
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.01: ಕೊಲ್ಲಿ ಯುದ್ಧದಿಂದ ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ಗಳ ಸರಬರಾಜಿನಲ್ಲಿ ಕೊರತೆ ಇಲ್ಲ. ಜನ ಕೆಲವು ಕಡೆ ವಿನಾ ಕಾರಣ ಗ್ಯಾಸ್ ಎಜೆನ್ಸಿಗಳ ಮುಂದೆ ಹೋಗುವ ಅವಶಕತೆ ಇಲ್ಲ. ನಗರದಲ್ಲಿ 25 ದಿನಕ್ಕೆ ಗ್ರಾಮೀಣದಲ್ಲಿ 45 ದಿನಕ್ಕೆ ಒಂದು ಸಿಲಿಂಡರನ್ನು ಗ್ರಾಹಕರಿಗೆ ನೀಡಲಿದೆಂದು ಡಿಸಿ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.
ಅವರು ನಗರದಲ್ಲಿ ನಿನ್ನೆ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ 27 ಅಡುಗೆ ಅನಿಲ ಸಿಲುಂಡರ್ ವಿತರಿಸುವ ಎಜೆನ್ಸಿಗಳು ಇವೆ. ನಗರದಲ್ಲಿ 227838 ಗ್ರಾಮೀಣದಲ್ಲಿ 164497 ಸಂಪರ್ಕಗಳಿವೆ. ಪ್ರತಿದಿನ 8 ರಿಂದ 10 ಸಾವಿರ ಸಿಲಿಂಡರ್ ಗಳು ಬರುತ್ತಿವೆ. ಅದೇ ರೀತಿ ದಿನಕ್ಕೆ ಒಂದು ಸಾವಿರ ವಾಣಿಜ್ಯ ಸಿಲಿಂಡರ್ ಗಳು ಬೇಕು ಇದರಲ್ಲಿ ಕೊಂಚ ಕೊರತೆ ಇದೆ. ಸರಿ ಹೋಗಲಿದೆಂದರು
ಕಂಪ್ಲಿ, ಕುರುಗೋಡು ಸೇರಿದಂತೆ ಹಲವಡೆ ಜನರು ಸಮಸ್ಯೆ ಎಂದು ಎಜೆನ್ಸಿ ಅಂಗಡಿಗಳ ಮುಂದೆ ಹೋಗಿದ್ದಾರೆ. ಸಿಗುತ್ತದೋ ಇಲ್ಲವೋ ಎಂದು ಪ್ಯಾನಿಕ್ ಆಗಿದ್ದಾರೆ ಅಡುಗೆ ಸಿಲಿಂಡರ್ ಸಮಸ್ಯೆ ಇಲ್ಲ ಎಂದರು.
ಅಡುಗೆ ಅನಿಲ ಸಿಲಿಂಡರ್ ನ್ನು ಹೆಚ್ಚಿನ ಧರಕ್ಕೆ ಮಸರಾಟ ಮಾಡುವ ಮತ್ತು ಹೊಟೇಲ್ ಗಳಲ್ಲಿ ಬಳಕೆ ಹಾಗು ವಾಣಿಜ್ಯ ಸಿಲಿಂಡರ್ ಗಳಿಗೆ ತಮಬುವ ಬಗ್ಗೆ ದೂರುಗಳು ಬಂದಿವೆ. ಪರಿಶೀಲನೆಗಾಗಿ ಆಯಾ ತಾಲೂಕಿನಲ್ಲಿ ತಂಡಗಳನ್ನು ರಚಿಸಿದೆ. ಒದು ಪರಿಶೀಲನೆ ನಡೆಸಲಿದೆ. ಜನರು ತಹಸಿಲ್ದಾರ್ ನೇತೃತ್ವದ ತಂಡಕ್ಕೆ ದೂರು ನೀಡಬಹುದು ಎಂದರು.




















