ಆಪರೇಷನ್ ಸಿಂಧೂರಕ್ಕೆ ಇತಿಹಾಸಕಾರರ ಬೆಂಬಲ

ನವದೆಹಲಿ, ಆ,14- ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಸೇನೆ, ಪಾಕಿಸ್ತಾನದ ಕನಿಷ್ಠ ಐದು ವಾಯುಪಡೆಯ ಜೆಟ್‍ಗಳನ್ನು ಹೊಡೆದುರುಳಿಸಿದೆ ಎಂದು ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಹೇಳಿಕೆಯನ್ನು ಅಂತರರಾಷ್ಟ್ರೀಯ ಮಿಲಿಟರಿ ವಾಯುಯಾನ ವಿಶ್ಲೇಷಕರು ಮತ್ತು ಇತಿಹಾಸಕಾರರು ಬೆಂಬಲಿಸಿದ್ದಾರೆ

ಐದು ಯುದ್ದ ವಿಮಾನಗಳ ಜೊತೆಗೆ ಒಂದು ದೊಡ್ಡ ವಾಯುಗಾಮಿ ವಿಮಾನವನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಹೇಳಿದ್ದರು, ಆ ಹೇಳಿಕೆಗೆ ಇದೀಗ ಮತ್ತಷ್ಟು ಬೆಂಬಲ ವ್ಯಕ್ತವಾಗಿದೆ.

ಪಾಕಿಸ್ತಾನದ ನಿರಾಕರಣೆಗಳ ನಡುವೆಯೇ, ಆಸ್ಟ್ರಿಯಾ ಮೂಲದ ಖ್ಯಾತ ವೈಮಾನಿಕ ಯುದ್ಧ ತಜ್ಞ ಟಾಮ್ ಕೂಪರ್, ಎಸಿಎಂ ಸಿಂಗ್ “ಮೇ ತಿಂಗಳಿನಲ್ಲಿ ಭಾರತ ನಡೆಸಿದ ಅಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಮಟ್ಟದಲ್ಲಿ ಹಾನಿ ಆಗಿದೆ ಎಂದು ತಿಳಿಸಿದ್ದಾರೆ

ಅದೇ ಸಮಯದಲ್ಲಿ ಎಸ್-400 ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ 300 ಕಿ.ಮೀ ದೂರದಲ್ಲಿರುವ ಗುರಿಗಳನ್ನು ನಿಖರವಾಗಿ ಹೊಡೆದುರಯಳಿಸುವ ಮೂಲಕ ಭಾರತದ ಶಕ್ತಿ ಸಾಮಥ್ರ್ಯವನ್ನು ಜಗತ್ತಿನ ಮುಂದೆ ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ

“ಐದು ಮಾತ್ರವಲ್ಲದೆ ಇನ್ನೂ ಹೆಚ್ಚಿನ ಪಾಕಿಸ್ತಾನಿ ವಿಮಾನಗಳನ್ನು ಹೊಡೆದುರುಳಿಸಿರುವ ಪುರಾವೆಗಳನ್ನು ನಾವು ನೋಡಿದ್ದೇವೆ. ಇನ್ನೂ ಹೆಚ್ಚಿನ ಪಾಕಿಸ್ತಾನಿ ವಿಮಾನಗಳು ನೆಲದ ಮೇಲೆ ನಾಶವಾದ ಪುರಾವೆಗಳನ್ನು ನೋಡಿದ್ದೇವೆ ಎಂದು ಅವರು ಧ್ವನಿಗೂಡಿಸಿದ್ದಾರೆ

ಆದರೆ ಪಾಕಿಸ್ತಾನ ಸರ್ಕಾರ ಅಥವಾ ಅಲ್ಲಿನ ಸೇನೆಯಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಮಜಾಯಿಷಿ ಬಂದಿಲ್ಲ. ಜೊತೆಗೆ ಭಾರತ ಸರ್ಕಾರದಿಂದಲೂ ಕೂಡ ಎಂದು ಹೇಳಲಾಗಿದೆ.

ಮೇ 7 ರ ರಾತ್ರಿ ಮತ್ತು ಮೇ 10 ರ ನಡುವೆ ಭಾರತ ಮತ್ತು ಪಾಕಿಸ್ತಾನ ನಡುವಿನ 72 ಗಂಟೆಗಳ ಸೀಮಿತ ಯುದ್ಧದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತೀಯ ಸೈನಿಕರು, ಪಾಕಿಸ್ತಾನದ ಸೈನಿಕರು ಮತ್ತು ಭಯೋತ್ಪಾದಕರಿಗೆ ಸೂಕ್ತ ತಿರುಗೇಟು ನೀಡಿದ್ದಾರೆ ಎಂದು ತಿಳಿಸಿದ್ದಾರೆ

ಎಸ್ – 400 ವ್ಯವಸ್ಥೆಯಿಂದ ಹೊಡೆದುರುಳಿಸಿದ ಪಾಕಿಸ್ತಾನದ ಮುಂಚಿನ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನ ಸಾಬ್ 2000 ಎಂದು ಗುರುಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