ಛೇಂಬರ್ ಆಫ್ ಕಾಮರ್ಸ್ ವಿಶೇಷ ಸಮನ್ವಯ ಸಮಿತಿ ಸದಸ್ಯರಾಗಿ ತುಕ್ಕ ರಾಜೇಶ್ ನೇಮಕ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಡಿ.13: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಂಸ್ಥೆಯ ವಿಶೇಷ ಸಮನ್ವಯ ಸಮಿತಿ ತಂಡದ ಸದಸ್ಯರನ್ನಾಗಿ ಅನಿಕಾರ್ ಮೇಳದ ತುಕ್ಕ ರಾಜೇಶ್ ಅವರನ್ನು ನೇಮಕ ಮಾಡಿದೆ.

ನೇಮಕದ ಆದೇಶ ನೀಡಿರುವ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಅವ್ವಾರು ಮಂಜುನಾಥ, ಕಾರ್ಯದರ್ಶಿ ಕೆ.ಸಿ.ಸುರೇಶ್ ಅವರು ನಿಮ್ಮನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಿಶೇಷ ಸಮನ್ವಯ ಸಮಿತಿ ತಂಡದ ಸದಸ್ಯರನ್ನಾಗಿ ನೇಮಕ ಮಾಡಿದೆ.

ಸಂಸ್ಥೆಯ ಎಲ್ಲಾ ಸಭೆ, ಸಮ್ಮೇಳನ, ವ್ಯವಹಾರದ ಚರ್ಚಾಕೂಟ ಮತ್ತು ಸಮಾರಂಭಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು. ಜಿಲ್ಲೆಯ ವ್ಯಾಪಾರ ಸಮುದಾಯಗಳನ್ನು ಪ್ರತಿನಿಧಿಸಲು ಮತ್ತು ವ್ಯಾಪಾರ, ಸೇವೆಗಳ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಹಾಗೂ ಸುಧಾರಿಸಲು ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಬೇಕು ಎಂದು ಆಶಿಸಿದ್ದಾರೆ. ತಮ್ಮ ನೇಮಕದ ಬಗ್ಗೆ ತುಕ್ಕ ರಾಜೇಶ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಚೇಂಬರ್ ನ ಕಾರ್ಯಕಾರಿ ಸಮಿತಿ ಸದಸ್ಯ ಎನ್.ನಾಗರಾಜ್, ಟಿ.ಶ್ರೀನಿವಾಸ್ ರಾವ್ ಇದ್ದರು.