ಡಾ || ಶ್ರೀ ಪಂ ಪುಟ್ಟರಾಜ ಕವಿ ಗವಾಯಿಗಳ 113ನೇ ಜನ್ಮದಿನಾಚರಣೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮಾ.03:  ತಾಲೂಕು ಹಂದಿಹಾಳು ಗ್ರಾಮದಲ್ಲಿ ಶ್ರೀ ಗದುಗಿನ ಗಾನಯೋಗಿಯೆಂದೇ ಪ್ರಖ್ಯಾತರಾದ ಲಿಂಗೈಕ್ಯ ಡಾ || ಶ್ರೀ ಪಂ ಪುಟ್ಟರಾಜ ಕವಿ ಗವಾಯಿಗಳ 113ನೇ ಜನ್ಮದಿನವನ್ನು ಶ್ರೀ ಗುರು ಪಂಡಿತ ಪುಟ್ಟರಾಜ ಸೇವಾ ಸಂಸ್ಥೆ ( ರಿ ) ಹಂದಿಹಾಳು ಇವರಿಂದ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು.

ಡಾ. ಶ್ರೀ ಪಂ ಪುಟ್ಟರಾಜ ಕವಿ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಂಸ್ಥೆಯ ಅಧ್ಯಕ್ಷರು ಈ ಸಂದರ್ಭದಲ್ಲಿ ಮಾತನಾಡಿ ತ್ರಿಭಾಷಾ ಕವಿಯಾಗಿ” ನೂರಾರು ಗ್ರಂಥಗಳನ್ನು ರಚಿಸಿದ್ದಾರೆ ಸಾವಿರಾರು ಅಂದರ ಬಾಳಿನ ಆಶಾಕಿರಣ ಪುಟ್ಟರಾಜರ ಸೇವೆ ಅವಿಸ್ಮರಣೆಯಾವಾದದ್ದು ಇಂದು ಅವರ ಶಿಷ್ಯರು ದೇಶ-ವಿದೇಶಗಳಲ್ಲಿ ಸಂಗೀತ ಸೇವೆ ಸಲ್ಲಿಸುತ್ತಿದ್ದು ಶ್ರೀ ಗದುಗಿನ ವೀರೇಶ್ವರ ಪುಣ್ಯಶ್ರಮವನ್ನು ಬಾನೆತ್ತರಕ್ಕೆ ತೇಲಾಡುವತೆ ಮಾಡಿದ್ದಾರೆ ಅಂಥವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದು ಹೆಮ್ಮೆಯ ವಿಷಯವಾಗಿದೆ ಅವರ ಸಾಧನೆ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಶ್ರೀ ಗುರು ಪಂಡಿತ ಪುಟ್ಟರಾಜ ಸೇವಾ ಸಂಸ್ಥೆ (ರಿ) ಹಂದಿಹಾಳು, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮತ್ತು ಊರಿನ ಗುರು ಹಿರಿಯರು ಶರಣರು ಈ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು