
ಕಲಬುರಗಿ: ಜೂ.೨೯: ಇಂದಿನ ಯುವ ಶಕ್ತಿ ಕಾರಣಾಂತರದಿAದ ಮಾದಕ ವಸ್ತುಗಳ ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿರುವುದು ತುಂಬಾ ವಿಷಾದನೀಯವಾದ ಸಂಗತಿಯಾಗಿದೆ. ಇದು ಜೀವಕ್ಕೆ ಹಾನಿ ಉಂಟು ಮಾಡುವುದರ ಜೊತೆಗೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ. ಇವುಗಳ ಸೇ ವನೆ, ಸಾಗಣೆ, ಮಾರಾಟ ಮಾ ಡುವುದು ಅಪರಾಧವಾಗಿದ್ದು, ಅದರ ಸೇವನೆಯಿಂದಾಗುವ ದು ಷ್ಪರಿಣಾಮಗಳ ಬಗ್ಗೆ ನಿರಂತರ ವಾಗಿ ಜಾಗೃತಿ ಮೂಡಿಸಬೇಕು. ನಿಷೇಧಕ್ಕೆ ಕೇವಲ ಅಔಖಿP-೨೦೨೩, ಕಾಯ್ದೆ-ಕಾನೂನುಗಳ ಮೂಲಕ ಮಾತ್ರ ಸಾಧ್ಯ ವಾಗದೆ, ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಲಹೆಗಾರರು ಸುಜಾತಾ ಪಾಟೀಲ್. ಹೇಳಿದರು.
ಘಟಕ’ದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯುವಕರು ಗಾಂಜಾ, ಭಂಗಿ, ಚರಸ ಮತ್ತು ಮದ್ಯಪಾನ, ಧೂಮಪಾನ ಸೇವನೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸು ತ್ತಿರುವುದು ಶೋಚನೀಯವಾಗಿದೆ. ಮಾದಕ ವಸ್ತು ವ್ಯಸನಿಯುತನ್ನ ಜವಾಬ್ದಾರಿ ಮರೆಯುವುದು, ಅಪಾಯಕಾರಿ ನಿರ್ಧಾರ ಕೈಗೊ ಳ್ಳುವುದು, ಕಾನೂನಿ ಉಲ್ಲಂಘನೆ, ಸಂಬAಧಕ್ಕೆ ಮಹತ್ವ ನೀಡದಿ ರುವುದು ಕಂಡು ಬರುತ್ತದೆ ಎಂದರು.
ಅಫ್ಜಲ್ಪುರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಭುದೇವ ಎಂ. ಎಸ್. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವಕರು ಧೂಮಪಾನ, ಮದ್ಯಪಾನ, ಮಾ ದಕ ವಸ್ತುಗಳ ಸೇವನೆ ಜೀವಕ್ಕೆ ಅಪಾಯಕಾರಿಯೆಂದು ತಿಳಿದಿದ್ದರೂ ಕೂಡಾ ಆ ಚಟಕ್ಕೆ ದಾಸ ರಾಗುತ್ತಿರುವುದು ವಿಷಾದನೀಯ ವಾಗಿದೆ. ಆದ್ದರಿಂದ ಪಾಲಕ ಪೋಷಕರು ಮಕ್ಕಳಿಗೆ ಬಾಲ್ಯದಿಂ ದಲೇ ಉತ್ತಮ ಸಂಸ್ಕಾರ ನೀಡ ಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸರಕಾರಿ ತಾಲೂಕು ಆಸ್ಪತ್ರೆ ಆರ್ ಕೆ ಎಸ್ ಕೆ ಸಮಾಲೋಚಕಿ ಸುಜಾತಾ ಹಿರೇಮಠ್. ಪಾಲಿಟೆಕ್ನಿಕ್ ಕಾಲೇಜಿನ ಪ್ರೊ. ನೀಲಾoಬಿಕಾ ಎನ್. ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.