ಉಕ್ರೇನ್ ವಿರುದ್ಧ ಯುದ್ಧ ಅಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮನವಿ


ಟಿಯಾನ್‌ಜಿನ್, ಸೆ. ೧- ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಅಂತ್ಯಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮನವಿ ಮಾಡಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ವೇಳೆ ತಮ್ಮ ಸಹವರ್ತಿ ವ್ಲಾಡಿಮಿರ್ ಪುಟಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ ವೇಳೆ ಉಕ್ರೇನ್ ವಿರುದ್ಧ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದರು.
ರಚನಾತ್ಮಕ ಮಾತುಕತೆಯ ಮೂಲಕ ಶೀಘ್ರ ಯುದ್ಧಕ್ಕೆ ಅಂತ್ಯ ಹಾಡಬೇಕಾಗಿದೆ. ಇದು ಮಾನವೀಯತೆ ಬೇಡಿಕೆಯೂ ಆಗಿದೆ. ಈ ಮೂಲಕ ಈ ಪ್ರದೇಶದಲ್ಲಿ ಶಾಶ್ವತವಾಗಿ ಶಾಂತಿ ನಡೆಸಬೇಕು ಎಂದು ಹೇಳಿದರು.
ಉಕ್ರೇನ್‌ನಲ್ಲಿ ಶಾಂತಿ ನೆಲೆಸುವ ಕುರಿತು ಭಾರತ ಎಲ್ಲಾ ರೀತಿಯ ಪ್ರಯತ್ನಗಳನ್ನು ಸ್ವಾಗತಿಸುತ್ತೇವೆ. ಈ ಸಂಬಂಧ ಉಭಯದೇಶಗಳು ರಚನಾತ್ಮಕವಾಗಿ ಮುಂದುವರಿಯುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಾಗತಿಕ ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಗೆ ಭಾರತ ಹಾಗೂ ರಷ್ಯಾ ನಡುವೆ ನಿಕಟ ಬಾಂಧವ್ಯ ಮಹತ್ವದಾಗಿದೆ ಎಂದು ಮೋದಿ ಉಲ್ಲೇಖಿಸಿದರು. ಈ ವೇಳೆ ಮೋದಿಯವರನ್ನು ಆತ್ಮೀಯ ಸ್ನೇಹಿತ ಎಂದು ಪುಟಿನ್ ಸಂಬೋಧಿಸಿದ್ದು ಗಮನಸೆಳೆಯಿತು.
ಇದೇ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ರಷ್ಯಾ ಅಧ್ಯಕ್ಷರಿಗೆ ಮೋದಿ ಆಹ್ವಾನ ನೀಡಿದರು. ಈ ವರ್ಷಾಂತ್ಯದ ವೇಳೆಗೆ ಪುಟಿನ್ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಭಾರತ ಮೂರು ಸ್ತಂಭಗಳ ಮೇಲೆ ಕೇಂದ್ರೀಕೃತ
ಭಾರತದ ಹೊಸ ಮಂತ್ರ ಸುಧಾರಣೆ, ಪ್ರದರ್ಶನ ಮತ್ತು ರೂಪಾಂತರ ನಮ್ಮ ಆದ್ಯತೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ದೃಷ್ಟಿಕೋನ ಭದ್ರತೆ, ಸಂಪರ್ಕ ಮತ್ತು ಅವಕಾಶ ಎಂಬ ಮೂರು ಸ್ತಂಭಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಹೇಳಿದ್ದಾರೆ.
ದೇಶಗಳ ಬೆಳವಣಿಗೆಗೆ ಭದ್ರತೆ, ಶಾಂತಿ ಮತ್ತು ಸ್ಥಿರತೆಯ ಅತ್ಯಂತ ಮಹತ್ವ, ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಭಾರತದ ಸಂಪರ್ಕ ಪ್ರಯತ್ನಗಳೂ ಕೂಡ ಮುಖ್ಯ.
