
ಬೆಂಗಳೂರು.ಏ.5- ಮಹಿಳಾ ಕಸ್ಟಮ್ ಅಧಿಕಾರಿಯ ಮೇಲೆ ಅತ್ಯಾಚಾರ ನಡೆಸಿ ಬೆದರಿಸಿ ಬ್ಲಾಕ್ ಮೇಲ್ ಮಾಡಿದ ಖದೀಮನನ್ನು ನಗರ ಪೆÇಲೀಸರು ಬಂಧಿಸಿದ್ದಾರೆ.
ಇಂದಿರಾನಗರದ ಎಂ.ಕೃಪಲಾನಿ ಬಂಧಿತ ಆರೋಪಿಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಮಹಿಳಾ ಅಧಿಕಾರಿಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಹೇಳಿದಂತೆ ಕೇಳದಿದ್ದರೆ ಖಾಸಗಿ ಫೆÇೀಟೋ, ವಿಡಿಯೋ ವೈರಲ್ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದನು.
ಆರೋಪಿಯ ಕಿರುಕುಳಕ್ಕೆ ಬೇಸತ್ತು ಮಹಿಳಾ ಅಧಿಕಾರಿ ಯಲಹಂಕ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿದ್ದು, ಬಳಿಕ ಪ್ರಕರಣವು ಇಂದಿರಾನಗರ ಪೆÇಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ಈ ಬಗ್ಗೆ ತನಿಖೆಗೆ ಪುಲಕೇಶಿನಗರ ಎಸಿಪಿ ಹಾಗೂ ಇನ್ಸ್ಪೆಕ್ಟರ್ ಗೆ ಹಿರಿಯ ಅಧಿಕಾರಿಗಳು ಸೂಚಿಸಿದ್ದ ಬೆನ್ನಲ್ಲೇ ಕಾರ್ಯಾಚರಣೆ ಕೈಗೊಂಡು ಆರೋಪಿ ಕೃಪಲಾನಿಯನ್ನು ಬಂಧಿಸಲಾಗಿದೆ.
ಅತ್ಯಾಚಾರ ಅಲ್ಲದೇ ಆರೋಪಿ ಮೇಲೆ ಹಲವು ಗಂಭೀರ ಆರೋಪಗಳನ್ನು ಮಹಿಳಾ ಅಧಿಕಾರಿ ಮಾಡಿದ್ದು, ಎಲೆಕ್ಟ್ರಾನಿಕ್ ಉದ್ಯಮ ನಡೆಸುತ್ತಿದ್ದ ಕೃಪಲಾನಿ ಕಸ್ಟಮ್ ಕಣ್ತಪ್ಪಿಸಿ ಸಾಕಷ್ಟು ಅಕ್ರಮ ನಡೆಸಿರುವ ಆರೋಪ ಕೇಳಿಬಂದಿದೆ.
ಈತನಿಗೆ 9 ವರ್ಷದ ಹಿಂದೆ ಮಹಿಳಾ ಕಸ್ಟಮ್ ಅಧಿಕಾರಿ ಪರಿಚಯವಾಗಿದ್ದು, ಆಕೆ ಜೊತೆಗೆ ಪ್ರೀತಿ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದ. ಅಲ್ಲದೆ ಮದುವೆ ಆಮೀಷವೊಡ್ಡಿ ಕೆಲಸದ ಕೆಲ ರಹಸ್ಯಗಳ ತಿಳಿದುಕೊಂಡು ಆಕೆಯನ್ನು ಬಳಸಿಕೊಂಡು ಕೆಲ ಕಸ್ಟಮ್ ಅಧಿಕಾರಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಹಿಂದೆ ತನ್ನ ಮಗ ನಾಪತ್ತೆಯಾಗಿರುವ ಸಂಬಂಧ ಕೃಪಲಾನಿ ತಾಯಿ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು. ಆದರೆ ಕೃಪಲಾನಿ ಉದ್ದೇಶ ಪೂರ್ವಕವಾಗಿ ಹೊಟೆಲ್ನಲ್ಲಿ ಅಡಗಿರುವುದು ತನಿಖೆಯಲ್ಲಿ ಪತ್ತೆಯಾಗಿ ಕೃಪಲಾನಿಗೆ ಕೋರ್ಟ್ 2 ಲಕ್ಷ ರೂ. ದಂಡ ಕೂಡ ವಿಧಿಸಿತ್ತು.ಇದಲ್ಲದೆ ದಶಕದ ಹಿಂದೆ ಕುಡಿದು ಮಹಿಳಾ ಅಧಿಕಾರಿಗಳ ಜತೆ ಅಸಭ್ಯ ವರ್ತನೆ ಆರೋಪವೂ ಈತನಮೇಲಿದೆ. ಕೃಪಲಾನಿ ಜಾಲಕ್ಕೆ ಸಿಲುಕಿ ಹಲವು ಕಸ್ಟಮ್ಸ್ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಆರೋಪಿಯಿಂದ ಅನ್ಯಾಯಕ್ಕೆ ಒಳಗಾದವರು ದೂರು ಸಲ್ಲಿಸುವುದಾಗಲಿ ಇಲ್ಲವೇ ಮಾಹಿತಿಯನ್ನು ನೀಡುವಂತೆ ಪೆÇಲೀಸರು ಮನವಿ ಮಾಡಿದ್ದಾರೆ.






















