Home ಜಿಲ್ಲೆ ಬುಲೆಟ್ ಹಾರಿ ಮೂರು ತಿಂಗಳು ಯಾರಿಗೂ ಏನೂ ಆಗಿಲ್ಲ

ಬುಲೆಟ್ ಹಾರಿ ಮೂರು ತಿಂಗಳು ಯಾರಿಗೂ ಏನೂ ಆಗಿಲ್ಲ

ಎನ್.ವೀರಭದ್ರಗೌಡ

ಬಳ್ಳಾರಿ, ಏ.01: ನಗರದಲ್ಲಿ ಇಂದಿಗೆ ಬಂದೂಕಿನಿಂದ ಬುಲೆಟ್ ಗಳು ಹಾರಿ ಮೂರು ತಿಂಗಳಾಯ್ತು. ಅಂದು ಓರ್ವ ವ್ಯಕ್ತಿ ರಾಜಶೇಖರ ರೆಡ್ಡಿ ಸಾವನ್ನಪ್ಪಿದ. ಘಟನೆಯಲ್ಲಿ ಹಲವರಿಗೆ ಗಾಯವಾಗಿತ್ತು. ಪರಸ್ಪರ ಎರೆಡು ಗುಂಪುಗಳ ಆಕ್ರೋಶ, ಕೈ ಕೈ ಮಿಲಾಯಿಸಿದ್ದರ ತನಿಖೆ ಸಿಐಡಿಗೆ ನೀಡಿತು. ನಂತರ ತನಿಖೆಯ ಬೆಳವಣಿಗೆ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದೇ ಎಂಬ ಪ್ರಶ್ನೆ ಜನರದ್ದಾಗಿದೆ.

ನಗರದಲ್ಲಿ ಜನವರಿ 3 ರಂದು ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಕಟ್ಟಿದ ಬ್ಯಾನರ್ ಅಳವಡಿಕೆಯೇ ಈ ಘಟನೆಗೆ ಮೂಲಕ ಕಾರಣವಾಗಿತ್ತು.

ಅಂದು ಜ.1 ಆಂಗ್ಲ ಹೊಸ ವರ್ಷ. ಜಿಲ್ಲೆಯ ನೂತನ ಎಸ್ಪಿಯಾಗಿ ಪವನ್ ನೆಜ್ಜೂರ್ ಒಂದು ಕಡೆ ಅಧಿಕಾರ ಸ್ವೀಕರಿಸಿದ್ದರು. ಮತ್ತೊಂದು ಕಡೆ ಅವಂಬಾವಿಯ ಲೋಕೇಶ್ ಮತ್ತವರ ಬೆಂಬಲಿಗರು ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಅವರ  ಸಿರುಗುಪ್ಪ ರಸ್ತೆಯ  ಗ್ಲಾಸ್ ಹೌಸ್ ಬಳಿ  ಬ್ಯಾನರ್ ಕಟ್ಟಿದ್ದರು ಈ ವೇಳೆಗೆ ನಗರದಲ್ಲಿ ಸಾವಿರಾರು ಬ್ಯಾನರ್ ಗಳು ರಾರಾಜಿಸುತ್ತಿದ್ದವು.

ಈ ಬ್ಯಾನರ್ ಗಳ ಅಳವಡಿಕೆ ಸರಿಯಲ್ಲ ಎಂದು ಜನಾರ್ಧನರೆಡ್ಡಿ ಬೆಂಬಲಿಗರು ಆಕ್ಷೇಪವೆತ್ತಿ ಮನೆಯ ಬಳಿಯ ಎರೆಡು ಬ್ಯಾನರ್  ಕಿತ್ತು ಹಾಕಿದ್ದರು. ಇಲ್ಲಿಗೆ ಸುಮ್ಮನಿದ್ದರೆ ಸುವರ್ಣ ಬಳ್ಳಾರಿಯಲ್ಲಿ ಅಂದು ಪೈರಿಂಗ ನಡೆದು ಓರ್ವನ ಸಾವಿಗೆ ಕಾರಣವಾಗುವ ಘಟನೆ ನಡೆಯದೆ. ಈ ವೇಳೆಗೆ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಸಮಾರಂಭ ಇತಿಹಾಸವಾಗಿ ಹೋಗಿರುತ್ತಿತ್ತು.

ಆದರೆ ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ, ಅದ್ಯಾಗೆ ಬ್ಯಾನರ್ ಕಿತ್ತುತ್ತಾರೆ ನಾನು ನೋಡುತ್ತೇನೆ ಎಂದು ಜಿದ್ದಿಗೆ ಬಿದ್ದು ಎದುರಿಗೆ ನಿಂತು ಕಟ್ಟಿಸಲು ಮುಂದಾಗಿದ್ದೇ ಘರ್ಷಣೆಗೆ ಕಾರಣವಾಯ್ತು.  ಅದೇ ವೇಳೆ ಅಲ್ಲಿಗೆ ಬಂದ ಜನಾರ್ಧನರೆಡ್ಡಿ ಅವರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದು ಘರ್ಷಣೆ ಹೆಚ್ಚಲು ಕಾರಣವಾಯ್ತೆಂದು, ಇದರಲ್ಲಿ ಸತೀಶ್ ರೆಡ್ಡಿ ತಲೆಗೆ ಪೆಟ್ಟಾಯ್ತು ಆಸ್ಪತ್ರೆ ಸೇರಿದರು.

