ಇಷ್ಟಲಿಂಗ ಪೂಜೆ, ಶಿವ ದೀಕ್ಷೆ ಜನ ಜಾಗೃತಿಗೆ ಶ್ರೀಗಳಿಂದ ಚಾಲನೆ

ಕೆಂಗೇರಿ,ಜ.12:- ಶ್ರೀ ಕ್ಷೇತ್ರ ಏಕದಳ ಬಂಡೆಮಠ ಮಠ ಕೆಂಗೇರಿ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯಶವಂತಪುರ ವಿಧಾನಸಭಾ ಕ್ಷೇತ್ರ ಘಟಕ ಇವರ ಸಹಯೋಗದಲ್ಲಿ ಕೆಂಗೇರಿ ಉಪನಗರ ಕೊಮ್ಮಘಟ್ಟ ರಸ್ತೆಯ ಶ್ರೀ ಕ್ಷೇತ್ರ ಏಕದಳ ಬಿಲ್ವ ಬಂಡೆ ಮಠದ ಆವರಣದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಪೂಜೆ ಮತ್ತು ಶಿವ ದೀಕ್ಷೆ ಹಾಗೂ ಜನ ಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮವನ್ನು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜ ದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಯವರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಶ್ರೀ ಏಕದಳ ಬಂಡೆ ಮಠದ ಪೀಠಾಧಿಪತಿಗಳಾದ ಸಚ್ಚಿದಾನಂದ ಮಹಾಸ್ವಾಮಿಗಳು . ಕನಕಪುರ ಚಿಕ್ಕ ಕಲ್ಲುಬಾಳು ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ. ಡಿ. ಲಕ್ಷ್ಮೀನಾರಾಯಣ್, ಕೆ.ಆರ್.ಡಿ. ಐಲ್. ಮಾಜಿ ಅಧ್ಯಕ್ಷ ಎಂ ರುದ್ರೇಶ್, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಮರಿಸ್ವಾಮಿ. ಬಿಬಿಎಂಪಿ ಮಾಜಿ ಪೌರರಾದ ಗಂಗಾಂಬಿಕಾ ಮಲ್ಲಿಕಾರ್ಜುನ, ಕೊಡಿಗೇಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ. ಎನ್ ನಂಜುಂಡೇಶ್, ಘಟಕದ ಪದಾಧಿಕಾರಿಗಳಾದ ಪಂಚಾಕ್ಷರಿ ಬಿ ಎಂ, ರುದ್ರೇಶ್ ಎನ್. ಎಸ್,ಮೋಹನ್ ಕುಮಾರ್,ಶಶಿಕುಮಾರ್,ಕೃಷ್ಣಸಾಗರ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.