
ಸಂಜೆವಾಣಿ ವಾರ್ತೆ
ಕೆ.ಆರ್.ನಗರ.ಜು.21:- ಕುವೆಂಪು ಬಡಾವಣೆ ಎರಡನೇ ವಾರ್ಡಿನ ಸರ್ವೆ ನಂ.118 ರಲ್ಲಿ ಈ ಹಿಂದೆ ಪುಟ್ಟಸಿದ್ದ ಶೆಟ್ಟಿ ರವರು ಖಾಸಗಿ ಬಡಾವಣೆಯನ್ನು ಮಾಡಿದ್ದು ಇಲ್ಲಿ ಸರಿಸುಮಾರು 15000sq ಅನ್ನು ಪಾರ್ಕ್ ನಿರ್ಮಾಣಕ್ಕಾಗಿ ಜಾಗವನ್ನು ಕಾಯ್ದಿರಿಸಿದ್ದು ಆ ಪಾರ್ಕ್ ಜಾಗವನ್ನೆ ಮಾರಾಟ ಮಾಡಲಾಗುತ್ತಿದೆ ಎಂದು ಅಲ್ಲಿಯ ನಾಗರಿಕರು ಆಕ್ರೋಶ ಹೊರ ಹಾಕಿದರು.
ಪಟ್ಟಣದ ಕುವೆಂಪು ಬಡಾವಣೆಯಲ್ಲಿರುವ ಈ ಜಮೀನನ್ನು ನಿವೇಶನವನನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಈ ಬಡಾವಣೆಯ ನೀಲ ನಕ್ಷೆಯಲ್ಲಿ ಉದ್ಯಾನವನಕ್ಕಾಗಿ ಕಾಯ್ದಿರಿಸಿರುವ ಜಾಗವನ್ನು ದಾಖಲಿಸಿದ್ದು ಇದನ್ನು ಪಟ್ಟಣದ ಪುರಸಭೆ ಯಿಂದಲೂ ಅನುಮೋದನೆಯನ್ನು ಪಡೆದಿರುತ್ತಾರೆ ಆದರೆ ಕೆಲ ದಿನಗಳ ಹಿಂದೆ ನಿವೇಶನಗಳಿಗೆ ಕಲ್ಲು ನೆಡುವ ಸಂದರ್ಭದಲ್ಲಿ ಅಕ್ರಮವಾಗಿ ಉದ್ಯಾನವನ ಎಂದು ಮೀಸಲಿಟ್ಟ ಜಾಗದಲ್ಲಿ ನಿವೇಶನಗಳಾಗಿ ಮಾರ್ಪಾಡು ಮಾಡುತ್ತಿದ್ದ ಸಂದರ್ಭದಲ್ಲಿ ಅದನ್ನು ಕಂಡ ಬಡಾವಣೆಯ ನಿವಾಸಿಗಳು ಹಾಗೂ ಕುವೆಂಪು ಬಡಾವಣೆ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೆಲ್ಲರೂ ಸೇರಿ ಅದನ್ನು ತಡೆಹಿಡಿಯಲಾಗಿದೆ.
ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಅದರ ಬಗ್ಗೆ ದೂರು ನೀಡಿದ್ದು ಇಂದು ಬಡಾವಣೆಯ ನಿವಾಸಿಗಳೆಲ್ಲರೂ ಸೇರಿ ಬಡಾವಣೆಯಲ್ಲಿ ಮೀಸಲಿಟ್ಟಿದ್ದ ಉದ್ಯಾನವನದ ಜಾಗದಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ತಂದು ಸಸಿಗಳನ್ನು ನೆಟ್ಟಿ ಪಾರ್ಕ್ ಅನ್ನೆ ಮಾಡಬೇಕು ಎಂದು ಒತ್ತಾಯಿಸಿದರು.