ಈ ವಿಷಯ ತಿಳಿದು ಶಾಸಕ ಭರತ್ ರೆಡ್ಡಿ ಬೆಂಬಲಿಗರು, ರೊಚ್ಚಿಗೆದ್ದರು. ಸಾವಿರಾರು ಜನ ಸೇರಿದರು. ಹೊಸಪೇಟೆಯಲ್ಲಿದ್ದ ಶಾಸಕ ಭರತ್  ರೆಡ್ಡಿ ಸಹ ನಗರಕ್ಕೆ ಬಂದು. ವಾಲ್ಮೀಕಿ ವೃತ್ತದಲ್ಲಿ ಸೇರಿದ್ದ ಬೆಂಬಲಿಗೆ ಜೊತೆ ಸೇರಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದರೂ ಬಂದೂಕಿನಿಂದ ಬುಲೆಟ್ ಹಾರುತ್ತಿರಲಿಲ್ಲವೇನೋ.

ಶಾಸಕರೇ ನೇರವಾಗಿ ಜನಾರ್ಧನರೆಡ್ಡಿಯವರ ಮನೆ ಕಡೆ ಬರಲು ಹೊರಾಟಗ. ನಮ್ಮ ಮೇಲೆ ಅಟ್ಯಾಕ್ ಮಾಡಲು ಬರುತ್ತಾರೆಂದು ಜನಾರ್ಧನರೆಡ್ಡಿ ಮತ್ತು ಶ್ರೀರಾಮಯಲು ಗುಂಪು ಸಹ ಭರತ್ ರೆಡ್ಡಿ ಗುಂಪನ್ನು ಎದುರಿಸಲು ಸರ್ವ ಸನ್ನದ್ದರಾಗಿ ನಿಂತಿತ್ತು.

ಇದನ್ನು ಪೊಲೀಸರು ತಡೆದಿದ್ದರೂ ಸಹ ಫೈರಿಂಗ್ ಪ್ರಕರಣ ಆಗುತ್ತಿರಲಿಲ್ಲವೇನೋ. ಆದರೆ ಶಾಸಕ ಭರತ್ ರೆಡ್ಡಿ ತಮ್ಮ ಬೆಂಬಲಿಗರ ಜೊತೆ ಜನಾರ್ಧನರೆಡ್ಡ ಮನೆಯ ಬಳಿ ಬಂದಾಗ ಎರೆಡು ಕಡೆ ಮೊದಲಿಗೆ ಕಲ್ಲು ತೂರಾಟ ನಡೆಯಿತು. ಕಾರ ಪುಡಿ ಎರಚಿತು. ಸೋಡಾ ಬಾಟಲಿ ಎಸೆಯಲು ತಂದಿತ್ತು. ಇದು ವಿಕೋಪಕ್ಕೆ ಹೋಗಿ ಶಾಸಕ ಭರತ್ ರೆಡ್ಡಿ ಬೆಂಗಾವಲಾಗಿ ಬಂದಿದ್ದ ಖಾಸಗಿ ಗನ್ ಮ್ಯಾನ್ ಗಳು ಬುಲೆಟ್ ಹಾರಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಗುಂಡು ತಗುಲಿ ಸಾವನ್ನಪ್ಪಿದ. ಗಾಯಗೊಂಡಿದ್ದ ಸತೀಶ್ ರೆಡ್ಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳಿಸಲಾಯ್ತು.

ಘಟನೆಯನ್ನು ಕಂಡು ಹೊಸ ಎಸ್ಪಿ ನೆಜ್ಜೂರ್ ಬೆರಗಾಗಿದ್ದರು. ಪೊಲೀಸರು ಒಂದು ಹಂತಕ್ಕೆ ನಿಯಂತ್ರಣ ಕಳೆದುಕೊಂಡಂತೆ ಇತ್ತು. ಏನಾಗುತ್ತಿದೆಂದು ತೋಚದಂತಾಗಿದ್ದರು ಎರೆಡೂ ಗುಂಪುಗಳು ಹಿಂಜರಿಯದಂತಾಗಿದ್ದರು. ಜನಾರ್ಧನರೆಡ್ಡಿ ಬಂಧನಕ್ಕೆ ಭರತ್ ರೆಡ್ಡಿ,   ಅದೇ ರೀತಿ ಸತೀಶ್ ರೆಡ್ಡಿ, ಭರತ್ ರೆಡ್ಡಿ ಬಂಧನಕ್ಕೆ ಜನಾರ್ಧನರೆಡ್ಡಿ ಪಟ್ಟು ಹಿಡಿದಿದ್ದರು. ನನ್ನನ್ನು ಮುಗಿಸುವ ಪ್ರಯತ್ನ ಆಗಿದೆ. ನನ್ನ ಮೇಲೆ ಗುಂಡಿನ ದಾಳಿ ನಡೆದಿದೆಂದು ಜನಾರ್ಧನರೆಡ್ಡಿ ಮಾಧ್ಯಮಗಳಿಗೆ ಬುಲೆಟ್ ಪ್ರದರ್ಶಿಸಿದರು.

