
ರಾಯ್‌ಪುರ,ಸೆ.೩-ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯ ಬಲರಾಂಪುರ ಅಣೆಕಟ್ಟೆಯ ಒಂದು ಭಾಗ ಕುಸಿದು ಉಂಟಾದ ಪ್ರವಾಹದಿಂದ ಕನಿಷ್ಠ ನಾಲ್ವರು ಸಾವನ್ನಪ್ಪಿ ಮೂವರು ಕಾಣೆಯಾಗಿರುವ ಘಟನೆ ನಡೆದಿದೆ
“ಒಬ್ಬ ಮಹಿಳೆ ಮತ್ತು ಆಕೆಯ ಅತ್ತೆ ಸೇರಿದಂತೆ ನಾಲ್ವರು ಜನರು ತಮ್ಮ ಮನೆಗಳಲ್ಲಿ ಮಲಗಿದ್ದಾಗ ಸಾವನ್ನಪ್ಪಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಛತ್ತೀಸ್‌ಗಢದ ಬಲರಾಂಪುರದಲ್ಲಿ ಅಣೆಕಟ್ಟು ಕುಸಿದು ಈ ಘಟನೆ ನಡೆದಿದೆ. ನಾಪತ್ತೆಯಾದವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ
ಮಾಹಿತಿ ತಿಳಿದ ನಂತರ ಜಿಲ್ಲಾಡಳಿತ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ
ಧನೇಶ್‌ಪುರ ಗ್ರಾಮದಲ್ಲಿರುವ ಲೂಟಿ ಜಲಾಶಯದಲ್ಲಿ ತಡರಾತ್ರಿ ಈ ಪ್ರದೇಶದಲ್ಲಿ ಭಾರಿ ಮಳೆಯಾದ ನಂತರ ಅಣೆಕಟ್ಟೆ ಹೊಡೆದು ಪ್ರವಾಹದಿಂದ ಅವಘಢ ಸಂಭವಿಸಿದೆ
೧೯೮೦ ರ ದಶಕದ ಆರಂಭದಲ್ಲಿ ನಿರ್ಮಿಸಲಾದ ಜಲಾಶಯದ ನೀರು, ಒಡೆದ ಮೂಲಕ ಹತ್ತಿರದ ಮನೆಗಳು ಮತ್ತು ಕೃಷಿ ಹೊಲಗಳಿಗೆ ಹರಿಯಿತು, ಇದರ ಪರಿಣಾಮವಾಗಿ ಹಠಾತ್ ಪ್ರವಾಹ ಉಂಟಾಗಿದೆ ಎಂದು ತಿಳಿಸಿದ್ದಾರೆ