Home ಜಿಲ್ಲೆ ಮಂಗಳೂರು ಪೆರ್ನೆ ಗ್ರಾಮಕ್ಕೆ ೬.೪೮ ಕೋಟಿ ಅನುದಾನ; ಅಭಿವೃದ್ಧಿ ಜತೆಗೆ ಜನಾಶೀರ್ವಾದ ಕೇಳುವೆ- ಅಶೋಕ್ ರೈ

ಪೆರ್ನೆ ಗ್ರಾಮಕ್ಕೆ ೬.೪೮ ಕೋಟಿ ಅನುದಾನ; ಅಭಿವೃದ್ಧಿ ಜತೆಗೆ ಜನಾಶೀರ್ವಾದ ಕೇಳುವೆ- ಅಶೋಕ್ ರೈ

ಪುತ್ತೂರು: ಕಳೆದ ಎರಡು ವರ್ಷದ ಅವಧಿಯಲ್ಲಿ ಪೆರ್ನೆ ಗಾಮಕ್ಕೆ ರೂ.೬.೪೮ ಕೋಟಿ ಅನುದಾನ ನೀಡಲಾಗಿದೆ. ಈ ತನಕ ಅನುದಾನವೇ ನೀಡದ ಸ್ಥಳಗಳಿಗೂ ಅನುದಾನ ಕೊಟ್ಟಿದ್ದೇನೆ. ಅನುದಾನದೊಂದಿಗೇ ಗ್ರಾಮ ಭೇಟಿ ಮಾಡುತ್ತಿದ್ದೇನೆ. ಪೆರ್ನೆ ಗ್ರಾಮದ ಇತಿಹಾಸದಲ್ಲಿಯೇ ಇಷ್ಟೊಂದು ಮೊತ್ತ ಬಂದಿರುವುದು ಪ್ರಥಮ. ಯಾವುದೇ ರಾಜಕೀಯ ಮಾಡದೆ ಅನುದಾನ ನೀಡಿದ್ದೇನೆ. ಅಭಿವೃದ್ಧಿ ಮೂಲಕವೇ ಮತ್ತೊಮ್ಮೆ ಜನರ ಆಶೀರ್ವಾದ ಕೇಳುತ್ತೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಪೆರ್ನೆ ಗ್ರಾಮದ ಬಿಳಿಯೂರು ಸೇರಿದಂತೆ ೨೧ ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜನಾಶೀರ್ವಾದದ ನಂಬಿಕೆ
ಮುಂದಿನ ಬಾರಿ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ನಂಬಿಕೆ ಇದೆ. ಜನರ ಬೇಡಿಕೆ ಈಡೇರಿಸಿದ ತೃಪ್ತಿ ನನ್ನಲ್ಲಿದೆ ಎಂದ ಶಾಸಕರು ಅನುದಾನ ಇಡುವಲ್ಲಿ ಕಾಂಗ್ರೆಸ್ -ಬಿಜೆಪಿ ಎಂಬ ರಾಜಕೀಯ ಲೆಕ್ಕಾಚಾರ ಮಾಡಿಲ್ಲ. ಜನ ಅಭಿವೃದ್ದಿಯನ್ನು ಇಷ್ಟಪಡುತ್ತಾರೆ. ಗ್ರಾಮದ ಕಟ್ಟಕಡೆಯ ವ್ಯಕ್ತಿ ನಡೆದಾಡುವ ರಸ್ತೆಯೂ ಅಭಿವೃದ್ದಿಯಾಗಬೇಕು ಎಂಬುದು ನನ್ನ ಕನಸು ಇದೇ ಕಾರಣಕ್ಕೆ ರಸ್ತೆಗೆ ಮೊದಲ ಆದ್ಯತೆಯನ್ನು ನೀಡುತ್ತಿದ್ದೇನೆ ಎಂದು ಅವರು ಹೇಳಿದರು.
