Home ಜಿಲ್ಲೆ ಮಂಗಳೂರು ಫಲಾಪೇಕ್ಷೆ ರಹಿತ ಸೇವೆಗೆ ಭಗವಂತನ ಅನುಗ್ರಹ

ಫಲಾಪೇಕ್ಷೆ ರಹಿತ ಸೇವೆಗೆ ಭಗವಂತನ ಅನುಗ್ರಹ

ಪುತ್ತೂರು; ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಹಾಗೂ ಯಶಸ್ವಿಗೊಳಿಸುವ ಕಾರ್ಯ ಕರಾವಳಿಯ ಜನತೆಗೆ ಸಿದ್ಧಿಯಾಗಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ನಡೆಸುವ ಸೇವೆಗೆ ಭಗವಂತನ ಅನುಗ್ರಹ ಸದಾ ಸಿಗುತ್ತದೆ ಎಂದು ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಸೋಮವಾರ ಹನುಮಗಿರಿ ವೈದೇಹಿ ಸಭಾಭವನದಲ್ಲಿ ನಡೆದ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಉಪಸಮಿತಿಗಳ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯರನ್ನು ಸೇರಿಸಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ನಿರ್ಧಾರದಂತೆ ಕಾರ್ಯಗಳು ನಡೆಯುತ್ತದೆ. ವಿವಿಧ ಸಮಿತಿಗಳ ಕರ್ತವ್ಯ ಮತ್ತು ಜವಾಬ್ದಾರಿ ಗಳ ಬಗ್ಗೆ ಮಾಹಿತಿ ನೀಡಿದರು.
ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ ದೈವಜ್ಞ ರ ನಿರ್ದೇಶನದಂತೆ ಬ್ರಹ್ಮಕಲಶೋತ್ಸವಕ್ಕೆ ಸಕಲ ತಯಾರಿಗಳು ನಡೆಯುತ್ತಿದೆ. ಎಲ್ಲರು ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿಗೊಳಿಸಬೇಕು. ಜಪದೀಕ್ಷೆ ನಿರಂತರವಾಗಿ ನಡೆಯುತ್ತಿದೆ. ಊರ ಪರವೂರ ಭಕ್ತರನ್ನು ಸೇರಿಸಿ ೩೦ ಸಮಿತಿಗಳನ್ನು ರಚಿಸಲಾಗಿದೆ.ಮಾ. ೧೮ರಂದು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು. ವಿವಿಧ ಉಪಸಮಿತಿಗಳ ಸಂಚಾಲಕರಿಗೆ ಜವಾಬ್ದಾರಿಯ ಪುಸ್ತಕವನ್ನು ನಳಿನ್ ಕುಮಾರ್ ಹಸ್ತಾಂತರಿಸಿದರು. ರಾಮ ತಾರಕಯಜ್ಞ ದ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಮಂಗಳೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಮನ್ಮಥ ಎಸ್.ಎನ್, ಸುಳ್ಯ ತಾಲೂಕು ಸಮಿತಿಯ ಪ್ರಮುಖ್ ರಾಕೇಶ್ ರೈ ಕಡೆಂಜಿ ಉಪಸ್ಥಿತರಿದ್ದರು. ಸಾಮಾಜಿಕ ಜಾಲತಾಣದ ಪ್ರಮುಖ್ ಹರಿಪ್ರಸಾದ್ ವಂದಿಸಿದರು. ರಾಜೇಂದ್ರ ಪ್ರಸಾದ್ ಮೇನಾಲ ಕಾರ್ಯಕ್ರಮ ನಿರ್ವಹಿಸಿದರು.