ಸರಿ ಸುಮಾರು 30 ವರ್ಷಗಳ ಹಿಂದೆ ಈ ಕುವೆಂಪು ಬಡಾವಣೆ ಬಡಾವಣೆಯು ನಿರ್ಮಾಣಗೊಂಡಿದ್ದು ಈ ಬಡಾವಣೆಯಲ್ಲಿ ದೇವಸ್ಥಾನಕ್ಕಾಗಲಿ ಉದ್ಯಾವನಕ್ಕಾಗಲಿ ಒಂದು ಅಡಿ ಜಾಗವನ್ನು ಬಿಟ್ಟಿರುವುದಿಲ್ಲ. 2000ನೇ ಇಸವಿಯಲ್ಲಿ ಪುಟ್ಟ ಸಿದ್ದಶೆಟ್ಟಿರವರು 3 ಎಕರೆ 17 1/2 ಕುಂಟೆಯನ್ನು ಜಮೀನನ್ನು ಖರೀದಿಸಿ ಅಲಿಲೇಷನ್ ಮಾಡಿಸಿ ನಿವೇಶನ ಮತ್ತು ರಸ್ತೆಗಳಿಗೋಸ್ಕರ ಹಾಗೂ ಕುವೆಂಪು ಬಡಾವಣೆಯಲ್ಲಿ ಉದ್ಯಾನವನ ಇಲ್ಲದಿರುವುದರಿಂದ 15000 ಚದರ ಅಡಿಗಳನ್ನು ಉದ್ಯಾನವನಕ್ಕೆಂದು ಮೀಸಲಿಟ್ಟಿರುವುದು ಮೂಲ ನಕ್ಷೆಯಲ್ಲಿ ಪುರಸಭೆಯಿಂದ ಅನುಮೋದನೆ ಪಡೆದಿದ್ದಾರೆ.
ಹತ್ತು ವರ್ಷಗಳ ಹಿಂದೆ ಮಾಜಿ ಸಚಿವ ಸಾ.ರಾ. ಮಹೇಶ್ ರವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅವರನ್ನು ಬಡಾವಣೆಯ ನಿವಾಸಿಗಳು ಭೇಟಿ ಮಾಡಿ ಬಡಾವಣೆಯಲ್ಲಿ ಉದ್ಯಾನವನಕ್ಕಾಗಿ ಬಿಟ್ಟಿರುವ ಜಾಗದಲ್ಲಿ ಉದ್ಯಾನವನವನ್ನು ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿದ ಸಂದರ್ಭದಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಿಗೆ ಉದ್ಯಾನವನವನ್ನು ನಿರ್ಮಿಸಲು ಸೂಚಿಸಿದ್ದರು. ಆದರೆ ಇಲ್ಲಿಯ ತನಕ ಇಲ್ಲಿ ಉದ್ಯಾನವನವು ನಿರ್ಮಾಣವಾಗಿಲ್ಲ ಆದ ಕಾರಣ ಬಡಾವಣೆಯ ನಿವಾಸಿಗಳೆಲ್ಲರೂ ಸೇರಿ ಪುರಸಭೆ ಮತ್ತೊಮ್ಮೆ ಉದ್ಯಾನವನವನ್ನು ನಿರ್ಮಾಣ ಮಾಡಿಕೊಡ ಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ರೈತ ಘಟಕದ ಅಧ್ಯಕ್ಷ ಜಿ.ಪಿ.ಮಂಜುನಾಥ್, ಕುವೆಂಪು ಬಡಾವಣೆ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣೇಗೌಡ, ಕಾರ್ಯದರ್ಶಿ ಸುರೇಶ್, ಗೌರವಾಧ್ಯಕ್ಷ ವೀರಭದ್ರಚಾರ್, ಖಜಾಂಚಿಚಂದ್ರಕುಮಾರ್, ,ರವೀಂದ್ರ,ದೊರೆ ಸ್ವಾಮಿ,ಬಾರ್ ಶಿವಕುಮಾರ್, ಯೋಗಣ್ಣ, ಎಲ್‍ಐಸಿ ಕುಮಾರ್, ವಿ.ಎ.ಕುಮಾರ್ ಮಾದೇವಯ್ಯ,ದರ್ಶನ್, ಶೇಖರ್, ಜಗದೀಶ್,ಕುಮಾರ್ ರಂಗನಾಥ್,ನಾಗರಾಜು, ಧರ್ಮರಾಜ್, ರಾಮಕೃಷ್ಣೇಗೌಡ,ನಿರಂಜನ್ ಗೌಡ,ಲಾರಿ ಬಸವಣ್ಣ,ಆಟೋ ಕಾಂತರಾಜ್ ಹಾಗೂ ಕುವೆಂಪು ಬಡಾವಣೆಯ ನಿವಾಸಿಗಳು ಸೇರಿದಂತೆ ಹಾಜರಿದ್ದರು