
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಫೆ23: ನಾಡಿನ ಹೆಸರಾಂತ ಸಾಹಿತಿ ಹಾಗೂ ವಿಚಾರವಾದಿಗಳಾದ ಡಾ.ಜಿ ರಾಮಕೃಷ್ಣ , ವಿದ್ವಾಂಸ ಸಿ.ಮಹಾದೇವಪ್ಪ ಹಾಗೂ ದಲಿತ ವರ್ಗಗಳ ಹಿತ ಚಿಂತಕ ಡಾ. ಹೆಚ್.ಸಿ. ಸತ್ಯಂ ಘಟಿಕೋತ್ಸವದಲ್ಲಿ ನಾಡೋಜ ಗೌರವ ಪದವಿಗೆ ಭಾಜನರಾಗಿದ್ದಾರೆ ನಾಳೆ ಫೆಬ್ರವರಿ 24ರಂದು ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಕುಲಪತಿ ಡಾ. ಡಿ.ವಿ ಪರಮಶಿವಮೂರ್ತಿ ಹೇಳಿದರು.
ನವರಂಗ ಬಯಲು ರಂಗಮಂದಿರದಲ್ಲಿ ನಡೆಯುವ 34ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯದ ರಾಜ್ಯಪಾಲರು ಆಗಿರುವ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಕೋತ್ಸವದ ಅಧ್ಯಕ್ಷತೆ ವಹಿಸಿ ಈ ಸಾಲಿನ ನಾಡೋಜ ಗೌರವ ಪದವಿಗಳನ್ನು ಪ್ರಧಾನ ಮಾಡಲಿದ್ದಾರೆ ಸಮಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಆಗಿರುವ ಡಾ. ಎಂ .ಸಿ. ಸುಧಾಕರ್ ಡಿಲೀಟ್ ಹಾಗೂ ಪಿ. ಹೆಚ್. ಡಿ ಪದವಿಗಳನ್ನ ಮಾಡಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಂಸ್ಕೃತಿ ಚಿಂತಕ ಡಾಕ್ಟರ್ ಕೆ ಮರಳು ಸಿದ್ದಪ್ಪ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಈ ಬಾರಿಯ ನುಡಿ ಹಬ್ಬದಲ್ಲಿ107 ವಿದ್ಯಾರ್ಥಿಗಳು ಪಿ.ಹೆಚ್. ಡಿ . ಪದವಿ ಪಡೆಯಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಡಾ ವಿರುಪಾಕ್ಷಿ ಪೂಜಾರಹಳ್ಳಿ ಹಣಕಾಸು ಅಧಿಕಾರಿ ಡಾ. ಎ ಶ್ರೀಧರ. ಅಧ್ಯಯನಂಗದ ನಿರ್ದೇಶಕ ಡಾ. ಅಮರೇಶ್ ಯತಗಲ್. ಡಾ. ಎಚ್ ಡಿ ಪ್ರಶಾಂತ್, ಡಾ. ಶಿವಾನಂದ ವಿರಕ್ತಮಠ, ಡಾ. ಶೈಲಜಾ ಹಿರೇಮಠ, ಡಾ. ಅಶೋಕ ಕುಮಾರ ರಂಜರ, ಡಾ. ಎಸ್ ವೈ ಸೋಮಶೇಖರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.





























