
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ನಗರದ ಬಳ್ಳಾರಿ ಮೆಡಿಕಲ್ ಕಾಲೇಜು ಮೈದಾನದಲ್ಲಿ ಇಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಬಳ್ಳಾರಿ-ವಿಜಯನಗರ ಜಿಲ್ಲೆಯ ಕಾಲೇಜುಗಳು, ದಿಶಾಭೋದ್ ಫೌಂಡೇಶನ್ ಹಾಗು ನಾರ್ಕೋಟೆಕ್ ಕಂಟ್ರೋಲ್ ಬ್ಯೂರೋದ ಸಹಯೋಗದೊಂದಿಗೆ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್ ಮತ್ತು ಮಾನವ ಅಂಗಾಂಗ ದಾನದ ಜಾಗೃತಿ ವಾಕಥಾನ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಡೆಯಿತು.
ಬಾವುಟ ತೋರಿಸಿ, ಬೆಲು೭ನ್ ಹಾರಿಬಿಡುವ ಮೂಲಕ ವಾಕಥಾನ್ ಗೆ ಚಾಲನೆ ನೀಡಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ ಅವರು,ಭಾರತ ವಿಶ್ವದ ಗಮನ ಸೆಳೆಯುವ ದೇಶವಾಗಿದ್ದು ಇದರಲ್ಲಿ ಕರ್ನಾಟಕ ಉತ್ತಮ ಸಂಸ್ಕೃತಿಯ ನಾಡಾಗಿದ್ದು. ಇಲ್ಲಿ ಶಿಕ್ಷಣ, ಔದ್ಯೋಗಕದಿಂದ ಅಭಿವೃದ್ಧಿ ಹೊಂದುತ್ತಿದ್ದು. ವಿಕಸತ ಭಾರತಕ್ಕೆ ಸಹಕಾರಿಯಾಗಿದೆ. ಯುವ ಶಕ್ತಿ ನಶಮುಕ್ತರಾಗಿ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿ ಶ್ರಮಿಸಬೇಕು. ಮಾದಕ ವಸ್ತುಗಳು, ಮಾನಸಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಕೆಟ್ಟ ಪರಿಣಾಮ ಬೀರಲಿದೆ ಅದಕ್ಕಾಗಿ ನಶ ಮುಕ್ತ ಭಾರತ ಆಗಬೇಕು ಎಂದರು.
ಕಮ್ಮರಚೇಡು ಮಠದ ಕಲ್ಯಾಣ ಸ್ವಾಮಿ ಮಾತನಾಡಿ. ಉತ್ತಮ ಜಾಗೃತಿ ಮೂಡಿಸುವ ಕಾರಗಯ ಇದಾಗಿದೆ. ಆರೋಗ್ಯ ಭಾಗ್ಯ ಇಲ್ಲದೇ ಇದ್ದರೆ ಏನೂ ಮಾಡಲು ಆಗದು, ಉತ್ತಮ ಆಹಾರ ವಾಯು ದೊರೆಯುವುದೇ ಇರುವುದು ದುರಾದೃಷ್ಟಕರವಾಗಿದೆ. ವಿಜ್ಞಾನ ಬೆಳೆದಂತೆ ಅಜ್ಞಾನ, ಅಂದಾಕರವೂ ಹೆಚ್ಚಿದೆ. ರಕ್ತ, ದೇಹದಾನ ಶ್ರೇಷ್ಟ ನಾನು ನೇತ್ರದಾನ ಮಾಡಿದ್ದೇನೆ. ದೇಹದಾನ ಮಾಡಲು ಸಿದ್ದನಿದ್ದೇನೆ. ಆ ನಿಟ್ಟಿನಲ್ಲಿ ಯುವ ಜನತೆ ಮುಂದಾಗಬೇಕ ಎಂದರು.