ಪಂಚ ಗ್ಯಾರಂಟಿಯಿಂದ ಹಿನ್ನಡೆಯಾಗಿಲ್ಲ- ಉಮಾನಾಥ ಶೆಟ್ಟಿ ಪೆರ್ನೆ
ಪಂಚ ಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿಗೆ ಯಾವುದೇ ಹಿನ್ನಡೆಯಾಗಿಲ್ಲ, ಪ್ರತೀ ಗ್ರಾಮದಲ್ಲೂ ಅಭಿವೃದ್ದಿ ಕೆಲಸಗಳು ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಪೆರ್ನೆ ಗ್ರಾಮಕ್ಕೆ ಎರಡು ವರ್ಷದಲ್ಲಿ ೬ ಕೋಟಿ ಅನುದಾನ ಬಂದಿದೆ, ಇಲ್ಲಿ ಇದುವರೆಗೂ ಆಗದ ಕೆಲಸಗಳು ಶಾಸಕರಿಂದ ಆಗಿದೆ. ಇದಕ್ಕೆ ಶಾಸಕರ ಅಭಿವೃದ್ದಿ ಇಚ್ಚಾಶಕ್ತಿಯೇ ಕಾರಣವಾಗಿದೆ. ಕೇವಲ ಭಾಷಣ ಮಾಡಿದ್ರೆ ಗ್ರಾಮ ಉದ್ದಾರವಾಗುವುದಿಲ್ಲ, ಅಭಿವೃದ್ದಿ ಕೆಲಸ ಮಾಡಿದರೆ ಮಾತ್ರ ಗ್ರಾಮಗಳ ಉದ್ದಾರವಾಗುತ್ತದೆ ಎಂಬುದನ್ನು ಪ್ರತಿಯೊಬ್ಬ ಗ್ರಾಮಸ್ಥರು ಅರಿತುಕೊಳ್ಳಬೇಕು ಎಂದು ಪಂಚ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಹೇಳಿದರು.
ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್ ಮಾತನಾಡಿ, ಶಾಸಕರು ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ, ಮುಂದಿನ ಚುನಾವಣೆಯಲ್ಲಿ ಗ್ರಾಮಸ್ಥರು ಅವರ ಕೈ ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕು. ಮುಂಬರುವ ಗ್ರಾಪಂ, ತಾಪಂ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಮತ್ತು ಆಶೀರ್ವಾದ ಮಾಡಬೇಕು ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ಮಾತನಾಡಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ರಾಜ್ಯ ಎನ್‌ಎಸ್‌ಯುಐ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ವಲಯಾಧ್ಯಕ್ಷರಾದ ಅಬ್ದುಲ್ ಶಾಫಿ ಬೂತ್ ಅಧ್ಯಕ್ಷರುಗಳಾದ ಉಮೇಶ, ಮ್ಯಾಕ್ಷಿಂ ಲೋಬೋ.ಪುಷ್ಕರ ಪೂಜಾರಿ, ಮಿತ್ರದಾಸ ರೈ, ಸುನಿಲ್ ನೆಲ್ಸನ್ ಡಿಸೋಜಾ, ತನಿಯಪ್ಪ ಪೂಜಾರಿ,ಗಣೇಶ್ ರಾಜ್ ರೈ, ಅಬ್ದುಲ್ ಬಶೀರ್, ಅಬ್ದುಲ್ ರಝಾಕ್, ಕಿರಣ್ ಶೆಟ್ಟಿ, ಗಿರಿಶ್ ಪೆರ್ಗಡೆ, ಕೊರಗು, ತೋಯಿಜಾಕ್ಷ ಶೆಟ್ಟಿ, ವಿಜಯಾ, ಗಿರಿಜಾ ಪೆರ್ನೆ,ಸದಾಶಿವ ಶೆಟ್ಟಿ ಬಿಳಿಯೂರು, ಇಬ್ರಾಹಿಂ ಪಲ್ಲತ್ತಾರು, ಗಿರೀಶ್ ರಾವ್ ದೇನ್ಲಡ್ಕ,ಗ್ರಾಪಂ ಸದಸ್ಯೆ ನಳಿನಿ, ವನಿತಾ ಪೆರ್ನೆ, ಭಾರತಿ ಪೆರ್ನೆ, ನರಸಿಂಹ ನಾಯಕ್,ವಿಶ್ವನಾಥ ಶೆಟ್ಟಿ ಪೆರ್ನೆ, ಸೀತಾರಾಮ ಶೆಟ್ಟಿ ಇರುಬೈಲು, ಸುಂಧರ ಮಲ್ಲಡ್ಕ, ರಾಜಗೋಪಾಲ್ ಶೆಟ್ಟಿ, ಡಾ. ರಾಜಗೋಪಾಲ ಶರ್ಮ ಸೇರಿದಂತೆ ಪಕ್ಷದ ಕಾರ್ಯಕರ್ತರು, ಫಲಾನುಭವಿಗಳು ಇದ್ದರು.