ಯುವ ಜನಾಂಗ ದುಶ್ಚಟಗಳಿಗೆ ದಾಸರಾಗದಿರಿ: ಫಕೀರಪ್ಪ ದೊಡ್ಡಮನಿ

ಕಲಬುರಗಿ,ಜ.18-ಯುವ ಜನಾಂಗ ಯಾವುದೇ ಮಷ್ಟಟಗಳಿಗೆ ದಾಸರಾಗಬಾರದು ಎಂದು ಫಕೀರಪ್ಪ ದೊಡ್ಡಮನಿ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮದ ಜನರಿಗೆ ಕಿವಿಮಾತು ಹೇಳಿದರು.
ತಂಬಾಕಿನಲ್ಲಿ ನಿಕೋಟಿನ್ ಅಂಶವಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶ್ವಾಸಕೋಶಕ್ಕೆ ಹಾನಿಯುಂಟಾಗುವ ಕಾರಣದಿಂದ ತಂಬಾಕು ಸೇವನೆಯನ್ನು ಮಾಡಬಾರದು ಎಂದರು.
ಚಿತ್ತಾಪುರ ತಾಲೂಕಿನ ಹುಳಂಡಗೇರ ಗ್ರಾಮದಲ್ಲಿ ನಡೆದ ಶ್ರೀ ಗುರು ಅಯ್ಯಳಲಿಂಗೇಶ್ವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಅವರು ತಂಬಾಕು ಸೇವನೆಯಿಂದ ಆಗುವ ದುಷ್ಟಪರಿಣಾಮ ಕುರಿತು ಗ್ರಾಮದ ಯುವ ಜನಾಂಗದವರಿಗೆ ತಿಳುವಳಿಕೆ ನೀಡಿ ತಂಬಾಕು ಮುಕ್ತ ಗ್ರಾಮ ಮಾಡೋಣ ಎಂದು ಹೇಳಿದರು.
ಜೆಸ್ಕಾಂ ಮಾಜಿ ನಿರ್ದೇಶಕ ಗೋಪಿಕೃಷ್ಣ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಾಗೆ ಮಲ್ಲೇಶಿ ಬೇನಳ್ಳಿ ವೇದಿಕೆ ಮೇಲೆ ಇದ್ದರು. ನಂತರ ಸಂಜೆ ಗ್ರಾಮದ ಮಕ್ಕಳಿಗೆ ನೋಟ್ ಬುಕ್, ಪೆನ್‍ಗಳನ್ನು ನೀಡಿ ಉತ್ತಮ ಭವಿಷ್ಯ ರೂಪಿಸಿಕೋಳ್ಳಲು ಸಲಹೆ ನೀಡಿದರು. ಹಾಗೆ ಮಕ್ಕಳಯಿಂದ ಮನೋರಂಜನೆ ಕಾರ್ಯಕ್ರಮ ಡ್ಯಾನ್ಸ್, ಕೀರು ನಾಟಕ ಪ್ರದರ್ಶನ ನಡೆದವು. ಕಾರ್ಯಕ್ರಮಗಳು ಗ್ರಾಮದ ಜನರು ಮತ್ತು ಮಕ್ಕಳಿಗೆ ಮನೋರಂಜನೆ ನೀಡಿದವು. ಕಾರ್ಯಕ್ರಮದಲ್ಲಿ ಹುಳಂಡಗೇರಾ ಗ್ರಾಮಸ್ಥರು ಉಪಸ್ಥಿತರಿದ್ದರು.