ಘಟನೆಗೆ ಸಂಬಂಧಿಸಿ 6 ಪ್ರಕರಣ ದಾಖಲಿಸಿ. ಪ್ರಮುಖರನ್ನು ಬಿಟ್ಟು  ಹಲವರ ಬಂಧನ ಮಾಡಿತ್ತು. ಉಳಿದವರು ಬಂದನ ರಹಿತ ವಾರೆಟ್ ಪಡೆದುಕೊಂಡರು. ಒಂದು ವಾರ ಪರಸ್ಪರ ಆರೋಪಗಳು ಕೇಳಿಬಂದವು.  ನಮ್ಮ ಬಳಿ ಸಾಕ್ಷಗಳಿವೆಂದು ತೋರಿಸಿದರು.  ರಾಜ್ಯ ಮಟ್ಟದ  ಮುಖಂಡರಾದ, ಡಿ.ಕೆ.ಶಿವಕುಮಾರ್, ಬಿ.ವೈ.ವಿಜಯೇಂದ್ರ, ಆರ್. ಅಶೋಕ್,  ವಿ.ಸೋಮಣ್ಣ, ಜಮೀರ್ ಅಹಮ್ಮದ್ ಸೇರಿದಂತೆ ಅನೇಕರು  ಬಂದು ಮೃತ ವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡಿ. ಈ ಘಟನೆಯ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದರು.

ಸ್ಥಳಿಯ ಪೊಲೀಸರು ನಡೆಸುತ್ತಿದ್ದ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿತು. ಅವರು ಬಂದು ಹೋದರು. ಮೂರು ತಿಂಗಳಾಯ್ತು ಹಲವರನ್ನು ವಿಚಾರಣೆಗೆ ಕರೆದಿದ್ದು ಬಿಟ್ಟರೆ. ಯಾರನ್ನೂ ಆರೋಪಿಯನ್ನಾಗಿ ಬಂಧಿಸಿಲ್ಲ. ಬಿಜಿಪಿಗರು ಹೇಳುತ್ತಿದ್ದಂತೆ ಎಲ್ಲಾ ಮುಚ್ಚಿಹಾಕುತ್ತಾರೆ ಎಂಬಂತಾಗುತ್ತದಾ ಕಾದು ನೋಡಬೇಕಿದೆ.

ಕೋಟ್:

ಗುಂಡುಹೊಡೆದವರಿಗೆ ಶಿಕ್ಷೆ ಆಗಬೇಕು

ಘಟನೆ ಸಂಬಂಧ ಸಿಐಡಿಯವರು ಬೆಂಗಳೂರಿಗೆ ಕರೆದು ವಿಚಾರಣೆ ಮಾಡಿದ್ದಾರೆ. ಎಲ್ಲಾ ಹೇಳಿಕೆ ನೀಡಿದೆ. ನಾವೂ ಸಾಕ್ಷಗಳನ್ನು ನೀಡಿದೆ. ಅವರ ಬಳಿಯೋ ವೀಡಿಯೋ ಸಾಕ್ಷಗಳು ಇವೆ. ಏನೇ ಆಗಲಿ ಗುಂಡು ಹಾರಿಸದವರಿಗೆ, ಹಾರಿಸಲು ಪ್ರೇರೇಪಿಸಿದವರಿಗೆ ಶಿಕ್ಷೆ ಆಗಬೇಕು.

ಜಿ.ಸೋಮಶೇಖರ ರೆಡ್ಡಿ

ನಗರದ ಮಾಜಿ ಶಾಸಕರು, ಬಳ್ಳಾರಿ.

ಘಟನೆಯ ಪರಿಣಾಮ:

#ಈ ಘಟನೆಯಿಂದ ಆಗಿದ್ದೇನೆಂದರೆ ಅಧಿಕಾರ ಸ್ವೀಕರಿಸಿ ಒಂದೇ ದಿನದಲ್ಲಿ ಅಮಾನತ್ತಾದರು ಎಸ್ಪಿ ನುಜ್ಜೂರು.

#ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆಯಾದರು

#ಆರು ಪ್ರಕರಣ ದಾಖಲು,

# ಖಾಸಗಿ ಗನ್ ಮ್ಯಾನ್ ಗಳು ಕಾಣುತ್ತಿಲ್ಲ.

#ನಗರದಲ್ಲಿ ಅನಧಿಕೃತ ಬ್ಯಾನರ್ ಅಳವಡಿಕೆಗೆ ಬ್ರೇಕ್

# ಸ್ಥಗಿತಗೊಂಡ ಅನೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ.

# ಸುವರ್ಣ ಬಳ್ಳಾರಿಗೊಂದು ಕಪ್ಪುಚುಕ್ಕೆ.