
ಉಡುಪಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಟಪಾಡಿ ಗ್ರಾಮ ಸಮಿತಿ ವತಿಯಿಂದ ಸಾರ್ವಜನಿಕ ಸೇವೆಗಾಗಿ ದಾನಿಗಳ ಸಹಾಯದಿಂದ ಆಂಬ್ಯುಲೆನ್ಸ್ ಖರೀದಿಸಿ ಇಂದು ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಇದಕ್ಕೂ ಮುಂಚೆ ಎಸ್ ಡಿ ಪಿ ಐ ಕಟಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಶಾಹಿದ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ಎಸ್ ಡಿ ಪಿ ಐ ಕಟಪಾಡಿ ಗ್ರಾಮ ಸಮಿತಿ ಕಚೇರಿಯಲ್ಲಿ ನಡೆದ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಪ್ರಭಾ ಶೆಟ್ಟಿಯವರು ಆಗಮಿಸಿ ಜಾತಿ ಭೇದವಿಲ್ಲದೆ ತಾವುಗಳು ಮಾಡುತ್ತಿರುವ ಸೇವೆ ಶ್ಲಾಘನೀಯವಾಗಿದ್ದು ನಿಮ್ಮ ಸೇವೆ ಸದಾ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಎಸ್ ಡಿ ಪಿ ಐ ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಮ್ ಆದಿ ಉಡುಪಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕಟಪಾಡಿ ಜಾಮಿಯಾ ಮಸೀದಿ ಅಧ್ಯಕ್ಷರಾಗಿರುವ ವೈ ಎಂ ಇಲ್ಯಾಸ್, ಕಟಪಾಡಿ ಜಾಮಿಯ ಮಸೀದಿ ನಿಕಟಪೂರ್ವ ಅಧ್ಯಕ್ಷರು ಹಾಗೂ ಉದ್ಯಮಿಯಾಗಿರುವ ಬಿ ಎಂ ಮೊಯ್ದೀನ್ ಎ ಆರ್, ಎಸ್ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ರಜಾಕ್ ವೈ ಎಸ್, ಎಸ್ ಡಿ ಪಿ ಐ ಕಾಪು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಸಾದಿಕ್ ಕೆ ಪಿ, ಕಟಪಾಡಿ ಜಾಮಿಯಾ ಮಸೀದಿ ಇಮಾಮರಾಗಿರುವ ರಶೀದ್ ಮೌಲಾನ, ಉದ್ಯಾವರ ಮಸೀದಿ ಇಮಾಮಾರಾಗಿರುವ ಇಮ್ರಾನ್ ಮೌಲಾನ, ಹೆಚ್ ಐ ಎಸ್ ಎಫ್ ಅಧ್ಯಕ್ಷರಾಗಿರುವ ಇಮ್ತಿಯಾಜ್ ಹಾಗೂ ಉದ್ಯಮಿ ವೈ ಎಂ ಅಯ್ಯೂಬ್ ರವರು ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿಯ ಸಮಾಜ ಸೇವಕರಾಗಿರುವ ಮುನೀರ್ ಕಲ್ಮಾಡಿ ಅವರನ್ನು ಸನ್ಮಾನಿಸಲಾಯಿತು.
ಶಫೀಕ್ ಉಡುಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.