Home Uncategorized ಕಾಕರ್ಲತೋಟ ಕನುಗೋಲು ತಿಮ್ಮಪ್ಪರವರು ಅಭಿವೃದ್ಧಿ ಹರಿಕಾರರು

ಕಾಕರ್ಲತೋಟ ಕನುಗೋಲು ತಿಮ್ಮಪ್ಪರವರು ಅಭಿವೃದ್ಧಿ ಹರಿಕಾರರು

ಸಂಜೆವಾಣಿ ವಾರ್ತೆ

  ಬಳ್ಳಾರಿ, ಮೇ.24 ನಗರದ ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ  ಕಾಕರ್ಲತೋಟ ಕನುಗೋಲು ತಿಮ್ಮಪ್ಪ ರವರ 26ನೇ ವಾರ್ಷಿಕ  ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಕನುಗೋಲು ತಿಮ್ಮಪ್ಪ ರವರ ಕುಟುಂಬದವರು ಸೇರಿ ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸುವ ಮೂಲಕ ಉದ್ಘಾಟಿಸಿದರು. ಕಾಕರ್ಲತೋಟ ಕನುಗೋಲು ತಿಮ್ಮಪ್ಪರವರ 26ನೇ ವಾರ್ಷಿಕ ಪುಣ್ಯ ಸ್ಮರಣೆ ಕಾರ್ಯಕ್ರಮದ ನಿಮಿತ್ತ ನಿವೃತ್ತ ಉಪನ್ಯಾಸಕರು ಹಾಗೂ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯರಾದ ಎನ್.ಬಸವರಾಜ್ ರವರು ಮಾತನಾಡುತ್ತಾ ಬಳ್ಳಾರಿಯ ಕಾಕರ್ಲತೋಟ ಗ್ರಾಮದಲ್ಲಿ 07 ,05,1903 ರರಲ್ಲಿ ದೊಡ್ಡ ವೀರಪ್ಪ ರವರ ಮಗನಾಗಿ ಜನಿಸಿದರು.ಮುಂದೆ ಬೆಳೆದು ವ್ಯಾಪಾರವನ್ನು ಪ್ರಾರಂಭಿಸಿ ಉತ್ತಮ ವ್ಯಾಪಾರಿಗಳೆನಿಸಿದರು.1955 ರಲ್ಲಿ ಬಳ್ಳಾರಿ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಗೆದ್ದು ಕೌನ್ಸಿಲರ್ ಆಗಿ ನಗರಕ್ಕೆ ಸೇವೆ ಸಲ್ಲಿಸಿದರು. 1962/69ರ ಮದ್ಯದಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆಗೆ ಹಾಗೂ ಬಳ್ಳಾರಿ ಜನತಾ ಬಜಾರ್ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದರು.1979ರಿಂದ ರಾಜಕೀಯದಲ್ಲಿ ಬೆಳೆದು ಜನತಾ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.1971ರಿಂದ 2000 ವರೆಗೆ ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾಗಿ ಎಲ್ಲರ ಸಹಕಾರದಿಂದ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಿದರು.  ಹಾಗೆಯೇ1981 ರಿಂದ 2000ರದ ವರೆಗೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ರಾಗಿ ಸ್ವಂತ ಕಲಾಕಾರರಾಗಿ ಕನ್ನಡ ಹಾಗೂ ತೆಲುಗು ನಾಟಕ ಗಳನ್ನು ಪ್ರೋತ್ಸಾಹಿಸಿ ಉತ್ತಮ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.   1980/81ರಲ್ಲಿ ಬಳ್ಳಾರಿ ರಾಘವರ ಶತ ಜಯಂತಿ ಉತ್ಸವನ್ನು ವಿಜೃಂಭಣೆಯಿಂದ ಆಚರಿಸಿದರು.ಉಕ್ಕಿನ ಮನುಷ್ಯ ನೆಂದು ಖ್ಯಾತರಾಗಿ ಸದಾ ಸನ್ಮಾರ್ಗದಲ್ಲಿ ನಡೆದು ಇತರರಿಗೂ ಮಾರ್ಗದರ್ಶಕರಾಗಿ ಬಾಳಿ 22/05/2000  ದಲ್ಲಿ ಸ್ವರ್ಗಸ್ಥರಾದರುಬಳ್ಳಾರಿಯ ಎರಡೂ ಸಂಸ್ಥೆಗಳಿಗೆ .ಅವರ ಕೊಡುಗೆ ಅಪಾರವಾಗಿದೆ ಎಂದು  ಕನುಗೋಲು ತಿಮ್ಮಪ್ಪ ನವರ ಸಾಧನೆಯನ್ನು ಸ್ಮರಿಸಿದರು. ನಿರೂಪಣೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಎನ್ ಪ್ರಕಾಶ್ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಶ್ರೀ ಕೆ ಚನ್ನಪ್ಪ, ಉಪಾಧ್ಯಕ್ಷರ ಗಳಾದ ಶ್ರೀ ಹೆಚ್ ವಿಷ್ಣುವರ್ಧನ್ ರೆಡ್ಡಿ, ಬಾಣ ಪುರರಮೇಶ್ ಗೌಡ, ಖಜಾಂಚಿ ಶ್ರೀ ಪಿ. ಧನಂಜಯ,ಜಂಟಿ ಕಾರ್ಯದರ್ಶಿ ಶ್ರೀ ಪಿ. ಎಂ .ನಟರಾಜ್, ಯಂ ರಾಮಾಂಜನೇಯಲು, ಕೆ.ರಾಮಾಂಜನೇಯಲು, ಕೆ ಶ್ಯಾಮ ಸುಂದರ್, ಕನುಗೋಲು ಅನಿಲ್ ಬಾಬು, ಕೆ ಕೃಷ್ಣ,ಶೇಷ ರೆಡ್ಡಿ, ವಿ ರಾಮಚಂದ್ರ, ಭೀಮನೇನಿ ಭಾಸ್ಕರ್,ಭೀಮನೇನಿ ಪ್ರಸಾದ್ ,ರಮಣಪ್ಪ ಭಜಂತ್ರಿ ಮತ್ತು ಕನುಗೋಲು ತಿಮ್ಮಪ್ಪ ರವರ ಕುಟುಂಬದವರು,ಕಲಾವಿದರು ಭಾಗವಹಿಸಿದ್ದರು.ನಂತರ ಶ್ರೀ ಚೆರುಕೂರಿ

ಸಾಂಬಶಿವರಾವು ಅವರ ರಚನೆಯಲ್ಲಿ ಶ್ರೀ ಲಾಲ್ ರೆಡ್ಡಿ ನಿರ್ದೇಶನದಲ್ಲಿ

ರಂಗ ಸಂಸ್ಕೃತಿ ವತಿಯಿಂದ *ಅಂತಿಮ ತೀರ್ಪು* ತೆಲುಗು ಸಾಮಾಜಿಕ  ನಾಟಕ ಪ್ರದರ್ಶನ ಗೊಂಡಿತು. ಕಲಾವಿದರಗಳಾದ ಲಾಲ್ ರೆಡ್ಡಿ, ರವಿಂದ್ರ ನಾಥ್, ಎಂ. ಶ್ರೀನಿವಾಸಲು, ವೀಣ್ ಅದೋನಿ ಅದ್ಬುತ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಸೂರೆ ಗೊಂಡಿತು.