Home ಜಿಲ್ಲೆ ಕಲಬುರಗಿ ಯುವಜನತೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿ: ಮಹಾಂತಪ್ಪ ಸಂಗಾವಿ ಕರೆ

ಯುವಜನತೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿ: ಮಹಾಂತಪ್ಪ ಸಂಗಾವಿ ಕರೆ

ಸೇಡಂ ಮೇ,06: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಕೇವಲ ಮೊಬೈಲ್ ಮತ್ತು ಡಿಜಿಟಲ್ ಲೋಕಕ್ಕೆ ಸೀಮಿತವಾಗದೆ, ದೈಹಿಕ ಸದೃಢತೆಗಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಮಾಜಿ ಕಾಡಾ ಅಧ್ಯಕ್ಷರಾದ ಮಹಾಂತಪ್ಪ.ಕೆ.ಸಂಗಾವಿ ಅವರು ಕರೆ ನೀಡಿದರು.ತಾಲೂಕಿನ ಮಳಖೇಡ ಗ್ರಾಮದ ಸೌದಗಾರ ಮೈದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕ್ರಿಕೇಟ್ ಕ್ಲಬ್ ಮಳಖೇಡ ಸೀಸನ್ 03 ಪೈನಲ್ ಪಂದ್ಯದಲ್ಲಿ ಗೇಲುವು ಸಾಧಿಸಿದ ಬ್ಲಾಕ್ ಕ್ಯಾಪ್ಸ್ ತಂಡಕ್ಕೆ ಕಪ್ ಮತ್ತು ಬಹುಮಾನಗಳನ್ನು ವಿತರಿಸಿ ಮಾತನಾಡಿದ ಅವರು ಕ್ರೀಡೆಯು ಕೇವಲ ಗೆಲುವು ಅಥವಾ ಸೋಲಿಗೆ ಸೀಮಿತವಾದದ್ದಲ್ಲ ಅದು ವ್ಯಕ್ತಿಯ ಜೀವನದಲ್ಲಿ ಶಿಸ್ತು, ಸಹನೆ ಮತ್ತು ಸಂಘಟನಾ ಶಕ್ತಿಯನ್ನು ಬೆಳೆಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಈ ವೇಳೆಯಲ್ಲಿ ಗ್ರಾಮದ ಹಿರಿಯ ಮುಖಂಡರಾದ ಬಸವರಾಜ ಮಾಲಿ ಪಾಟೀಲ ಮಳಖೇಡ, ಮಾಜಿ, ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಯಾಣಿ ಮಂಗ, ಆಯೋಜಕರಾದ ಭಗವಾನ್ ಬೋಚಿನ್ ಗ್ರಾಮ ಪಂಚಾಯತಿ ಸದಸ್ಯರಾದ ಅಂಬರೀಶ ಎಂ ಗುಡಿ ಎಮ್ ಡಿ ಅಂಜ್ಜು, ಫಾರೂಕ್ ಅಲ್ಲಮಪುರಿ,ಎಮ್ ಡಿ ಫಯಾಜ್ ಮುಜಾವರ್,ಅಬ್ರಾರ್ ಖಾನ್,ಇಮ್ತಿಯಾಜ್ ಇನಾಮ್ದಾರ್,ಸಿಕಂದರ್ ತಲ್ವಾರ್,ಉದಯ್ ಕುಮಾರ್ ಸಂಗನ್ ದರ್ಶನ್ ತಾಡ್ಪಳ್ಳಿ ಶಿವಕುಮಾರ್ ದಳಪತಿ,ಶರಣು ಕುಮಾರ್ ಬೊಚಿನ್ ಸುಧೀರ್,ಪವನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.