Home ಜಿಲ್ಲೆ ಕಲಬುರಗಿ ಮಹಿಳಾ ದೌರ್ಜನ್ಯ ತಡೆಗೆ ಶೂನ್ಯ ಸಹಿಷ್ಣುತೆ ಪೂರಕ

ಮಹಿಳಾ ದೌರ್ಜನ್ಯ ತಡೆಗೆ ಶೂನ್ಯ ಸಹಿಷ್ಣುತೆ ಪೂರಕ

ಕಲಬುರಗಿ :ಫೆ.6: ಶೂನ್ಯ ಸಂಹಿಷ್ಣತೆಯು ತಪ್ಪಿಗೆ ಯಾವುದೇ ಕಾರಣಕ್ಕೂ ಕ್ಷಮಿಸಬಾರದು ಎಂಬುದಾಗಿದೆ. ಹೆಣ್ಣು ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಕೆಲವು ಕುಕೃತ್ಯಗಳನ್ನು ತಡೆಯಲು ಕಾನೂನಿನ ಮೂಲಕ ಶೂನ್ಯ ಸಹಿಷ್ಣುತೆ ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು. ನಗರದ ಖಾದ್ರಿ ಚೌಕದಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಯಿಂದ ಜರುಗಿದ “ಅಂತಾರಾಷ್ಟ್ರೀಯ ಶೂನ್ಯ ಸಂಹಿಷ್ಣುತೆ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು. ಇದು ಯುನಿಸೆಫ್, ಯುಎನ್ ಎಫ್ ಎ ಸಹಯೋಗದಲ್ಲಿ ವಿಶ್ವಸಂಸ್ಥೆ ಆಚರಿಸುವ ದಿನವಾಗಿದೆ. ಸ್ತ್ರೀ ಜನನಾಂಗ ಊನಗೊಳಿಸುವಿಕೆ ಎಂಬ ಹಾನಿಕಾರಕ ಅಭ್ಯಾಸವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಜಾಗೃತಿ ಮೂಡಿಸುವುದು ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.