ಕರಾಟೆ ಪಂದ್ಯಾವಳಿ, ರಾಷ್ಟ್ರಮಟ್ಟಕ್ಕೆ ಆಯ್ಕೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.01-   ನಗರದ ಶ್ರೀ ನಂದ ವಸತಿ ಶಾಲೆಯ ವಿದ್ಯಾರ್ಥಿಗಳು ಕರಾಟೆ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಇತ್ತೀಚಿಗೆ ಬೆಂಗಳೂರಿನ  ಜಿ ಡಬ್ಲ್ಯೂ ಆರ್ ಡ್ರಾಗನ್ ಲೆಗಸಿ ಗ್ಲೋಬಲ್ ಗ್ರೂಪ್ ವರ್ಲ್ಡ್ ರೆಕಾರ್ಡ್ ಅಟೆಮ್ಸ್ ಗ್ಲೋಬಲ್ ಅಕಾಡೆಮಿ ಸಿ.ಬಿ.ಎಸ್.ಸಿ.  ಆಯೋಜಿಸಿದ್ದ ಪಂದ್ಯಾವಳಿಯಲ್ಲಿ, ಶ್ರೀ ನಂದ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ  ಕಾವ್ಯ ಶ್ರೀ ಮತ್ತು,7ನೇ ತರಗತಿಯ  ವಿದ್ಯಾರ್ಥಿ ಗೌತಮ್ ಡಿ .ಆರ್ ಭಾಗವಹಿಸಿ 30 ನಿಮಿಷಗಳ ನಿರಂತರ ಕರಾಟೆಯ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ದಾಖಲೆ ಬರೆದು ವಿಜೇತರಾಗಿದ್ದಾರೆ,  ದೆಹಲಿಯಲ್ಲಿ ನಡೆಯುವ ಮುಂದಿನ ೯ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗಳಿಗೆ ನಮ್ಮ ಶಾಲೆಯ ಈ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.  ಶಾಲೆಯ ಅಧ್ಯಕ್ಷರಾದ  ವೇಮುಲಪಲ್ಲಿ ಗಾಂಧಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ .