
ಸಂಜೆವಾಣಿ ವಾರ್ತೆ
ಕುರುಗೋಡು:-ಮಾ,3- ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ “ವೀರಶೈವ ಸಮಾಜದವರಿಂದ” ಕಲ್ಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನ ನಿನ್ನೆ ಪ್ರಾರಂಭವಾಗಿದ್ದು 21 ದಿನಗಳ ಕಾಲ ಪುರಾಣ ವಾಚನ ಜರುಗಲಿದೆ.
ನಮ್ಮ ಗ್ರಾಮೀಣ ಭಾಗದಲ್ಲಿ ಶರಣರ ತತ್ವಗಳನ್ನು ಎಲ್ಲರೂ ತಿಳಿದುಕೊಂಡು ಸಮಾಜದಲ್ಲಿ ಅವರ ಪಾಲನೆಗಳನ್ನು ಅರಿತು ನಡೆಯಬೇಕು ಎಂದು ನಿವೃತ್ತ ಶಿಕ್ಷಕ ಶ್ರೀ ಡಿ.ಎಂ.ಸದಾಶಿವಯ್ಯ ಸ್ವಾಮಿ ಹೇಳಿದರು.
ಶರಣಬಸವೇಶ್ವರರು ಕೇವಲ ಧಾರ್ಮಿಕ ಸಂತನಾಗಿರದೆ ಕಾಯಕ ಮತ್ತು ಜ್ಞಾನದ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ಮಹಾನ್ ದಾರ್ಶನಿಕರಾಗಿದ್ದರು ಎಂದು ಏಳುಬೆಂಚಿ ಮಠದ ಶ್ರೀ ವೈ.ಎಂ. ಶಿವಕುಮಾರ ಸ್ವಾಮೀಜಿ ಹೇಳಿದರು.
ಶ್ರೀ ಶರಣಬಸವೇಶ್ವರ ಮಾನವತಾವಾದವನ್ನು ಎತ್ತಿ ಹಿಡಿದ ಮಹಾನ್ ಸಂತರು. ಜಾತಿ-ಭೇದವಿಲ್ಲದ ಸಮಾಜಗುರು-ಶಿಷ್ಯ ಪರಂಪರೆ ಮತ್ತು ಬದುಕಿನಲ್ಲಿ ಸರಳತೆಯನ್ನು ಬೋಧಿಸಿದ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಪ್ರಮುಖ ತತ್ವಗಳನ್ನು ಈ ಎಲ್ಲರೂ ಅಳವಡಿಸಿಕೊಂಡು ನಡೆಯಬೇಕು ಎಂದು ಶ್ರೀ.ಕರುಣಾಮೂರ್ತಿ ಶಾಸ್ತ್ರಿಗಳು ಹೇಳಿದರು.
ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರು 18ನೇ ಶತಮಾನದ (ಸುಮಾರು 1746) ಲಿಂಗಾಯತ ಸಂತದಾರ್ಶನಿಕ ಮತ್ತು ದಾಸೋಹ ಪರಂಪರೆಯ ಪ್ರವರ್ತಕರು. ಜೇವರ್ಗಿ ತಾಲ್ಲೂಕಿನ ಅರಳಗುಂಡಗಿಯಲ್ಲಿ ಜನಿಸಿದ ಇವರುಕಲಬುರಗಿಯಲ್ಲಿ ನೆಲೆಸಿ ‘ಕಾಯಕವೇ ಕೈಲಾಸ’ ತತ್ವದಡಿ ಅನದಾಸೋಹ (ಅನ್ನದಾನ) ಮತ್ತು ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ಊರಿನ ಮುಖಂಡ ಶ್ರೀ. ವೈ.ಜಿ ತಮ್ಮನಗೌಡ ಹೇಳಿದರು.
ನಮ್ಮ ಕಲ್ಬುರ್ಗಿ ಶ್ರೀ ಶರಣಬಸವೇಶ್ವರವರು ವಿದ್ಯಾ ಮತ್ತು ಹಸಿದವರಿಗೆ ಊಟ ನೀಡಬೇಕು ನಮ್ಮ ಜೀವನದಲ್ಲಿ ಇದಕ್ಕಿಂತ ದೊಡ್ಡ ದಾನ ಇನ್ನೊಂದು ಇಲ್ಲ ಎಲ್ಲಾ ಕಾಯಕ ಯೋಗಿಗಳು ಜನರಿಗೆ ಸರಿಯಾದ ಸಮಯಕ್ಕೆ ಏನು ನೀಡಬೇಕು ಅದನ್ನು ಕೊಟ್ಟು ಸಲುಹಿದವರು ನಮ್ಮ ಗ್ರಾಮದ ಜನರು ಶ್ರೀ ಶರಣಬಸವೇಶ್ವರ ಮಾರ್ಗದೊಳಗೆ ನಡೆಯಬೇಕು ಎಂದು ಊರಿನ ಮುಖಂಡ ಶ್ರೀ. ಜಿ.ಕುಮಾರಗೌಡರ ನಯನಗೌಡರು ಹೇಳಿದರು.
ಪುರಾಣ ವಾಚನಕಾರರು:-ಶ್ರೀ ಪಕೇಶ್ವರ ಶಾಸ್ತ್ರಿಗಳು ಹಿರೇಮಠ ಬೆಳ್ಳಹಟ್ಟಿ,ದಿಲ್ ರೂಬ್ ವಾದಕರು:-ಎಂ.ಶಾಂತವೀರಯ್ಯ ಸ್ವಾಮಿ ಹಿರೇಮಠ, ತಬಲಾ ವಾದಕರು:-ಶ್ರೀ ಮಾನೇಶ ಕುಮಾರ್ ಹಾಲವಿ, ಹಾರ್ಮೂನಿಯಂ :-ಗಾನಕೋಗಿಲೆ ಶ್ರೀ ಪಂಪನಗೌಡ 64 ಹಳೇಕೋಟೆ ಕಾರ್ಯಕ್ರಮ ಮಾಡಿದರು.
ಪುರಾಣದಲ್ಲಿ ಭಾಗವಹಿಸಿದವರು:-ಶ್ರೀಡಿ.ಎಂ.ಚೆನ್ನಯ್ಯ ಸ್ವಾಮಿ, ಶ್ರೀ ಗೋಡೆ ಎರ್ರೆಯಪ್ಪಗೌಡ,ಶ್ರೀ, ಬಲಿಗೌಡರ ರುದ್ರಗೌಡ,ಶ್ರೀ. ಅಂಗಡಿ ಹಗರಪ್ಪ ಗೌಡ, ಶ್ರೀ. ಕಾರೆ ಮೌನೇಶಗೌಡ,ಶ್ರೀ ಕರ್ಚೇಡ್ ಮಹಾದೇವ ಗೌಡ,ಶ್ರೀ ಓಂಕಾರ ಗೌಡ, ಶ್ರೀ ಎಣ್ಣೆ ಪಂಪಣ್ಣ,ಶ್ರೀ ಕೊಂಚಗೇರಿ ವೀರೇಶಪ್ಪ,ಶ್ರೀ. ಪೋರನಗೌಡರ ಶಂಕರಗೌಡ,ಶ್ರೀ.ಅಂಗಡಿ ರಮೇಶ ಊರಿನ ಎಲ್ಲಾ ವೀರಶೈವ ಧರ್ಮದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



