ಬಳ್ಳಾರಿ ಪ್ರಾಂತದ ಕ್ರೈಸ್ತ ಧರ್ಮಗುರು ಬಿಷಪ್ ಹೆನ್ರಿ ಡಿ.ಸೋಜ ಅವರು ಮಾತನಾಡಿ, ಪ್ರೀತಿ ಗೌರವ ಇದ್ದರೆ ಮಾತ್ರ ನಶ ಮುಕ್ತ ಆಗಬಹುದು. ಅದಕ್ಕೆ ಕಾಲೇಜ್ ಕ್ಯಾಂಪಸ್ ಮಾತ್ರ ಅಲ್ಲ ಪ್ರತಿ ಕುಟುಂಬ, ನಗರ, ದೇಶ ಆಗಬೇಕು. ಕ್ರೈಸ್ತ ಪಾದ್ರಿಗಳು ಸಹ ಅಂಗಾಗ, ದೇಹ ದಾನ ಮಾಡಿದ್ದಾರೆ. ಇಂತಹ ಗುಣ ಎಲ್ಲರಲ್ಲೂ ಬರಲಿ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ, ಪ್ರತಿಜ್ಞಾ ವಿಧಿ ಭೋದನೆ ಮಾಡಿ, ದೇಶದಲ್ಲಿಯೇ ಮೊದಲನೆಯದಾಗಿ ಈ ಲೈಬ್ರರಿ, ಅನ್ ಲೈನ್ ಟ್ರಾನ್ಸಮಿಷನ್ಸ್, ಪರೀಕ್ಷಗಳು ನಡೆಸುವ ಮೂಲಕ, ರಾಜೀವಗಾಂಧಿ ವಿವಿ ಮಾದರಿಯಾಗಿದೆ. 3.5 ಲಕ್ಷ ವಿದ್ಯಾರ್ಥಿಗಳನ್ನು, 30 ಸಾವಿರ ಸಿಬ್ಬಂದಿಯನ್ನು ಹೊಂದಿದೆ. ನಮ್ಮನ್ನು ಇತರೇ ವಿವಿಗಳು ಅನುಸರಿಸುತ್ತಿವೆ.
ಮಾದಕ ವಸ್ತುಗಳ ಬಳಕೆಯಿಂದ ಮೆದುಳು ನಿಷ್ಕ್ರಿಯತೆ, ಹೃದಯಘಾತ ಹೆಚ್ಚುತ್ತಿದೆ. ಯುವ ಸಮೂಹವನ್ನು ಹಾಳಯ ಮಾಡಲು ದುಷ್ಟ ಶಕ್ತಿಗಳು ಮಾದಕ ವ್ಯಸನಿಗಳನ್ಮಾಗಿ ಮಾಡಲು ಹೊರಟಿವೆ. ಅದಕ್ಕಾಗಿ ನಾವು ಮಾದಕ ವಸ್ತುಗಳ ವಿರೋಧಿಗಳಾಗಬೇಕು. ನಮ್ಮ ವಿವಿಯ ಎಲ್ಲಾ ಕಾಲೇಜುಗಳ ಮಾದಕ ವಸ್ತುಗಳ ರಹಿತ ಕ್ಯಾಂಪಸ್ ಗಳಾಗಬೇಕು.
ಭಾರತದಲ್ಲಿ ವಾರ್ಷಿಕ ಅಂದಾಜು 3 ಲಕ್ಷ ಅಂಗಗಳು ರೋಗಿಗಳಿಗೆ ಬೇಕಾಗುತ್ತವೆ. ಆದರೆ 16 ರಿಂದ 17 ಸಾವಿರ ಮಾತ್ರ ಲಬವ್ಯ ಇವೆ. ಒಬ್ಬ ಮೃತ ದಾನಿಯು ಅಂಗಾಂಗ ದಾನದ ಮೂಲಕ 8 ಜೀವಗಳನ್ನು ಉಳಿಸಬಹುದು ಮತ್ತು 75 ಇತರರ ಜೀವನವನ್ನು ಸುಧಾರಿಸಬಹುದು. ಕಳೆದ ನಾಲ್ಕು ತಿಂಗಳಲ್ಲಿ ಈ ಅಭಿಯಾನದ ಮೂಲಕ ರಾಜ್ಯದಲ್ಲಿ ನಮ್ಮ ವಿವಿಯ ವಿದ್ಯಾರ್ಥಿ ಮತ್ತು ಉಪನ್ಯಾಸಕರು 12 ಸಾವಿರ ಅಂಗಗಳದಾನ ಮಾಡಿದ್ದಾರೆ ಎಂದು ಹೇಳಿದರು.
