
ವಿಟ್ಲ ಎಜುಕೇಶನ್ ಸೊಸೈಟಿ ಇದರ ಹೈಸ್ಕೂಲ್ ವಿಭಾಗದ ೨೦೨೫-೨೬ ನೇ ಸಾಲಿನ ಎನ್ ಸಿ ಸಿ, ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಚಾಲಕ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರಾದ ನಿತ್ಯಾನಂದ ನಾಯಕ್ ಮತ್ತು ಪದ್ಮಯ್ಯ ಗೌಡ, ನಿವೃತ್ತ ಯೋಧ ಕ್ಯಾಪ್ಟನ್ ದಾಸಪ್ಪ ಪೂಜಾರಿ, ಎನ್ ಸಿ ಸಿ ಮಾಸ್ಟರ್ ಶ್ರೀನಿವಾಸ್, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್ ಕುಮಾರ್, ಶಿಕ್ಷಕಿ ವೀಣಾ, ಎನ್ ಸಿ ಸಿ, ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






























