
(ಸಂಜೆವಾಣಿ ಪ್ರತಿನಿಧಿಯಿಂದ )
ಬಳ್ಳಾರಿ, ಫೆ.23: ಜಿಲ್ಲೆಯ ಸಂಡೂರು ತಾಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಶಿವಶರಣೆ ಅಕ್ಕಮಹಾದೇವಿ ಪುರಾಣ ಪ್ರವಚನ ಮತ್ತು ಶರಣ ಸಿದ್ದಯ್ಯತಾತನವರ 17 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನಿನ್ನೆ ರಾತ್ರಿ ಹರಗಿನದೋಣಿಯ ಪಂಚವಣಿಗಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳ ತುಲಾಭಾರ ನಡೆಯಿತು.
ತುಲಾಭಾರ ಸೇವೆ ಪಡೆದ ಹರಗಿನದೋಣಿ ಶ್ರೀಗಳು ಆಶೀರ್ವಚನನೀಡಿ. ಜನಸೇವೆಗಾಗಿ ಬದುಕಿದವರನ್ನು ತುಲಾಭಾರ ಮಾಡುತ್ತದೆ. ಅದರ ಮೂಲಕ ಧರ್ಮದ ಸೇವೆಯೂ ಆಗುತ್ತದೆ. ಇದರಲ್ಲಿ ಅನೇಕ ಇವೆ. ಸಂಕಲ್ಪಕ್ಕೆ, ದೋಷನಿವಾರಣೆ ಮೊದಲಾದವುಗಳಿಗೆ ತುಲಾಭಾರ ಮಾಡುತ್ತದೆ. ಪ್ರಮಾಣಿಕತೆ, ನಂಬಿಕೆ ಇದ್ದರೆ ಮಾತ್ರ ದೇವರ ಅನುಗ್ರಹ ದೊರೆಯುತ್ತದೆ. ಅದಕ್ಕೂ ಗುರುವಿನ ಮಾರ್ಗದರ್ಶನದಲ್ಲಿ ಅಂತರಗದ ಕಣ್ಣಿನಿಂದ ಮಾತ್ರ ದೈವವನ್ನು ಕಾಣಬಹುದಯ ಅದಕ್ಕೆ ಏಕಾಗ್ರತೆಯೂ ಬೇಕು ಎಂದರು.
ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯ ಸ್ವಾಮಿಯವರು ಆಶಿರ್ವಚನ ನೀಡಿ. ಸತ್ಯದ ಜೊತೆ ಬದುಕಬೇಕು. ಆದರೆ ಸತ್ಯದಿಂದಲೇ ನಡೆಯುವುದು ಎಲ್ಲರಿಂದಲೂ ಸಾಧ್ಯವಿಲ್ಲ ಅಂತಹುದರ ಸಾಧನೆ ಸಿದ್ದಯ್ಯತಾತನವರಿಂದ ಮಾತ್ರ ಸಾಧ್ಯ. ಇಂದಿನ ದಿನದಲ್ಲಿ ವಿದ್ಯೆ ಹೆಚ್ಚಿದೆ, ಆದರೆ ಸಂಬಂಧ ಹಳಸುತ್ತಿದೆ. ನೈತಿಕತೆ ಕುಸಿಯುತ್ತಿದೆ. ಸಮಾಜದಲ್ಲಿ ಆಹಾರ ತಪ್ಪುತ್ತಿದೆ, ಅದರಿಂದ ಆರೋಗ್ಯ ತಪ್ಪುತ್ತಿದೆ. ಹಾಗಾಗಿ ಆಲೋಚನೆಯೂ ತಪ್ಪುತ್ತಿದೆ. ಎಲ್ಲರೊಳಗೂ ಒಬ್ಬನೇ ಇದ್ದಾನೆಂಬದನ್ನು ಅರ್ಥೈಸಿಕೊಂಡಾಗ ಮಾತ್ರ ಪುರಾಣದ ಸಾರ್ಥಕವಾಗುತ್ತದೆಂದರು.
ರೇವಯ್ಯ ಸ್ವಾಮಿ, ಹಿರಿಯ ಪತ್ರಕರ್ತ ಶಶಿಧರ ಮೇಟಿ, ನುಡಿನಮನ ಸಲ್ಲಿಸಿದರು. ಗ್ರಾಮದ ಹಿರಿಯರಾದ ಮಹಾರುದ್ರಗೌಡ, ಕಾರ್ಯನಿರತ ಪರ್ತಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ, ಹೊಸಪೇಟೆಯ ಸಿದ್ದಲಿಂಗಸ್ವಾಮಿ, ಜೋಳದರಾಶಿ ಪ್ಯಾಟಾಳ್ ಬಸವರಾಜ್, ನಿವೃತ್ತ ಚಿತ್ರಕಲಾ ಶಿಕ್ಷಕ ಆರ್.ಬಿ.ನಾಯಕ್, ಸಿಂದವಾಳದ ಭೀಮಯ್ಯಸ್ವಾಮಿ. ಡಿ.ನಾಗೇನಹಳ್ಳಿ ಮಲ್ಲನಗೌಡ, ಬಲಗುಡ್ಡ ಶಿವು, ಲೆಕ್ಕಪರಿಶೋಧಕ ಮುದ್ದನಗೌಡ, ಎಮ್ಮಿಗನೂರಿನ ಬಜಾರ್ ಬಸವರಾಜ್, ಸೂಗೂರು ವಿಶ್ವನಾಥ, ಶ್ರೀಧರಮೂರ್ತಿ. ಏಳುಬೆಂಚೆ ಕೆ.ಎಂ.ಸಿದ್ದಲಿಂಗಯ್ಯ ಶ್ರೀನಿವಾಸರೆಡ್ಡಿ, ಉಡೇದ ಮೋಹನ್ ಕುಮಾರ್, ಪರಮೇಶಗೌಡ, ಕಾಡಸಿದ್ದಪ್ಪ ಮೊಲಾದವರು ಭಾಗವಹಿಸಿದ್ದರು.





