ಮೇಯರ್ ಪಿ.ಗಾದೆಪ್ಪ. ದಿಶಾಭೋದ್ ಫೌಂಡೇಶನ್ ನ ನಿರ್ದೇಶಕರಾದ ಚಿದಾನಂದ, ಜಾನೆಕುಂಟೆ ಬಸವರಾಜ್ (ಕುಮ್ಮಿ), ನಾರ್ಕೋಟೆಕ್ ಕಂಟ್ರೋಲ್ ಬ್ಯೂರೋದ ರತನ್ ಕೆ. ಜಿಆರ್ ಐ ನ ಬಸವರಾಜ್ ಮೇಟಿ ಮೊದಲಾದವರು ವೇದಿಕೆಯಲ್ಲಿದ್ದರು.
ನಂತರ ನಗರದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ, ದಂತ, ಆಯುರ್ವೇದ, ಹೋಮಿಯೋಪತಿ, ಯುನಾನಿ, ನ್ಯಾಚುರೋಪತಿ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಹೆಲ್ತ್ ಸೈನ್ಸ್ ನ 25ಕ್ಕೂ ಹೆಚ್ಚು ಕಾಲೇಜು ಹಾಗೂ ಇತರೆ ಸಂಸ್ಥೆಗಳು, 400 ಅಧ್ಯಾಪಕರು ಮತ್ತು 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಕಥಾನ್ನಲ್ಲಿ ಭಾಗವಹಿಸಿದ್ದರು.
ವಾಕಥಾನ್ ಮೆಡಿಕಲ್ ಕಾಲೇಜು ಮೈದಾನದಿಂದ ಸುಧಾ ಕ್ರಾಸ್ , ಇನ್ ಫಾಂಟರಿ ರೋಡ್, ಕನಕದಾಸ ವೃತ್ತ ಎಸ್.ಪಿ.ಸರ್ಕಲ್, ದುರ್ಗಮ್ಮ ಗುಡಿ ಮಾರ್ಗವಾಗಿ ಕಪ್ಪಗಲ್ಲು ರಸ್ತೆ ವಿ.ವೀ ಸಂಘದ ಕಿತ್ತೂರುರಾಣಿ ಚೆನ್ನಮ್ಮ ಪ್ರೌಢಶಾಲೆವರೆಗೆ ನಡೆಯಿತು.
ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಬೇಕು ಎಂಬ ಭಾರತ ಸರ್ಕಾರದ ಆದೇಶದಂತೆ “ವಂದೇ ಮಾತರಂ” ಆರಂಭ ಮಾಡುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ನಂತರ ರಾಷ್ಟ್ರಗೀತೆ, ನಾಡಗೀತೆ ಹಾಡಲಾಯ್ತು.
ದಿಶಾಭೋದ್ ಫೌಂಡೇಶನ್ ನ ನಿರ್ದೇಶಕ ಎಸ್.ಪಿ.ಚಿದಾನಂದ ಸ್ವಾಗತಿಸಿದರು. ಭಾವನಾ ರಘು ವಿಷಯ ಮಂಡಿಸಿದರು. ಬಸವರಾಜ್ ಅಮಾತಿ ಕಾರ್ಯಕ್ರಮ ನಿರೂಪಿಸಿದರು.ತಾರನಾಥ ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಗಾಣಿಗೇರ ವಂದನಾರ್ಪಣೆ ಮಾಡಿದರು.





















