
ಬೀದರ:ಮಾ.23:ಇಂದಿನ ತರುಣರು ಮೊಬೈಲ್ ವ್ಯಸನ ಹಾಗೂ ಉದ್ಯೋಗಕ್ಕಾಗಿ ಬೇರೆ ಭಾಷಾ ರಾಜ್ಯಗಳಿಗೆ ವಲಸೆ ಹೋಗುತ್ತಿರುವ ಕಾರಣಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕøತಿಯಿಂದ ದೂರವಾಗುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಎಸ್.ಎಂ. ಜನವಾಡಕರ್ ಕಳವಳ ವ್ಯಕ್ತಪಡಿಸಿದರು.
ನಗರದ ಮೈಲೂರು ಕ್ರಾಸ್ ಸಮೀಪದ ಮಹಾಲಕ್ಷ್ಮೀ ಸಭಾಂಗಣದಲ್ಲಿ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಂ.ಜಿ. ದೇಶಪಾಂಡೆ ಹಾಗೂ ಕುಮಾರಿ ಪ್ರಿಯದರ್ಶಿನಿಯವರ ಜನ್ಮದಿನದ ಅಂಗವಾಗಿ ಮೂರು ಗ್ರಂಥಗಳ ಲೋಕಾರ್ಪಣೆ, ಕವಿಗೋಷ್ಠಿ, ಸಂಗೀತ, ಹಾಸ್ಯ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಈ ಮಾತುಗಳನ್ನಾಡಿದರು.
ಹಿರಿಯರು ಕೇವಲ ಪುಸ್ತಕ ಪ್ರಕಟಿಸುವುದರಿಂದ ಸಾಲದು, ಯುವಕರನ್ನು ಮತ್ತೆ ಕನ್ನಡ ಹಾಗೂ ಸಂಸ್ಕೃತಿಯತ್ತ ಕರೆತರಲು ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು. ಕನ್ನಡ ಉಳಿಸಿ ಬೆಳೆಸಿದ ಹಿರಿಯರ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ ಇಂದಿನ ಯುವಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಎನ್.ಬಿ. ರೆಡ್ಡಿ ಸದ್ಗುರುಜಿಯವರು ಮೂರು ಗ್ರಂಥಗಳನ್ನು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ಡಾ. ಶ್ರೇಯಾ ಮಹೇಂದ್ರಕರ್ ಸಾಹಿತ್ಯವು ಸಂಸ್ಕೃತಿಯ ಪ್ರತೀಕವಾಗಿದ್ದು, ಸಮಾಜದ ಆರೋಗ್ಯಕ್ಕೆ ಸಂದೇಶ ನೀಡಬೇಕು ಎಂದು ಹೇಳಿದರು. ವಿಶ್ರಾಂತ ಪ್ರಾಧ್ಯಾಪಕರಾದ ಶಿವಕುಮಾರ್ ಅವರು ‘ಸಂತ ಗೋರ ಕುಂಬಾರ’ ಗ್ರಂಥವನ್ನು ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವ್ ಕುಮಾರ್ ಅತಿವಾಳೆ ಅವರು ಕವಿಗಳು ಜವಾಬ್ದಾರಿಯಿಂದ ಕವಿತೆಗಳನ್ನು ಬರೆಯಬೇಕು ಹಾಗೂ ಸಮಾಜದ ಬೆಳವಣಿಗೆಗೆ ಪೂರಕವಾಗಬೇಕು ಎಂದು ಸಲಹೆ ನೀಡಿದರು. ಪ್ರಕಾಶ ಕುಲಕರ್ಣಿ ಮುಗನೂರ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀ ಕಲ್ಯಾಣರಾವ್ ಮದರ್ಗಾವ, ಶಿವರಾಜ್ ಕಾಳಶೆಟ್ಟಿ, ಎಂ.ಜಿ. ದೇಶಪಾಂಡೆ ಅವರು ಗೌರವ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೂಜ್ಯ ಕಿರಣ್ ಮಹಾರಾಜ್, ಅಂಕಿತಾ ಮಹೇಶ ಬಚ್ಚಣ್ಣಾ, ನಿಜಲಿಂಗಪ್ಪ ತಗಾರೆ, ಅರವಿಂದ ಕುಲಕರ್ಣಿ, ವೀರಭದ್ರಪ್ಪ ಉಪ್ಪಿನ, ಶ್ರೀಕಾಂತ ಪಾಟೀಲ, ಹಣ್ಮು ಪಾಜಿ, ಸುಬ್ಬಣ್ಣ ಕರಕನಳ್ಳಿ, ಡಾ. ರಘುಶಂಖ ಭಾತಂಬ್ರಾ ದಂಪತಿಗಳು, ಬಿ.ಎಂ. ಶಶಿಕಲಾ, ಕಾಶಿನಾಥ ಪೆÇೀಸ್ತೆ, ನಿಜಲಿಂಗ ರಗಟೆ, ಗೌರಮ್ಮ ನಿಟ್ಟೂರ, ಮಾಣಿಕ ನೇಳಗೆ, ರಮೇಶ್ ಬಿರಾದರ್, ಗುರುಸಿದ್ದಪ್ಪ ಬಿರಾದರ್ ಸೇರಿದಂತೆ ಅನೇಕ ಗಣ್ಯರಿಗೆ ಸನ್ಮಾನಿಸಲಾಯಿತು.
ಚನ್ನಮ್ಮವಲ್ಲೇ ಪುರೆ, ವಿದ್ಯಾವತಿ ಹಿರೇಮಠ, ಮಹೇಶ್ವರಿ ಹೇಡೆ, ಪ್ರೇಮ ಅವಿನಾಶ್, ಎಸ್.ಬಿ. ಕುಚಬಾಳ, ಶಿವಲಿಂಗ ಹೇಡೆ ಸೇರಿದಂತೆ ಕವಿ-ಕವಯತ್ರಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಮಲ್ಲಿಕಾರ್ಜುನ ರಾಂಪುರೆ ಚಿಕ್ಪೇಟ, ಚಂದ್ರಕಾಂತ್ ಪೂಜಾರಿ, ಗಂಗಮ್ಮ, ಕರಬಸಪ್ಪ, ಹಾವಗಿರಾವ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಅಂಬಿಕಾ ಮತ್ತು ರಮ್ಯಾ ಅವರು ನಾಡಗೀತೆ ಹಾಡಿದರು. ಕುಮಾರಿ ಆಸ್ತಾ ಬಚ್ಚಣ್ಣ ನೃತ್ಯ ಪ್ರದರ್ಶಿಸಿದರು. ಬಾಬುರಾವ ಗೊಂಡಾ ಸ್ವಾಗತಿಸಿದರು, ಯೋಗೇಂದ್ರ ಯದಲಾಪೂರೆ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಗಂಗಾಧರ ತಡಕಲ್, ಬಸವರಾಜ ನಿಟ್ಟೂರೆ, ಚಂದ್ರಕಲಾ ಸೇರಿದಂತೆ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಗಣ್ಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಿಲ್ಪಾ ಮಜಗೆ ವಂದನೆ ಸಲ್ಲಿಸಿದರು.




















