ಕೃತಕ ಬುದ್ಧಿಮತ್ತೆಯ ಸಲಹೆ ಜೊತೆ ತಾಂತ್ರಿಕ ನೈಪುಣ್ಯತೆ ಬೆಳಸಿಕೊಳ್ಳಲು ಕರೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಡಿ.13:    ಕೃತಕ ಬುದ್ಧಿಮತ್ತೆ ನೀಡುವ ಸಲಹೆಗಳೊಂದಿಗೆ ತಾಂತ್ರಿಕ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಬದುಕಿನಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಬೇಕು ಎಂದು

 ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯವಸ್ಥಾಪನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುನೀಲಕುಮಾರ್ ಅಭಿಪ್ರಾಯಪಟ್ಟರು.

ಅವರು ನಗರದ ಸರಳಾದೇವಿ  ಕಾಲೇಜಿನಲ್ಲಿ  ವ್ಯವಹಾರಿಕ ಅಧ್ಯಯನ ವಿಭಾಗದಿಂದ ಆಯೋಜಿಸಿದ್ದ ‘ ವ್ಯವಸ್ಥಾಪಕರಿಗೆ ವ್ಯಾಪಾರ ವಿಶ್ಲೇಷಣೆಯ ಪ್ರಾಮುಖ್ಯತೆ ‘ರೂಸಾ ಅನುದಾನಿತ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಡಾ.ಕೆ.ದಿನೇಶ್ ಹಣಕಾಸು ವಿಶ್ಲೇಷಣೆಯ ಬಗೆಗೆ, ಕವಿತಾ ಅಚ್ಚೊಳ್ಳಿ ಮಾನವ ಸಂಪನ್ಮೂಲ ವಿಶ್ಲೇಷಣೆಯ ಬಗೆಗೆ ಮಾತನಾಡಿದರು

ಅಧ್ಯಕ್ಷತೆ ವಹಿಸಿದ್ದ

ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಪ್ರಹ್ಲಾದ್ ಚೌದ್ರಿ ಇಂದಿನ ದತ್ತಾಂಶ ಆಧಾರಿತ ಉದ್ಯೋಗ ಮಾರುಕಟ್ಟೆಯಲ್ಲಿ ವಿಶ್ಲೇಷಣಾತ್ಮಕ ಕೌಶಲ್ಯಗಳ ಅಭಿವೃದ್ಧಿಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆಂದರು.

ವೇದಿಕೆಯ ಮೇಲೆ ರೂಸಾ ಸಂಯೋಜಕ ಡಾ.ಕುಂಚಂ ನರಸಿಂಹಲು, ವ್ಯವಸ್ಥಾಪನ ವಿಭಾಗದ  ಮುಖ್ಯಸ್ಥ ಡಾ.ಪಲ್ಲವಿ, ಸಹ ಪ್ರಾಧ್ಯಾಪಕರಾದ ಡಾ.ಸಲಿಹಾ,ಚನ್ನಮ್ಮ ಕಣವಿ ಇದ್ದರು