ಅಕ್ರಮ ಜೂಜಾಟದ ಅಡ್ಡೆಗೆ ಪೊಲೀಸರ ದಾಳಿ; ಆರು ಜನರ ಬಂಧನ

ಬ್ರಹ್ಮಾವರ-ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿದ ಘಟನೆ ಬ್ರಹ್ಮಾವರ ತಾಲೂಕಿನ ಅಚಲಾಡಿ ಗ್ರಾಮದ ಗರಿಕೆಮಠದಲ್ಲಿರುವ ರಾಜು ಶೆಟ್ಟಿ ಅವರ ಮನೆಯ ಸಮೀಪ ನಡೆದಿದೆ.
ಜುಲೈ ೧೮ರಂದು ರಾತ್ರಿ ೯:೦೦ ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿದ ಪೊಲೀಸರು, ವಿದ್ಯುತ್ ದೀಪಗಳ ಅಡಿಯಲ್ಲಿ ಪ್ಲಾಸ್ಟಿಕ್ ಟೇಬಲ್ ಸುತ್ತ ಕುಳಿತು ಹಲವಾರು ವ್ಯಕ್ತಿಗಳು ಜೂಜಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಒಬ್ಬ ವ್ಯಕ್ತಿ ಕಾರ್ಡ್ಗಳನ್ನು ಹಂಚುತ್ತಾ ಆಟದ ನಡೆಗಳನ್ನು ಕೂಗುತ್ತಿದ್ದರೆ, ಉಳಿದವರು ನಗದು ಪಂತಗಳನ್ನು ಕಟ್ಟುತ್ತಿದ್ದರು. ಜೂಜಾಟಕ್ಕಾಗಿಯೇ ಒಂದು ದುಂಡು ಮೇಜು ಮತ್ತು ಪ್ಲಾಸ್ಟಿಕ್ ಕುರ್ಚಿಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.


ಕೋಟ ಪೊಲೀಸರು ಪಿಎಸ್‌ಐ ಸುಧಾಪ್ರಭು ನೇತೃತ್ವದಲ್ಲಿ ನಡೆದ ದಾಳಿ ವೇಳೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಗರಿಕೆಮಠ, ಶಿರಿಯಾರ ನಿವಾಸಿ ರಾಜು ಶೆಟ್ಟಿ (೭೧), ಮೊಗೆಬೆಟ್ಟು, ಪಡುಮಂಡು, ಶಿರಿಯಾರ ನಿವಾಸಿ ರಾಜು ಶೆಟ್ಟಿ (೫೭), ರಂಗನಕೆರೆ, ಬ್ರಹ್ಮಾವರ ನಿವಾಸಿ ರಾಮಾನಂದ ಶೆಟ್ಟಿ (೨೧), ಆಕಾಶವಾಣಿ ಸಮೀಪ, ವಾರಂಬಳ್ಳಿ ನಿವಾಸಿ ಸಂತೋಷ್ (೫೬), ಮಧುವನ, ಅಚಲಾಡಿ ನಿವಾಸಿ ರಾಜೀವ್ ಶೆಟ್ಟಿ (೬೫), ಮತ್ತು ಪಡುಮಂಡು, ಶಿರಿಯಾರ ನಿವಾಸಿ ಕೃಷ್ಣ (೪೦) ಎಂದು ಗುರುತಿಸಲಾಗಿದೆ.
ಕೋಟ ಪೊಲೀಸರು ಪಿಎಸ್‌ಐ ಸುಧಾಪ್ರಭು ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕಿನ ಅಚಲಾಡಿ ಗ್ರಾಮದ ಗರಿಕೆಮಠದಲ್ಲಿರುವ ರಾಜು ಶೆಟ್ಟಿ ಅವರ ಮನೆಯ ಸಮೀಪ ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. “ಅಂದರ್ ಬಾಹರ್ ಕಾರ್ಡ್ ಆಟದಲ್ಲಿ ಒಂದು ಗುಂಪು ತೊಡಗಿಸಿಕೊಂಡಿದೆ ಎಂಬ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ.
ಪೊಲೀಸರು ಒಟ್ಟು ೧೫,೪೫೦ ರೂ. ನಗದು, ಮೂರು ಕಾರುಗಳು, ಎರಡು ಸ್ಕೂಟರ್ಗಳು, ಒಂದು ದುಂಡು ಮೇಜು, ಆರು ಪ್ಲಾಸ್ಟಿಕ್ ಕುರ್ಚಿಗಳು ಮತ್ತು ಜೂಜಾಟಕ್ಕೆ ಬಳಸಿದ ೫೨ ಇಸ್ಪೀಟ್ ಕಾರ್ಡ್ಗಳ ಪ್ಯಾಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.