿಲೂರು, ಬೈಲುಕುಪ್ಪೆ ಮತ್ತು ಚಿಕ್ಕ ಹೊಸೂರು ಗ್ರಾಮಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ನಿತೀನ್ ವೆಂಕಟೇಶ್,ಎಂ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಲೋಕೇಶ್,ಗ್ರಾ ಪಂ ಅಧ್ಯಕ್ಷೆ ಅಕ್ಕಯ್ಯಮ್ಮ,ಮಾಜಿ ಜಿ ಪಂ ಸದಸ್ಯ ರೆಹಮತ ಜಾನ್ ಬಾಬು,ಬಸವರಾಜ್, ಮಾಜಿ ತಾ ಪಂ ಅಧ್ಯಕ್ಷೆ ನಿರೂಪ ರಾಜೇಶ್,ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾ ಪಂ ಕಾರ್ಯ ನಿರ್ವಹಕಾಧಿಕಾರಿ ಸುನೀಲ್ ಕುಮಾರ್, ಮೈಮುಲ್ ನಿರ್ದೇಶಕ ಪ್ರಕಾಶ್, ಕ್ಷೇತ್ರ ಶಿಕ್ಷಣಧಿಕಾರಿ ರವಿ ಪ್ರಸನ್ನ, ಅಭಿಯಂತರರಾದ ವೆಂಕಟೇಶ್, ಮಲ್ಲಿಕಾರ್ಜುನ,ಕೃಷ್ಣ ಮೂರ್ತಿ, ದಿನೇಶ್,ಲವ, ಅಹಮದ್, ಪಶು ಇಲಾಖೆ ಸೋಮಯ್ಯ,ತೋಟಗಾರಿಕೆ ಇಲಾಖೆ ಶಶಿಧರ್, ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ದರ್ಶನ್,ಚೆಸ್ಕಾಂ ಬಸವರಾಜ್,ಪೆÇಲೀಸ್ ಸಿಪಿಐ ಗೋವಿಂದ್ ರಾಜ್,ಅರಣ್ಯ ಇಲಾಖೆ ಪದ್ಮ ಶ್ರೀ,ಪಿ ಡಿ ಓ ಸುರೇಶ್ ಸೇರಿದಂತ್ತೆ ಇತರರಿದ್ದರು.