ಬೆಂಗಳೂರು, ನ. ೧೬- ರಾಹುಲ್ ಗಾಂಧಿ ಅವರ ಫೋನ್ ಕದ್ದಾಳಿಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ಪೆಗಾಸಿಸ್ ಸ್ಪೈವೇರ್ ಅನ್ನು ಇಸ್ರೇಲ್ನಿಂದ ಖರೀದಿಸಿರುವುದು ನಿಜವೇ ಎಂದು ಪ್ರಶ್ನಿಸಿದ್ದಾರೆ.
“ಈ ಸಾಫ್ಟ್ವೇರ್ ಖರೀದಿಗೆ ಸಂಬಂಧಿಸಿದ ದಾಖಲೆಗಳು ಸುಪ್ರೀಂ ಕೋರ್ಟ್ನಲ್ಲಿವೆಯೇ ಮೊದಲು ಯಾರ ಮೇಲೆ ಪ್ರಯೋಗ ಮಾಡಲಾಯಿತು? ಅವರದೇ ಕ್ಯಾಬಿನೆಟ್ ಸಹೋದ್ಯೋಗಿಗಳ ಮೇಲೆ ಪ್ರಯೋಗ ನಡೆಸಿ, ನಂತರ ವಿರೋಧ ಪಕ್ಷಕ್ಕೆ ಬಳಸಲಾಗಿದೆ” ಎಂದು ಖರ್ಗೆ ಆರೋಪಿಸಿದರು.
ಗುಜರಾತ್ ಮಾಡೆಲ್ ವಿರುದ್ಧ ಟೀಕೆ:
“ಇದು ನಿಜವಾದ ಗುಜರಾತ್ ಮಾಡೆಲ್ ಆಫ್ ಡೆವಲಪ್ಮೆಂಟ್. ಗುಜರಾತ್ನಲ್ಲೂ ಇದೇ ರೀತಿ ಮಾಡಿ ವಿರೋಧ ಪಕ್ಷವನ್ನು ಒತ್ತಡಕ್ಕೆ ಸಿಲುಕಿಸಲು ಪ್ರಯತ್ನಿಸಿದರು. ಈಗ ಅದೇ ಮಾದರಿಯನ್ನು ರಾಷ್ಟ್ರಾದ್ಯಂತ ಅನುಸರಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಬಿಜೆಪಿ ವಿರುದ್ಧ ತೀವ್ರ ಆರೋಪ
“ಕಾಂಗ್ರೆಸ್ನಲ್ಲಿದ್ದರೆ ದುಷ್ಟರು, ಭ್ರಷ್ಟರು ಎಂದು ಬಿಂಬಿಸಿ, ಬಿಜೆಪಿ ಸೇರಿಸಿದ ತಕ್ಷಣ ಅವರನ್ನು ಸಂಪೂರ್ಣ ಸ್ವಚ್ಛ ವ್ಯಕ್ತಿಯಾಗಿ ತೋರಿಸುವ ’ವಾಷಿಂಗ್ ಮಿಷಿನ್’ ಅವರ ಬಳಿ ಇದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಎಲ್ಲೆಡೆ ಇದು ನಡೆದಿದೆ” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ-ಶಾ ಅಸುರಕ್ಷಿತ ಎಂದ ಖರ್ಗೆ:
“ಮೋದಿ ಮತ್ತು ಅಮಿತ್ ಶಾ ಅವರು ಸಂಪೂರ್ಣ ಅಸುರಕ್ಷಿತರಾಗಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ಅವರು ಏನೂ ಸಾಧಿಸಿಲ್ಲ. ಇದನ್ನು ಜನರಿಗೆ ತೋರಿಸಿದ್ದೇವೆ – ವೋಟ್ ಚೋರಿ, ಚುನಾವಣಾ ಆಯೋಗದ ವೈಫಲ್ಯ, ನಿರುದ್ಯೋಗ ಸಮಸ್ಯೆ, ಚೀನಾ ಮತ್ತು ಪಾಕಿಸ್ತಾನದ ವಿದೇಶಿ ನೀತಿಗಳ ವೈಫಲ್ಯ ಇವೆಲ್ಲವನ್ನೂ ದೇಶದ ಜನರು ಪ್ರಶ್ನಿಸುತ್ತಿದ್ದಾರೆ” ಎಂದರು.
“ಇವೆಲ್ಲವನ್ನೂ ದುರ್ಬಲಗೊಳಿಸಲು, ಹೆದರಿಸಲು, ಬೆದರಿಸಲು ಮತ್ತು ವಿರೋಧ ಪಕ್ಷವನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ವಿರೋಧ ಪಕ್ಷದ ನಾಯಕರ ಫೋನ್ ಕದ್ದಾಳಿಕೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳದ್ದೂ ೧೦೦% ಆಗುತ್ತದೆ. ಗೃಹ ಸಚಿವನಾದ ನನ್ನ ಮೇಲೂ ಆಗುತ್ತೆ, ಮಾಡೇ ಮಾಡುತ್ತಾರೆ. ನನಗೆ ಆರ್ ಎಸ್ ಎಸ್ ಬಿಡುತ್ತಾರೆಯೇ” ಎಂದು ಖರ್ಗೆ ಪ್ರಶ್ನಿಸಿದರು.
“ನಿಮಗೆ ಫೋನ್ ಬೆದರಿಕೆ ಕರೆಗಳು ಬಂದಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದವರು ಯಾರ್ಯಾರು ಅವರಿಗೆ ಬೆದರಿಕೆ ಎನಿಸುತ್ತಾರೋ ಯಾರ್ಯಾರು ವೈಜ್ಞಾನಿಕವಾಗಿ ಲಾಜಿಕಲ್ಲಾಗಿ ಪ್ರಶ್ನೆ ಮಾಡುತ್ತಾರೋ ಅದು ಅವರಿಗೆ ಇಷ್ಟ ಆಗಲ್ಲ ಹಾಗಾಗಿ ಫೋನ್ ಕದ್ದಾಲಿಕೆ ಮಾಡುತ್ತಾರೆ ಎಂದು ದೂರಿದರು


















