
ಕೋಲಾರ,ಫೆ.೧೭- ತಾಲೂಕು ವೇಮಗಲ್ ಹೋಬಳಿ ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕದರೀಪುರ ಗ್ರಾಮದ ಪುರಾಣ ಪ್ರಸಿದ್ಧ ಐತಿಹಾಸಿಕ ಶ್ರೀ ಯೋಗ ಲಕ್ಷ್ಮಿ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಪ್ರಯುಕ್ತ ವೇಮಗಲ್ ಹೋಬಳಿ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಕೋಲಾರ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷರಾದ ಸೀತಿ ಹೊಸೂರು ಮುರುಳಿ ಗೌಡ ಅರ್ಥಿಕ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಯುವಕರು ಕ್ರೀಡೆಯಲ್ಲಿ ಆಸಕ್ತಿ ಇಟ್ಟರೆ ಕ್ರಿಕೆಟ್, ಕಬ್ಬಡ್ಡಿ, ವಾಲಿಬಾಲ್, ಆಟಗಳಲ್ಲಿ ಭಾಗವಹಿಸುತ್ತಿದ್ದರೆ ಭವಿಷ್ಯದಲ್ಲಿ ರಾಜ್ಯಕ್ಕೆ ಮತ್ತು ದೇಶಕ್ಕೆ ಉತ್ತಮ ಕ್ರೀಡಾಪಟುಗಳಾಗಿ ಮಾರ್ಪಾಡು ಹೊಂದುತ್ತಿದ್ದರೆ ಇದರಿಂದ ನಿಮ್ಮ ತಂದೆ ತಾಯಿಗಳಿಗೂ ಖುಷಿಯಾಗುತ್ತದೆ ಎಂದು ತಿಳಿಸಿದರು.
ಯುವಕರನ್ನ ದಾರಿ ತಪ್ಪಿಸುವ ಕೆಲಸ: ಚುನಾವಣೆಗಳು ಬಂದಾಗ ಕೆಲವು ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಗ್ರಾಮಗಳಲ್ಲಿ ರಸಮಂಜರಿ ಕಾರ್ಯಕ್ರಮಗಳು ಆಯೋಜನೆ ಮಾಡುತ್ತಾರೆ ಜೊತೆಗೆ ಯುವ ಸಮೂಹಕ್ಕೆ ಮಧ್ಯ ಕುಡಿಸಿ ಆರೋಗ್ಯ ಹಾಳು ಮಾಡುತ್ತಾರೆ ಇಂತಹ ಬೆಳವಣಿಗೆಗಳಿಂದ ಅಭಿವೃದ್ಧಿಯತ್ತ ಕೊಂಡಯ್ಯ ಬೇಕಿದ್ದ ಯುವ ಸಮೂಹವನ್ನು ದಾರಿ ತಪ್ಪಿಸುವ ರಾಜಕಾರಣಿಗಳು ಮಾಡುತ್ತಿದ್ದಾರೆ ಅಂತವರಿಂದ ಯುವ ಸಮೂಹ ದೂರ ಇರಬೇಕು ಎಂದರು.
ಕ್ಯಾಲನೂರು, ಸೀತಿ, ಅಮ್ಮನಲ್ಲೂರು, ಮದ್ದೇರಿ ಗ್ರಾಮ ಪಂಚಾಯಿತಿಯಲ್ಲಿರುವ ಹಳ್ಳಿಯ ಯುವಕರು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಗ್ರಾಮಗಳಿಗೆ ಮತ್ತು ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಬೇಕು ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಮಾಡಲು ನಾನು ಸದಾ ಸಿದ್ಧನಿರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್, ಆನಂದ್ ಕುಮಾರ್, ಹರೀಶ, ದೇವರಾಜ್, ರಮೇಶ್, ಮಧು, ಶಿವಕುಮಾರ್, ದ್ಯಾವಪ್ಪ, ಹಾಗೂ ಕದರಿಪುರ, ದೇವನಹಳ್ಳಿ, ಇರಗಸಂದ್ರ ಯುವಕರು ಹಾಜರಿದ್ದರು.



























