
ಕಲಬುರಗಿ,ಮೇ.19-ಬೈಕ್ ಸಮೇತ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ನಗರದ ಚಿತ್ತಾರಿ ಅಡ್ಡ ಹತ್ತಿರ ನಡೆದಿದೆ.
ನಗರದ ಹಳೆ ಜೇವರ್ಗಿ ರಸ್ತೆಯ ಈಶ್ವರ ನಗರದ ಗಾಬ್ರೆ ಲೇಔಟ್‍ನ ನಿವಾಸಿ ಅರುಣಕುಮಾರ ತಂದೆ ಶಂಕರ ನಿಂಗನೂರ ಮೃತಪಟ್ಟ ಯುವಕ.
ಅರುಣಕುಮಾರ ನಗರದ ಜೇವರ್ಗಿ ಕ್ರಾಸ್ ಕಡೆಯಿಂದ ರಾಮ ಮಂದಿರ ಕಡೆಗೆ ಬೈಕ್ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಎಡ-ಬಲ ಕಟ್ ಹೊಡೆಯುತ್ತ ಹೋಗಿ ಬೈಕ್ ನಿಯಂತ್ರಿಸಲು ಆಗದೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಮೃತನ ತಾಯಿ ಸುಮಿತ್ರಾ ನಿಂಗನೂರ ಅವರು ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.