
ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ”ಕೊರಗಜ್ಜ” ಚಿತ್ರದ ಜೀ಼ ಮ್ಯೂಸಿಕ್ ಬಿಡುಗಡೆ ಗೊಳಿಸಿದ್ದ ಗುಳಿಗಾ…ಗುಳಿಗಾ…ಹಾಡು ದೇಶಾದ್ಯಂತ ಎಬ್ಬಿಸಿದ ಧೂಳು ಇನ್ನೂ ಹಾರಾಡುತ್ತಿರುವಂತೆಯೇ, ಈಗ ಶ್ರೇಯಾ ಘೋಷಾಲ್ ಜೊತೆ ಅರ್ಮಾನ್ ಮಲಿಕ್ ಹಾಡಿರುವ ಅತ್ಯಂತ ಸುಮಧುರ ಮತ್ತು “ರಿಚ್ ಪೊಯೆಟಿಕ್” ಸಾಲುಗಳುಳ್ಳ , ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ಹಾಡು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ಈ ನಡುವೆ ವಿಶೇಷ ವಿದ್ಯಮಾನವೆಂಬಂತೆ,ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕವಿ ಸುಧೀರ್ ಅತ್ತಾವರ್ ಬರೆದ ಈ ಹಾಡಿನ ಕಾವ್ಯಮಯ ಸಾಹಿತ್ಯವನ್ನು ಚಿತ್ರತಂಡವು ಮೊದಲು ಬಿಡುಗಡೆಗೊಳಿಸಿದೆ. ಈ ಅತ್ಯಾಕರ್ಷಕ ನವ್ಯ ಸಾಹಿತ್ಯದ ಸಾಲುಗಳಿಗೆ ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ರಾಗ ಕಂಪೋಸ್ ಮಾಡಿದ್ದಾರೆ.

























