ಹಳ್ಳಿಗಳಲ್ಲಿ 13 ಟ್ರಾಕ್ಟರ್ ಬ್ಯಾಟರಿ ಕಳ್ಳತನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.05:
ತಾಲೂಕಿನ ಕೆಲ ಹಳ್ಳಿಗಳಲ್ಲಿ ಕಳ್ಳರು ಟ್ರಾಕ್ಟರ್ ಬ್ಯಾಟರಿಗಳನ್ನು ಕದಿಯುವ ಕೈ ಚಳಕ ಮೆರೆದಿದ್ದಾರೆ.
ಕಮ್ಮರಚೇಡು, ವಿಘ್ನೇಶ್ವರ ಕ್ಯಾಂಪ್, ಶಂಕರ ಬಂಡೆ ಮತ್ತು ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಲಾದ 13 ಟ್ರಾಕ್ಟರಗಳ ಬ್ಯಾಟರಿಗಳನ್ನು ಕದ್ದಿದ್ದಾರೆ. ಬೊಲೆರೋ ವಾಹನದ ಬ್ಯಾಟರಿ‌ಕದಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಬ್ಯಾಟರಿ ಕಳೆದುಕೊಂಡವರು ಈ ಬಗ್ಗೆ ಗ್ರಾಮಿಣ ಠಾಣೆಯ ಪೊಲೀಸರಿಗೆ ದೂರಿನ ಮಾಹಿತಿ ನೀಡಿದ್ದಾರೆ