
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.03: ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದ ಎಸ್ ಡಬ್ಲ್ಯೂ ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ನಿಮಿತ್ತ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಮುಖ್ಯ ಶಿಕ್ಷಕ ಮಂಜಪ್ಪ ಹೂಗಾರ ಮಾತನಾಡಿ ಇಂದು ಕೇವಲ ಒಬ್ಬ ಮಹಾನ್ -ವಿಜ್ಞಾನಿಯನ್ನು ನೆನಪಿಸಿಕೊಳ್ಳುವುದಲ್ಲ – ಇದು ನಮ್ಮ ಜೀವನದಲ್ಲಿ ವಿಜ್ಞಾನದ ಶಕ್ತಿಯನ್ನು ಗುರುತಿಸುವುದರ ಬಗ್ಗೆ ವಿಜ್ಞಾನವು ಕೇವಲ ಪಠ್ಯ ಪುಸ್ತಕಗಳು ಅಥವಾ ಪರೀಕ್ಷೆಯಲ್ಲಿ ಕಂಡು ಬರುವುದಿಲ್ಲ ಅದು ನಮ್ಮ ಸುತ್ತಲೂ ಇದೆ ಎಂದರು. ನಂತರ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಪಾಠ ಆಧಾರಿತ ವಿಜ್ಞಾನದ ಪ್ರಯೋಗಗಳನ್ನು ಪ್ರದರ್ಶಿಸಿ ನೆರೆದವರ ಗಮನವನ್ನು ಸೆಳೆದರು ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಜ್ಯೋತಿ, ಸಂಗಮ್ಮ,ಲಕ್ಷ್ಮಿ, ಶಂಕ್ರಮ್ಮ,ವೀರೇಶ,ಮಲ್ಲೇಶ,ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.



























