
ಆಳಂದ: ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಎಸ್ಐಆರ್ ಪ್ರಕ್ರಿಯೆ ರದ್ದುಪಡಿಸಬೇಕು ಹಾಗೂ ದೆಹಲಿಗೆ ತೆರಳುವ ವಿದ್ಯಾರ್ಥಿ-ಯುವಜನರ ಮೇಲಿನ ಅಕ್ರಮ ಬಂಧನ ಮತ್ತು ಪೊಲೀಸ್ ದೌರ್ಜನ್ಯ ತಡೆಯಬೇಕು ಎಂದು ಆಗ್ರಹಿಸಿ, ಯುವಜನ ಮತ್ತು ವಿದ್ಯಾರ್ಥಿ ಸಂಘಟನೆಗಳÀ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ರಮೇಶ್ ಲೋಹಾರ, “ಎಸ್ಐಆರ್ ಪ್ರಕ್ರಿಯೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಆತಂಕವಿದೆ. ಫಾರಂ-೭ರ ದುರ್ಬಳಕೆಯಿಂದ ಮತದಾರರ ಹಕ್ಕುಗಳಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಹಿರಿಯ ಹೋರಾಟಗಾರ ಬಸವಲಿಂಗಪ್ಪ ಗಾಯಕ್ವಾಡ ಮಾತನಾಡಿ, ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ತೆರಳುತ್ತಿರುವ ವಿದ್ಯಾರ್ಥಿ-ಯುವಜನರನ್ನು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತಡೆಯಲಾಗುತ್ತಿದೆ. ರೈಲುಗಳನ್ನು ತಡೆದು ವಿದ್ಯಾರ್ಥಿಗಳನ್ನು ಬಂಧಿಸುವ ಮೂಲಕ ಪ್ರತಿಭಟನೆಯ ಮೂಲಭೂತ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು. ಮಹಿಳಾ ಪತ್ರಕರ್ತೆಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬAಧಿಸಿದAತೆ ಎಸಿಪಿ ವಿವೇಕ ಭಗತ್ ಸೇರಿದಂತೆ ಆರೋಪಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್ಐಆರ್ ಪ್ರಕ್ರಿಯೆ ರದ್ದುಪಡಿಸಬೇಕು, ವಿದ್ಯಾರ್ಥಿ-ಯುವಜನರ ಅಕ್ರಮ ಬಂಧನ ಮತ್ತು ರೈಲು ತಡೆ ನಿಲ್ಲಿಸಬೇಕು, ಮಹಿಳಾ ಪತ್ರಕರ್ತೆಯ ಮೇಲಿನ ದೌರ್ಜನ್ಯದ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ಫಾರಂ-೭ರ ದುರ್ಬಳಕೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಪ್ರತಿಭಟನಾಕಾರರು ಬೇಡಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಇಸ್ಮಾಯಿಲ್ ಬಿ ಸನಗುಂದ, ಯೂಸುಫ್ ಸರಸಂಬ, ಯಲ್ಲಪ್ಪ ಹಸುರೆ, ಪ್ರಮೋದ ಎನ್. ಪಂಚಾಳ್, ಸಲ್ಮಾನ್ ಖಾನ್, ಸಿ. ನಗರ, ಸಾನಿಯಾ ಕಣ್ಮೋಸ್, ರೋಹಿಣಿ, ಲಕ್ಷ್ಮಿ, ಸಿದ್ದಾರ್ಥ್ ಹಸೂರೆ, ಸಚಿನ್ ಕಾಬಡೆ, ಮಲ್ಲಿಕಾರ್ಜುನ ಬೋಳಣಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು.





















