
(ಸಂಜೆವಾಣಿ ವಾರ್ತೆ)
ಬಳ್ಳಾರಿ. ಜು.12: ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಇಂದು ಕೆಇಬಿ ಪಿಂಚಣಿದಾರರ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನವೃತ್ತ ಅಧಿಕಾರಿ ಮತ್ತು ಕಾರ್ಮಿಕ ಮುಖಂಡ ಜಿ. ರುದ್ರಪ್ಪ ಅವರಿಗೆ “ಕಾಯಕ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ್ ಅವರು ಪ್ರಶಸ್ತಿ ನೀಡಿ ಗೌರವಿಸಿ, 80ನೇ ವರ್ಷದಲ್ಲಿಯೂ 40 ವರ್ಷದ ಹುಡುಗರಂತೆ ಸಮಾಜ, ಕಾರ್ಮಿಕರ ಸೇವೆ, ಪ್ರತಿಯೊಂದು ಸಭೆಯಲ್ಲಿ ದೇವರ ನಾಮಗಳನ್ನು ಹಾಡುತ್ತಾ ತುಂಬಾ ಲವಲವಿಕೆಯಿಂದ ಯಾವ ವಾಹನವೂ ಇಲ್ಲದೆ ಬಸ್ ಗಳಲ್ಲಿಯೇ ಪ್ರಯಾಣಿಸುತ್ತ ಯುಕರಂತೆ ಇದ್ದಾರೆ. ಎಲ್ಲರ ಪ್ರೀತಿಯನ್ನು ಗಳಿಸಿದ ರುದ್ರಪ್ಪನವರು ನೇರ ದಿಟ್ಟ ನಿರಂತರ ಹೋರಾಟದಿಂದ ಬಂದವರು ಎಂದರು.
ಈ ಸಂದರ್ಭದಲ್ಲಿ ಪಿಂಚಣಿ ಸಂಘದಾರರ ಸಂಘದ ಕಾರ್ಯದರ್ಶಿ ಹೊನ್ನೂರಪ್ಪ ಸ್ವಾಗತಿಸಿ ವಂದಿಸಿದರು, ವಿಶ್ವನಾಥ್ ರಲ ಅಧ್ಯಕ್ಷ ಭಾಷಣ ಮಾಡಿದರು, ಬಂಡೆಪ್ಪನವರು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಮುಖಂಡರಾದ ಶಿವಲಿಂಗಂ ಕೆ. ಗೂಳಪ್ಪ, ಬಹದ್ದೂರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು