
ಸೈದಾಪುರ:ಜ.೧೧:ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಜಾಗೃತಿ ಜಾಥಾ ನಡೆಯುತ್ತಿದ್ದು ಯುವಜನತೆ ಕೈಜೋಡಿಸಬೇಕು, ನಮ್ಮ ನೆಲದಲ್ಲಿ ತಯಾರಾದ ನಮ್ಮವರು ಸಿದ್ಧಪಡಿಸಿದ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ಸ್ವದೇಶಿ ಉತ್ಪನ್ನಗಳ ಮಾರಾಟಕ್ಕೆ ಸಹಕಾರ ನೀಡಬೇಕಿದೆ ಎಂದು ಬಿಗ್ರೇಡಿಯರ್ ರವಿ ಮುನಿಸ್ವಾಮಿ ಅಭಿಪ್ರಾಯಪಟ್ಟರು.
ಶ್ರೀ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಸ್ವದೇಶಿ ಜಾಗೃತಿ ಸೈಕಲ್ ಜಾಥಾ ಬೀದರ, ಕಲಬುರಗಿ, ಯಾದಗಿರಿ ಮೂಲಕ ಸೈದಾಪುರ ಪಟ್ಟಣಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ವದೇಶಿ ಚಿಂತನೆಗಳು ಬೆಳೆದರೆ ಭಾರತೀಯ ಕಲೆಗಾರರು, ತಯಾರಕರು, ರೈತರು, ಸಣ್ಣ ಪಟ್ಟಣಗಳ ಹಾಗೂ ಗ್ರಾಮೀಣ ಭಾಗದ ಉದ್ಯಮಿಗಳು ಬೆಳೆಯುತ್ತಾರೆ, ಜೀವನೋಪಾಯ ಬಲಗೊಳ್ಳಲಿದೆ. ಸ್ಥಳೀಯ ಆರ್ಥಿಕತೆ ಸದೃಢಗೊಂಡು ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದರು.
ಯುವ ಮುಖಂಡ ರಾಜು ದೋರೆ, ಭೀಮಣ್ಣ ಮಡಿವಾಳಕರ್, ಸಿದ್ದು ಪೂಜಾರಿ, ಶಿವುಕುಮಾರ ಹೂಗಾರ್, ಕನ್ನಡಪರ ಹೋರಾಟಗಾರ ವಿರೇಶ ಸಜ್ಜನ್, ಬಸ್ಸು ನಾಯಕ್, ರವೀಂದ್ರ ಕಡೇಚೂರು, ಅಶೋಕ್ ಗಡದ್, ಮಣಿಕಂಠ ನಾಟೇಕರ್, ಮಲ್ಲು ಪೂಜಾರಿ, ಶಾಹಿದ್ ರಾಜ್, ನಾಗರಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಇದ್ದರು.
ಸ್ವದೇಶಿ ವಸ್ತು ಬಳಸಿ ದೇಶ ಬೆಳೆಸಿ, ಅಭಿಯಾನದ ಸೈಕಲ್ ಯಾತ್ರೆಯು ನಿವೃತ್ತ ಯೋಧರು, ಅಧಿಕಾರಿಗಳು ಮತ್ತು ಸಂಘಟನೆಗಳು ಸೇರಿ ಭಾರತೀಯರು ಸ್ವದೇಶಿ ವಸ್ತುಗಳನ್ನೇ ಬಳಸಿ ದೇಶದ ಆರ್ಥಿಕತೆ ಬೆಳೆಸಬೇಕು ಎಂದು ಜಾಗೃತಿ ಮೂಡಿಸಲು ಕರ್ನಾಟಕಾದ್ಯಂತ ಹಮ್ಮಿಕೊಂಡಿರುವ ಇದು ಮಹತ್ವದ ಅಭಿಯಾನವಾಗಿದೆ. ಚಳಿಯಲ್ಲಿಯು ಸುಮಾರು ೭೦ರ ವಯಸ್ಸಿನ ಹಿರಿಯ ನಾಗರಿಕರು ಹಮ್ಮಿಕೊಂಡಿರುವ ಸೈಕಲ್ ಜಾಥ ಅಭಿಯಾನ. ಇಂದಿನ ಯುವಕರಿಗೆ ಮಾದರಿಯಾಗಿದೆ.
ವೆಂಕಟೇಶ.ಜಿ.ಪುರಿ ಅಧ್ಯಕ್ಷರು ಲಾಯನ್ಸ್ ಕ್ಲಬ್ ಸೈದಾಪುರ.
























