ವಿದ್ಯುತ್ ತಂತಿ ತಗುಲಿ ಯುವಕ ಸಾವು

ಜಮಖಂಡಿ:ಅ.9: ನಗರದ ಶಿಕ್ಕಲಗಾರ ಕಾಲೋನಿಯಲ್ಲಿ ವಿದ್ಯುತ್ ತಂತಿ ತಗುಲಿ ಯುವಕ ಮೃತ ಪಟ್ಟಿರುವ ಘಟನೆ ಜರುಗಿದೆ

ಮೃತ ಯುವಕನನ್ನ ದರ್ಶನ ಶಿಕ್ಕಲಗಾರ(20) ಎಂದು ಗುರ್ತಿಸಲಾಗಿದೆ.

ಸ್ಥಳಕ್ಕೆ ಜಮಖಂಡಿ ಶಹರ ಪೆÇೀಲಿಸ್ ಠಾಣೆ ಅಪರಾಧ ವಿಭಾಗದ ಪಿ.ಎಸ್.ಐ ಎನ್.ಕೆ.ಕಾಜಗಾರ,ಸಿಬ್ಬಂದ್ದಿಗಳಾದ ರಾಜು ಶಿಂಘೆ,ಶಿವಾನಂದ ಪಾಟೀಲ,ಐ.ಜಿ.ದಾಶಾಳ,ಭೀಮು ವಾಲಿಕಾರ,ನೇತೃತ್ವದ ಪೆÇೀಲಿಸ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿದಿರು ಬಡಿಗೆ ಹಿಡಿದು ಏನೋ ಕೆಲಸ ಮಾಡಲು ಹೋದಾಗ ದೇವಸ್ಥಾನದ ಮೇಲೆ ಹಾಯ್ದು ಹೋಗಿರುವ ತಂತಿಗಳು ತಗುಲಿ ದುರ್ಘಟನೆ ಜರುಗಿದೆ ಎಂದು ತಿಳಿದುಬಂದಿದೆ.

ಈ ಕಾಲೂನಿಯ ಮನೆಗಳ ಮೇಲೆ ಅಪಾಯಕಾರಿ ವಿದ್ಯುತ್ ಲೈನಗಳು ಹಾದು ಹೋಗಿದ್ದರಿಂದ ಇಲ್ಲಿಯ ಜನರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸುತ್ತಿದ್ದಾರೆ.

ಸಂಬಂದಪಟ್ಟ ಅಧಿಕಾರಿಗಳು ಎಚ್ಚತ್ತುಕೊಂಡು ಮನೆ ಮೇಲೆ ಹಾಯಿದು ಹೋಗಿರುವ ವಿದ್ಯುತ್ ತಂತಿ ತೆರವುಗೊಳಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಕಾಲೊನಿ ನಿವಾಸಿಗಳು ಆಗ್ರಹಿಸಿದ್ದಾರೆ.