ಸುಕೋ ಬ್ಯಾಂಕ್ ಅಧ್ಯಕ್ಷರಾಗಿ 3ನೇ ಅವಧಿಗೆ ಮೋಹಿತ ಮಸ್ಕಿ ಆಯ್ಕೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಫೆ. 03: ನಗರದಲ್ಲಿ ಪ್ರಧಾನ ಕಛೇರಿ ಹೊಂದಿರುವ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್‍ನ ನೂತನ ಅಧ್ಯಕ್ಷರಾಗಿ ಮೋಹಿತ ಮಸ್ಕಿ ಅವರು ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿ, ನಿನ್ನೆ ಅಧಿಕಾರ ಸ್ವೀಕರಿಸಿದ್ದಾರೆ.

ಮೋಹಿತ ಮಸ್ಕಿ ಅವರು ಸುಕೋ ಸೌಹಾರ್ದ ಬ್ಯಾಂಕ್‍ನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಕಳೆದ ಎರೆಡು ಅವಧಿಗೆ ಅಧ್ಯಕ್ಷರಾಗಿ ಗ್ರಾಹಕರ ವಿಶ್ವಾಸವನ್ನು ಪಡೆದು ಬ್ಯಾಂಕನ್ನು ಆರ್ಥಿಕವಾಗಿ ಸದೃಢವಾಗಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೇ, ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಲ ಕಾಲಕ್ಕೆ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾಗೊಳಿಸಿ, ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಯುಪಿಎ ಬ್ಯಾಂಕಿಂಗ್ ಸೇವೆ ಸೇರಿ ವಿವಿಧ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಕೋ ಬ್ಯಾಂಕ್‍ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವುದು ಬ್ಯಾಂಕ್‍ನ ಭವಿಷ್ಯಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್‍ನ ಉಪಾಧ್ಯಕ್ಷರಾಗಿ ಕೃಷಿ ಸಲಕರಣೆಗಳ ವ್ಯಾಪಾರಿಗಳಾಗಿರುವ ಮುರಳೀಧರ ರೆಡ್ಡಿ, ನಿರ್ದೇಶಕರಾಗಿರುವ ಚಾರ್ಟೆಡ್ ಅಕೌಂಟೆಂಟ್ ಎಸ್. ವೆಂಕಟಕೃಷ್ಣನ್, ಕೃಷಿ ಮತ್ತು ಡ್ರೋಣ್ ಪರಿಣಿತರು ಆಗಿರುವ ಜಿ. ಮಹೇಂದ್ರ ಚೌಧರಿ, ಜೈನ್ ಸಮುದಾಯದ ಗಣ್ಯರು, ಸಮಾಜ ಸೇವಕರೂ ಆಗಿರುವ ಪದಮ್ ಚಂದ್ ಮೆಹ್ತಾ, ನಿವೃತ್ತ ಐಎಎಸ್ ಅಧಿಕಾರಿ, ಬಳ್ಳಾರಿಯ ಜಿ.ಎನ್. ಶಿವಮೂರ್ತಿ, ಸಹಕಾರಿ ಧುರೀಣೆ, ಕಲ್ಬುರ್ಗಿ ವಿಶ್ವವಿದ್ಯಾಲಯದ ಸೆನೆಟ್‍ನ ಮಾಜಿ ಸದಸ್ಯೆ ಪಿ.ಎಂ. ದಯಾವತಿ, ಖ್ಯಾತ ಉದ್ಯಮಿಗಳಾದ ರಾಮದಾಸ್, ಬ್ಯಾಂಕಿಂಗ್ ಮತ್ತು ಫೈನ್ಸಾನ್ಸಿಯಲ್ ಸರ್ವೀಸಸ್‍ನ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳಾಗಿರುವ ಪದ್ಮಪ್ರಸಾದ ಮತ್ತು ರೈಸ್ ಮಿಲ್ಲರ್, ಟ್ರೇಡರ್ ಆಗಿರುವ ಶ್ರೀಮತಿ ಚನ್ನಬಸಮ್ಮ, ಬಳ್ಳಾರಿಯ ಚಾರ್ಟೆಡ್ ಅಕೌಂಟೆಂಟ್ ಕೆ. ರಾಜಶೇಖರ್ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಅಧಿಕಾರಿ ವಾಸಂತಿ ಸಾಗರ್ ಅಧಿಕಾರ ಸ್ವೀಕರಿಸಿದ್ದಾರೆ