
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.23: ರಾಜ್ಯ ಸರ್ಕಾರದಿಂದ ನಮಗೆ ಬರಬೇಕಿರುವ ಬಾಕಿ ಇರುವ 37 ಸಾವಿರ ಕೋಟಿ ರೂ ಬಿಲ್ ಬಿಡುಗಡೆ ಕುರಿತು ಸಂಘಟಿತ ಹೋರಾಟ ಮಾಡೋಣ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಹೇಳಿದ್ದಾರೆ.
ಅವರು ನಿನ್ನೆ ನಗರದ ರಾಯಲ್ ಪೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸಂಘದ ಅಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸರ್ಕಾರ ಹಲವು ಕಾರಣಗಳನ್ನು ಹೇಳುತ್ತ ಬಾಕಿ ಬಿಲ್ ಬಿಡುಗಡೆ ಮಾಡುತ್ತಿಲ್ಲ ಅದಕ್ಕಾಗಿ. ಬೆಂಗಳೂರಿನಲ್ಲಿ ಮಾ.6 ರಂದು ರಾಜ್ಯ ಸರ್ಕಾರದ ಮೇಕೆ ಹಣ ಬಿಡುಗಡೆಗೆ ಒತ್ತಾಯ ಮಾಡಲು ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದು. ತಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದರು.
ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಜಿ.ರಮಣರೆಡ್ಡಿ (ರವಿ)ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ಉಮಾಮಹೇಶ್ವರಗೌಡ ಅವರು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದಾಗಿ ಸಭೆಗೆ ತಿಳಿಸಿದರು.





























