Home ಜಿಲ್ಲೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಯುವ ಮೋರ್ಚಾ ಮುತ್ತಿಗೆ ಯತ್ನ; ದಿಲ್ಲಿ ಶೃಂಗಸಭೆ ಗದ್ದಲಕ್ಕೆ ಕಿಡಿ

ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಯುವ ಮೋರ್ಚಾ ಮುತ್ತಿಗೆ ಯತ್ನ; ದಿಲ್ಲಿ ಶೃಂಗಸಭೆ ಗದ್ದಲಕ್ಕೆ ಕಿಡಿ

ಬೀದರ್: ಫೆ.೨೩:ಇತ್ತೀಚೆಗೆ ದೆಹಲಿಯಲ್ಲಿ ನಡೆದ ‘ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ’ ಹಿನ್ನೆಲೆಯಲ್ಲಿ ಕೆಲ ರಾಜಕೀಯ ಕಾರ್ಯಕರ್ತರ ವರ್ತನೆಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು.
ನಗರದ ಶಿವನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷರೆಡ್ಡಿ ಆಣದೂರ ನೇತೃತ್ವದಲ್ಲಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುತ್ತ ಕಚೇರಿಗೆ ನುಗ್ಗಲು ಮುಂದಾದ ವೇಳೆ ಪೊಲೀಸರು ತಡೆದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷರೆಡ್ಡಿ ಆಣದೂರ ಮಾತನಾಡಿ, ಎಐ ಶೃಂಗಸಭೆ ಭಾರತಕ್ಕೆ ದೊಡ್ಡ ಗೌರವ ತಂದಿದ್ದು, ಇಡೀ ವಿಶ್ವದ ಗಮನ ಸೆಳೆದಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಎಬ್ಬಿಸಿರುವುದು ನಾಚಿಕೆಗೇಡಿತನ ಎಂದು ಕಿಡಿಕಾರಿದರು.
ಈ ವೇಳೆ ಮಾತನಾಡಿದ ನಗರಾಧ್ಯಕ್ಷ ಶಶಿ ಹೊಸಳ್ಳಿ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿ ದೇಶದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರ ಹೊಂದಿರುವ ಟೀ-ಶರ್ಟ್ ಧರಿಸಿ ಸಭಾಂಗಣದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾರ್ವಜನಿಕ ಶಿಸ್ತನ್ನು ಪಾಲಿಸುವುದು ಅಗತ್ಯವಾಗಿದ್ದು, ದೇಶದ ಪ್ರತಿಷ್ಠೆಯನ್ನು ಗಮನದಲ್ಲಿಟ್ಟು ರಾಜಕೀಯ ಚಟುವಟಿಕೆಗಳು ನಡೆಯಬೇಕು ಎಂದು ಜಿಲ್ಲಾ ಯುವ ಮೋರ್ಚಾ ಅಭಿಪ್ರಾಯಪಟ್ಟಿದೆ. ಈ ಸಂಬAಧ ಸಂಸದ ರಾಹುಲ್ ಗಾಂಧಿ ಸೇರಿದಂತೆ ಸಂಬAಧಿತ ನಾಯಕರಿಗೆ ಜವಾಬ್ದಾರಿಯುತ ನಡೆ ತಾಳುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ರಾಜಕುಮಾರ ಚಿದ್ರಿ, ಸುಭಾಷ ಮಡಿವಾಳ, ಗುಂಡಪ್ಪ ಬುಧೇರಾ, ಚಂದಯ್ಯ ಸ್ವಾಮಿ, ಗಣೇಶ ಭೋಸಲೆ, ರಮೇಶ ಕಲ್ಲೂರ್, ವೀರೇಶ ಸ್ವಾಮಿ, ಬಸವರಾಜ ಬಂಬಳಗಿ, ಸತೀಶ ಶೆಟಗೊಂಡ, ಸಂಗಮೇಶ್ ಪಾಟೀಲ್, ಬಾಲಾಜಿ ಪಾಟೀಲ್, ನಿತಿನ್ ನವಲಕಲೆ, ವಿಜಯಕುಮಾರ ಹೆಗ್ಡೆ, ಶರಣು ಸಿದ್ದವೀರ, ಶಿವಕುಮಾರ ಸುಲ್ತಾನಪುರ, ಸನ್ನಿ ಕುಮಾರ್, ಸಂತೋಷ ಬಿರಾದಾರ, ಆಕಾಶ ಮಮದಾಪುರ, ಸಂಜುಕುಮಾರ ಜೀರ್ಗೆ, ಗೋಪಾಲಕೃಷ್ಣ ಸುಧೀಂದ್ರ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.