ಕಸಾಪ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವ


ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.16:
  ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ್ ಧ್ವಜಾರೋಹಣ ನೆರವೇರಿಸಿ, ಇನ್ನೊಬ್ಬರ ಮೇಲೆ ಅವಲಂಬಿಸಬಾರದು ನಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಸಮಯವನ್ನು ಸಮಾಜ ಸೇವೆ ಮಾಡಲು ತೆಗೆದೆಡಬೇಕು ಅಂದಾಗ ಮಾತ್ರ ನಾವು ಸಾಧಕರಾಗುತ್ತೇವೆ ಕನ್ನಡ ಸಾಹಿತ್ಯ ಪರಿಷತ್ತು ಇಂದು ನಾಡಿಗೆ ಗೌರವವನ್ನು ಸಲ್ಲಿಸಿದೆ ಎಂದರು.
 ಅ ಕಸಾಪ ಜಿಲ್ಲಾ ಅಧ್ಯಕ್ಷ ಡಾ.  ನಿಷ್ಠಿ ರುದ್ರಪ್ಪ,  ನಗರಾಧ್ಯಕ್ಷ ನಾಗರೆಡ್ಡಿ, ಗ್ರಾಮೀಣ ಅಧ್ಯಕ್ಷ ಎರಿಸ್ವಾಮಿ,  ಬಿಸಲಹಳ್ಳಿ ಬಸವರಾಜ್ ಚೈತನ್ನ ವೇದಿಕೆ ಅಧ್ಯಕ್ಷ ಪ್ರಭುಕುಮಾರ್, ಮಂಜುನಾಥ್ ಗೋವಿಂದವಾಡ, ಸಿದ್ದರಾಮಪ್ಪ, ವಿಜಯಕುಮಾರ್  ಮುಂತಾದವು ಉಪಸ್ಥಿತರಿದ್ದರು