
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಫೆ,9- ರಾಜ್ಯ ಸರ್ಕಾರದ ಸಹಕಾರ ಇಲಾಖೆ ಕೊಡಮಾಡಿದ ಶ್ರೇಷ್ಟ ಸಹಕಾರ ಪ್ರಶಸ್ತಿ ಪುರಸ್ಕೃತ ನಗರದ ಜನತಾ ಬಜಾರ್ ನ ಮಾಜಿ ಅಧ್ಯಕ್ಷ ಜಿ.ನೀಲಕಂಠಪ್ಪ ಅವರಿಗೆ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದಿಂದ ಗೌರವ ಸನ್ಮಾನ ಮಾಡಿದೆ.
ನಿನ್ನೆ ಹೊಸಪೇಟೆಯಲ್ಲಿ ನಡೆದ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಕಲ್ಗುಡಿ ಮಂಜುನಾಥ. ಉಪಾಧ್ಯಕ್ಷ ಟೆಂಗಿನಕಾಯ್ ಮಹಂತೇಶ. ಗುಡೇಕೋಟೆ ನಾಗರಾಜ್. ನಿಷ್ಟಿ ರುದ್ರಪ್ಪ. ಉಮಾಪತಿ.ಅಲ್ಲಂ ಪ್ರಮೋದ್. ಜವಳಿ ಕಲ್ಮಠಪ್ಪ ಮೊದಲಾದವರು ಸನ್ಮಾನಿಸಿ ಗೌರವಿಸಿದರು.





