ಈ ಹಿನ್ನೆಲೆಯಲ್ಲಿ ಭಾರತದ ಪ್ರಯಾಣದ ಭಾಗವಾಗಿ ಎಂದು ಜಾಗತಿಕ ನಾಯಕರಿಗೆ ಕರೆ ನೀಡಿದ್ದಾರೆ
ಚೀನಾದ ಟಿಯಾಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗದಲ್ಲಿ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ ೨೫ನೇ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಂಘಟನೆ ಸದಸ್ಯರ ರಾಷ್ಟ್ರಗಳು ಸಾಂಸ್ಕೃತಿಕ ಅಂಶಗಳನ್ನು ಜಗತ್ತಿಗೆ ತರಲು ನಾಗರಿಕ ಸಂವಾದ ವೇದಿಕೆ ರಚಿಸುವಂತೆ ಸಲಹೆ ನೀಡಿದ್ದಾರೆ
“ಶಾಂಘೈ ಸಹಕಾರ ಸಂಘಟನೆಯ ಸಕ್ರಿಯ ಮತ್ತು ಬದ್ಧ ಸದಸ್ಯರಾಗಿ, ಭಾರತ ಸಂಸ್ಥೆಯ ಉದ್ದೇಶಗಳನ್ನು ಮುನ್ನಡೆಸುವಲ್ಲಿ ನಿರಂತರವಾಗಿ ರಚನಾತ್ಮಕ ಮತ್ತು ಸಕಾರಾತ್ಮಕ ಪಾತ್ರ ವಹಿಸಿದೆ. ಚೌಕಟ್ಟಿನೊಳಗೆ ಭಾರತ ಮೂರು ಪ್ರಮುಖ ಸ್ತಂಭಗಳಾದ ಭದ್ರತೆ, ಸಂಪರ್ಕ ಮತ್ತು ಅವಕಾಶಕ್ಕೆ ಒತ್ತು ನೀಡಿದೆ ಎಂದಿದ್ದಾರೆ
ಭದ್ರತೆ, ಶಾಂತಿ ಮತ್ತು ಸ್ಥಿರತೆ ಯಾವುದೇ ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡಿಪಾಯ “ಈ ಗುರಿ ಸಾಧಿಸುವುದು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಗಮನಾರ್ಹ ಸವಾಲಾಗಿದೆ.
ಭಯೋತ್ಪಾದನೆಯು ಕೇವಲ ಪ್ರತ್ಯೇಕ ರಾಜ್ಯಗಳ ಭದ್ರತೆಗೆ ಬೆದರಿಕೆಯಲ್ಲ, ಆದರೆ ಇಡೀ ಮಾನವೀಯತೆಗೆ ಗಂಭೀರ ಸವಾಲು ಕೂಡ ಎಂದು ತಿಳಿಸಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ಅವರು, “ಕಳೆದ ನಾಲ್ಕು ದಶಕಗಳಿಂದ ಭಾರತ ಭಯೋತ್ಪಾದನೆ ಭಾರ ಎದುರಿಸುತ್ತಿದೆ. ಇತ್ತೀಚೆಗೆ, ಪಹಲ್ಗಾಮ್ ನಲ್ಲಿ ಭಯೋತ್ಪಾದನೆಯ ಕೆಟ್ಟ ಮುಖ ಕಂಡಿದ್ದೇವೆ. ಈ ದುಃಖದ ಸಮಯದಲ್ಲಿ ನಮ್ಮೊಂದಿಗೆ ನಿಂತ ಸ್ನೇಹಪರ ರಾಷ್ಟ್ರಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
“ಬಲವಾದ ಸಂಪರ್ಕ ವ್ಯಾಪಾರವನ್ನು ಹೆಚ್ಚಿಸುವುದಲ್ಲದೆ, ಬೆಳವಣಿಗೆ ಮತ್ತು ವಿಶ್ವಾಸಕ್ಕೆ ಬಾಗಿಲು ತೆರೆಯುತ್ತದೆ ಎಂದು ಭಾರತ ಯಾವಾಗಲೂ ನಂಬಿದೆ. ಇದನ್ನು ಗಮನದಲ್ಲಿಟ್ಟುಕೊಂಡು,ಚಬಹಾರ್ ಬಂದರು ಮತ್ತು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‍ನಂತಹ ಉಪಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದೊಂದಿಗೆ ಸಂಪರ್ಕ ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
೨೦೨೩ ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಸಹಕಾರ ಮತ್ತು ಸುಧಾರಣೆಗೆ ಅವಕಾಶಗಳು ಹೊಸ ಶಕ್ತಿಯ ಕಲ್ಪನೆ ಜಾರಿಗೆ ತರಲಾಗಿದೆ.
“ಸ್ಟಾರ್ಟ್‌ಅಪ್‌ಗಳು, ನಾವೀನ್ಯತೆ, ಯುವ ಸಬಲೀಕರಣ, ಡಿಜಿಟಲ್ ಸೇರ್ಪಡೆ ಮತ್ತು ಹಂಚಿಕೆಯ ಬೌದ್ಧ ಪರಂಪರೆ ಮೂಲಕ ಭಾರತ ಸಂಯೋಜಿಸಿದ ಹೊಸ ಕ್ಷೇತ್ರಗಳಾಗಿವೆ ಎಂದಿದ್ದಾರೆ.
ಪ್ರಾಚೀನ ನಾಗರಿಕತೆಗಳು, ಕಲೆಗಳು, ಸಾಹಿತ್ಯ ಮತ್ತು ಸಂಪ್ರದಾಯಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ನಾಗರಿಕ ಸಂವಾದ ವೇದಿಕೆ ರಚಿಸುವಂತೆ ಸಲಹೆ ನೀಡಿದ್ದಾರೆ.