Home ಜಿಲ್ಲೆ ಕಲಬುರಗಿ ಚಿತ್ತಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜಿಪಂ ಸಿಇಒ ಭೇಟಿ

ಚಿತ್ತಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜಿಪಂ ಸಿಇಒ ಭೇಟಿ

ಕಲಬುರಗಿ,ಜೂ 10: ಜಿಪಂ ಸಿಇಒ ರಾಹುಲ್ ಸಂಕನೂರ್ ಅವರು ಮಂಗಳವಾರ ಚಿತ್ತಾಪುರ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಮೃದ್ಧಿ ಗ್ರಾಮ ಯೋಜನೆಯಡಿಯ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಮೊದಲು ಮಾಡಬೂಳ ಗ್ರಾಮದ ರಸ್ತೆ ಹಾಗೂ ಚರಂಡಿ ಕಾಮಗಾರಿ, ಗುಂಡಗುರ್ತಿ ಗ್ರಾಮದ ರಸ್ತೆ ಹಾಗೂ ಚರಂಡಿ ಕಾಮಗಾರಿ, ದಂಡೋತಿ ಗ್ರಾಮದಲ್ಲಿ ಒಖಈ ಘಟಕ ಕಾಮಗಾರಿ,ಸಮೃದ್ಧಿ ಹಾಗೂ ಹನಡಿ ಯೋಜನೆಯಡಿ ಮರಗೋಳ ಗ್ರಾಮದ ರಸ್ತೆ ಮತ್ತು ಚರಂಡಿ ಕಾಮಗಾರಿ,ಭಾಗೋಡಿ ಗ್ರಾಮದಲ್ಲಿ ಸಮೃದ್ಧಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಮತ್ತು ಈSಖಿP ಕಾಮಗಾರಿ,ಸಮೃದ್ಧಿ ಯೋಜನೆಯಡಿ ಖಾದರ್ಗಿ ಚರಂಡಿ ಕಾಮಗಾರಿ
ಚಿತ್ತಾಪುರ ಪಟ್ಟಣದ ತಾಲೂಕ ಪಂಚಾಯತ್ ಕಟ್ಟಡ ಕಾಮಗಾರಿ,ಸಮೃದ್ಧಿ ಯೋಜನೆಯಡಿ ಕರ್ದಾಳ ಗ್ರಾಮ ರಸ್ತೆ ಹಾಗೂ ಚರಂಡಿ ಕಾಮಗಾರಿಸಮೃದ್ಧಿ ಯೋಜನೆಯಡಿ ಖಮರವಾಡಿ ರಸ್ತೆ ಹಾಗೂ ಚರಂಡಿ ಕಾಮಗಾರಿ
ಸಮೃದ್ಧಿ ಯೋಜನೆಯಡಿ ಹಳ್ಳಕಟ್ಟಾ ರಸ್ತೆ ಹಾಗೂ ಸೇತುವೆ ಕಾಮಗಾರಿಲಡ್ಲಾಪುರ ಗ್ರಾಮದಲ್ಲಿ ಸಮೃದ್ಧಿ ಮತ್ತು ಹನಡಿ ಯೋಜನೆಯಡಿ ರಸ್ತೆ ಕಾಮಗಾರಿಮುಗಳನಾಗಾವ ಗ್ರಾಮದ ಗ್ರಂಥಾಲಯ ಕಟ್ಟಡ ಕಾಮಗಾರಿ
ಈ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಕಳಪೆ ಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಅವಕಾಶ ನೀಡದೆ ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು, ಭೇಟಿ ಸಂದರ್ಭದಲ್ಲಿ ಇಇ ರಜನಿಕಾಂತ್ ಶೃಂಗೇರಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.